Ballari; ಜನಾರ್ದನ ರೆಡ್ಡಿ ಆಪ್ತ ಮತ್ತು ಸಚಿವರ ಬೆಂಬಲಿಗರ ವಾಟ್ಸಾಪ್ ಕಿತ್ತಾಟ
- ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರ
- ಶಾಸಕ ಸಚಿವರ ಬೆಂಬಲಿಗರ ವಾಟ್ಸಾಪ್ ಕಿತ್ತಾಟ
- ಚುನಾವಣೆ ಇನ್ನೊಂದು ವರ್ಷ ಬಾಕಿ ಇರೋವಾಗಲೆ ಕಿತ್ತಾಟ
- ಜನಾರ್ದನ ರೆಡ್ಡಿ ಆಪ್ತ ಅಲಿಖಾನ್, ಶಾಸಕ ನಾಗೇಂದ್ರ ಆಪ್ತ ಕನಕ ಮಧ್ಯೆ ವಾರ್
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಜು.2) : ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಈ ಬಾರಿ ಹೈವೊಲ್ಟೇಜ್ ಕ್ಷೇತ್ರವಾಗೋದು ಪಕ್ಕಾ.. ಯಾಕಂದ್ರೇ ಈ ಬಾರಿ ಸಚಿವ ಶ್ರೀರಾಮುಲು ಇಲ್ಲಿಂದಲೇ ಸ್ಪರ್ಧೆ ಮಾಡ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಶ್ರೀರಾಮುಲು vs ನಾಗೇಂದ್ರ ಸ್ಪರ್ಧೆ ಮಾಡೋದು ಖಚಿತವಾಗುತ್ತಿದ್ದಂತೆ ಅಭಿಮಾನಿಗಳ ಮಧ್ಯೆ ಈಗಿನಿಂದಲೆ ಟಾಕ್ ವಾರ್ ಪ್ರಾರಂಭವಾಗಿದೆ. ಇನ್ನೂ ಸಾಮಾನ್ಯ ಕಾರ್ಯಕರ್ತರು ಅವರವರ ಪರ ಮಾತನಾಡೋದು ಇಂದಿನ ದಿನಗಳಲ್ಲಿ ಕಾಮನ್.. ಆದ್ರೇ, ಇಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರೋ ಮತ್ತು ತೀರ ಆಪ್ತರ ಮಧ್ಯೆ ವಾಗ್ಯೂದ್ದ ನಡೆದಿದೆ.
ಜನಾರ್ದನ ರೆಡ್ಡಿ ಆಪ್ತ ಅಕ್ರಮ ಗಣಿಗಾರಿಕೆ ರೂವಾರಿ ಅಲಿಖಾನ್ ಮತ್ತು ಶಾಸಕ ನಾಗೇಂದ್ರ ಆಪ್ತ ಕನಕ ಇಬ್ಬರು ವಾಟ್ಸಾಪ್ ಗ್ರೂಪ್ವೊಂದರಲ್ಲಿ ತಮ್ಮ ತಮ್ಮ ನಾಯಕರ ಪರ ಮಾತನಾಡೋ ಭರದಲ್ಲಿ ಒಬ್ಬರನ್ನೊಬ್ಬರ ಕಾಲೇಳೆಯೋ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಿಂದ ಆರಂಬವಾದ ಕಿತ್ತಾಟ ವಯಕ್ತಿಕ ಟಿಕೆವರೆಗೂ ಹೋಗಿದ್ದು, ಗ್ರೂಪ್ ನಲ್ಲಿದ್ದ ಇತರೆ ಮುಖಂಡರಿಗೆ ಮುಜುಗರ ಮಾಡಿದೆ. ಅಲ್ಲದೇ ಇದೇ ಕಾರಣಕ್ಕೆ ಎಸ್ಪಿ ಕೂಡ ಗ್ರೂಪ್ನಿಂದ ಹೊರನಡೆದಿರೋ ಘಟನೆಯೂ ನಡೆದಿದೆ.
BALLARI; ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ನಡೆಯುತ್ತಿರೋ ಹೋರಾಟದ ವೇಳೆ ಗಲಾಟೆ
ಚುನಾವಣೆ ಘೋಷಣೆಗೂ ಮುನ್ನವೇ ಕಾದಾಟ: ಚುನಾವಣೆ ಇನ್ನು ಒಂದು ವರ್ಷ ಬಾಕಿ ಇರೋವಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೆಸರೆರಚಾಟ ಜೋರಾಗಿದೆ. ಖಾಸಗಿ ವಾಟ್ಸಾಪ್ ಗ್ರೂಪ್ವೊಂದರಲ್ಲಿ ಮೊದಲಿಗೆ ಶಾಸಕ ನಾಗೇಂದ್ರ ಆಪ್ತ ಕನಕ ಎನ್ನುವವರು ತಮ್ಮ ಶಾಸಕರ ಅಭಿವೃದ್ಧಿ ಕಾರ್ಯಕ್ರಮದ ಪೋಟೋ ಒಂದಷ್ಟು ಸಂದೇಶ ಹಾಕಿದ್ದಾರೆ. ಅದಕ್ಕೆ ಜನಾರ್ದನ ರೆಡ್ಡಿ ಪರಮಾಪ್ತ ಅಕ್ರಮಗಣಿಗಾರಿಕೆ ರೂವಾರಿ ಅಲಿಖಾನ್ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಅಲ್ಲಿಂದ ಆರಂಭವಾದ ವಾಗ್ವಾದ ನಾಲ್ಕಾರು ಗಂಟೆಗಳ ಕಾಲ ಪರಸ್ಪರ ವಾಟ್ಸಾಪ್ ಕೆಸರೆರಚಾಟ ಮಾಡಿಕೊಂಡಿದ್ದಾರೆ.
ಪರಸ್ಪರ ಕರೆದುಕೊಂಡಿರೋ ಕೆಲ ಅಂಶಗಳು ಈ ರೀತಿಯಲ್ಲಿವೆ.
- ಶಾಸಕ ನಾಗೇಂದ್ರ ಅವರ ಗೌರವಕ್ಕೆ ಕುಂದು ತರುವ ಹುನ್ನಾರ ಬಿಜೆಪಿ ಬಂಬಲಿಗರಿಂದ ನಡೆದಿದೆ ಎಂಬುದು ಕಾಂಗ್ರೆಸ್ ಬೆಂಬಲಿಗರ ಆರೋಪ.
- ಕ್ಷೇತ್ರದಲ್ಲಿ ನಾಗೇಂದ್ರ ಅವರು ಏನೆಂಬುದು ಮತ್ತು ಇದೇ ಕ್ಷೇತ್ರದಿಂದ ಹಲವು ಬಾರಿ ಶಾಸಕರು, ಸಚಿವರಾಗಿರುವ ಶ್ರೀರಾಮುಲು ಅವರು ಏನೆಂಬುದು ಕೂಡ ಜನರಿಗೆ ಗೊತ್ತಿದೆ.
- ಚುನಾವಣಾ ಪೂರ್ವದಲ್ಲಿ ಕ್ಷೇತ್ರದಲ್ಲಿ ಶ್ರೀರಾಮುಲು ಪ್ರಬಲರಾಗಿದ್ರು. ಇದೀಗ ಅವರಂತೆ ಶಾಸಕ ನಾಗೇಂದ್ರ ಕೂಡ ಬಲಿಷ್ಠರಾಗಿದ್ದಾರೆ.
- ನಾಗೇಂದ್ರ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಬಿಜೆಪಿ ಬೆಂಬಲಿಗರಿಂದ ನಡೆದಿದೆ.
- ನಾಗೇಂದ್ರ ಅವರ ಗೌರವ ಧಕ್ಕೆ ತರಿಸಲೆಂದೇ ಕುಮ್ಮಕ್ಕು ನೀಡಿ ಕಾಂಗ್ರೆಸ್ ಮುಖಂಡನಿಂದಲೇ ಗ್ರಾಮ ವಾಸ್ತವ್ಯ ಮಾಡಿಸಿದ್ದಾರೆ..
- ಬಿಜೆಪಿಯವರ ಹುನ್ನಾರ ಗೊತ್ತಾಗಲ್ಲವೇ ಇದು 40ಪರ್ಸೆಂಟ್ ಸರ್ಕಾರ ಎಂಬುದು ನಾಗೇಂದ್ರ ಅವರ ಬೆಂಬಲಿಗರ ಆರೋಪವಾಗಿದೆ..
- ನಾಗೇಂದ್ರ ಅವರು ಮೇಯರ್ ಮಾಡಲು 3.5 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ.
- 40% ಕಮೀಷನ್ ತೆಗೆದು ಕೊಳ್ಳುವುದು ಬಿಜೆಪಿಯವರು ಅದರಿಂದ ಕುದುರೆ ವ್ಯಾಪಾರ ಮಾಡುವುದಾಗಿದೆ.
ಬಿಜೆಪಿಯಿಂದ ಬೆದರಿಕೆ, ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ರೋಷಾವೇಷ
ಗಣ್ಯಾತಿಗಣ್ಯರಿರೋ ಗ್ರೂಪ್ ನಲ್ಲಿ ಸಾಕಷ್ಟು ಮುಜುಗರ
ಇನ್ನೂ ಈ ಗ್ರೂಪ್ ನಲ್ಲಿ ಸರ್ಕಾರಿ ನೌಕರರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ವ್ಯಕ್ತಿಗಳು ಇದ್ದಾರೆ. ಹೀಗಿದ್ರೂ ಪರಸ್ಪರ ಕೆಸರೆರಚಾಟ ಮಾಡಿಕೊಂಡಿರೋದು ಒಂದಷ್ಟು ಜನನರಿಗೆ ಇರುಸುಮುರುಸಾಗಿದ್ದಂತೂ ಸತ್ಯವಾಗಿದೆ. ಇನ್ನೂ ಇದೆಲ್ಲವುದನ್ನು ನೋಡಿದ ಎಸ್ಪಿ ಸೈಡುಲ್ ಅಡಾವತ್ ಅವರು ಗ್ರೂಪ್ ನಿಂದ ಲೆಪ್ಟ್ ಆಗಿರೋದು ಕೂಡ ವಿಶೇಷವಾಗಿದೆ.. ಒಟ್ಟಿನಲ್ಲಿ ಈ ರೀತಿ ಕೆಸರೆರೆಚಾಟ ಇನ್ನು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಿದೆ