ಬೆಂಗಳೂರು(ಜು.  16)  ಕರೋನಾ ಉಸ್ತುವಾರಿ ಹೊತ್ತಿರುವ  ಕಂದಾಯ ಸಚಿವ ಆರ್ ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯ , ಶಾಸಕಿ ಸೌಮ್ಯಾ ರಾಮಲಿಂಗಾರೆಡ್ಡಿ ಜಂಟಿ  ಸುದ್ದಿಗೋಷ್ಠಿ ನಡೆಸಿ ಅನೇಕ ವಿವರಗಳನ್ನು ನೀಡಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಪ್ರಮುಖ ಸಭೆ ಕರೆಯಲಾಗಿತ್ತು.  ಸೋಮವಾರ ಮತ್ತೆ ಈ ವಲಯದ ಕಾರ್ಪೊರೇಟರ್ ಗಳ ಸಭೆ ಕರೆಯುತ್ತೇವೆ. ಶೇ.  50 ಬೆಡ್ ಕೊಡಲೇ ಬೇಕು ಎಂದು  ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಕೊರೋನಾಕ್ಕೆ ಮದ್ದು ಕೊಡಲು ಭಾರತದಿಂದ ಮಾತ್ರ ಸಾಧ್ಯ

ಪ್ರತಿ ಆಸ್ಪತ್ರೆಗೆ ನಮ್ಮ ನೋಡಲ್ ಅಧಿಕಾರಿ ಇರ್ತಾರೆ. ಕೆಲವು ಕಡೆ ನರ್ಸ್ ಗಳು ಗೈರಾಗುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಡ್ಡಾಯವಾಗಿ ಅವರು ಹಾಜರಾಗಲೇಬೇಕು. ಡಿಸಾಸ್ಟರ್ ಆಕ್ಟ್ ಅಡಿ ಕೋವಿಡ್ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗದೇ ತಪ್ಪಿಸಿಕೊಂಡು ಓಡಿ ಹೋದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ನರ್ಸ್, ಡಾಕ್ಟರ್ ಗಳು ಕರ್ತವ್ಯ ಪ್ರಜ್ಞೆ ಮೆರೆಯಲೇಬೇಕು. ಈ ಬಗ್ಗೆ ಡಿಸಿಪಿಗೂ ತಿಳಿಸಿದ್ದೇನೆ. ಕರ್ತವ್ಯದಿಂದ ತಪ್ಪಿಸಿಕೊಂಡವರನ್ನು ಟ್ರ್ಯಾಕ್ ಮಾಡುತ್ತೇವೆ ಎಂದು ಎಚ್ಚರಿಸಿದರು.

ಆಸ್ಪತ್ರೆಗಳ ನರ್ಸ್ ಡಾಕ್ಟರ್ ಗಳು ಒಂದು ವಾರ  ಕೆಲಸ ಮಾಡಿದರೆ ಒಂದು ವಾರ ಕ್ವಾರೆಂಟೇನ್ ನಲ್ಲಿ ಇರಬೇಕಾಗುತ್ತೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡೋರು ಮನೆಗೆ ಹೋಗೋಕೆ ಆಗಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗಳಿಗೆ ಹತ್ತಿರ ಇರುವ ಹೋಟೆಲ್ ಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗುತ್ತಿದೆ.  ಸರ್ಕಾರದಿಂದ ರಿಯಾಯಿತಿ ದರದಲ್ಲಿ ಹೋಟೆಲ್ ಗಳಲ್ಲಿ ಉಳಿಯಲು ವೈದ್ಯಕೀಯ ಸಿಬ್ಬಂದಿಗೆ ವ್ಯವಸ್ಥೆ ‌ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಸಚಿವರು, 44 ವಾರ್ಡ್ ಹಾಗೂ 6 ವಿಧಾನಸಭೆ ಕ್ಷೇತ್ರದ ಕುರಿತು ಸಭೆ ನಡೆಸಿದ್ದೇವೆ.  ಇನ್ನು ಸೋಮುವಾರ 46 ಕಾರ್ಪೊರೇಟ್ ಸಭೆ ಇದೆ . ಖಾಸಗಿ ಆಸ್ಪತ್ರೆಗಳು ಕೊರೊನಾ ಪಾಸಿಟಿವ್ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಒಂದು ವೇಳೆ ಆಸ್ಪತ್ರೆ ಇದನ್ನು ನಿರಾಕರಿಸಿದ್ರೆ ಅಂತಹ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಕೊರೋನಾ ಕಂಡು ಹಿಡಿಯುವ ಮೂರು ವಿಧಾನಗಳನ್ನು ತಿಳಿದುಕೊಳ್ಳಿ

ಕೊರೋನಾ ರೋಗಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಹಾಗೂ ನರ್ಸ್ ಗಳಿಗೆ  ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಕೆಲವೊಂದು ಆಸ್ಪತ್ರೆಯ ಡಾಕ್ಟರ್ ಗಳು ಚಿಕಿತ್ಸೆ ನೀಡದೆ ಓಡಿ ಹೋಗಿದ್ದಾರೆ.  ಯಾವುದೇ ಕೋಡ್ ನಂಬರ್ ತಗೊಬನ್ನಿ ಅನ್ನುವ ಹಾಗೆ ಇಲ್ಲ. ಅಡ್ಮಿಟ್ ಮಾಡಿಕೊಂಡೇ ನಂತರ ಕಾರ್ಪೊರೇಶನ್ ಗೆ ತಿಳಿಸಬೇಕು. ಈ ಬಗ್ಗೆ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.

ಆಸ್ಪತ್ರೆ ಡಾಕ್ಟರ್ಸ್ ಗಳು ಒಂದು ಸಮಸ್ಯೆ ಹೇಳಿದ್ದಾರೆ. ನಾವು 7 ದಿನ ಕೆಲಸ ಮಾಡಿದ್ರೆ,  7 ದಿನ ಕ್ವಾರಂಟೈನ್ ನಲ್ಲಿ‌ ಇರಬೇಕು. ಇಂತಹ ಸಮಯದಲ್ಲಿ ನಮ್ಗೆ ಮನೆಗೆ  ಹೋಗೊಕ್ಕೆ ಆಗ್ತಿಲ್ಲ.

ಭೂ ಸುಧಾರಣಾ ಕಾಯಿದೆ ರೈತ ವಿರೋಧಿ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಅಶೋಕ್ ಪ್ರತಿಕ್ರಿಯೆ ನೀಡಿ, ಇಡೀ ದೇಶದಲ್ಲಿ ಎಲ್ಲೂ ಈ ಕಾಯಿದೆ ಇಲ್ಲ ಅಂದರೆ, ಅವರು ದಡ್ಡರು ನಾವು ಬುದ್ದಿವಂತರಾ? ಅಗ್ರಿಕಲ್ಚರಲ್ ಎಕ್ಸಪೋರ್ಟ್ ಮಾಡೋದ್ರಲ್ಲಿ ನಾವು ಹಿಂದುಳಿದಿದ್ದೇವೆ. ತಮಿಳುನಾಡು, ಮಹಾರಾಷ್ಟ್ರ ಮುಂದೆ ಇದೆ. ನಮಗಿಂತ  ಅನ್ಯ ರಾಜ್ಯಗಳು  ಕೃಷಿ ಉತ್ಪನ್ನ ಹೆಚ್ಚಿನ  ರಫ್ತು ಮಾಡುತ್ತಾರೆ. ಹೀಗಾಗಿ ಈ ಕಾಯಿದೆ ಜಾರಿಗೆ ತಂದಿದ್ದೇವೆ ಎಂದು ತಿರುಗೇಟು ನೀಡಿದ್ದರು.

ಮಾಜಿ ಸಿಎಂ ದೇವರಾಜ ಅರಸು ಕಾಂಗ್ರೆಸ್ ನವರು. ಕಾಂಗ್ರೆಸ್ ನವರು ತಂದ ಕಾಯಿದೆ ಬದಲಿಸಬಾರದು ಅನ್ನೋದು ಸಿದ್ದರಾಮಯ್ಯ ಉದ್ದೇಶ. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ  ಬದಲಾವಣೆ ಆಗಬೇಕಿದೆ ವಿದ್ಯಾವಂತರು ಕೃಷಿ ಕಡೆ ಬರಬೇಕು ಅನ್ನೋ ಉದ್ದೇಶದಿಂದ ಈ ತಿದ್ದುಪಡಿ ತಂದಿದ್ದೇವೆ ಎಂದರು.

ಭೂ ಸುಧಾರಣೆ ಕಾಯಿದೆ ಎಂದರೇನು?

ಸಿದ್ದರಾಮಯ್ಯ ನಿಜವಾಗಲೂ ಮಲ್ಕೊಂಡಿದ್ರೆ ನಾನು ಅವರನ್ನು ಎಬ್ಬಿಸುತ್ತೇವೆ. ಆದರೆ ಮಲ್ಕೊಂಡಿರೋರ್ ತರ ನಾಟಕ ಮಾಡೋರನ್ನ ಎಂದಿಗೂ ಎಬ್ಬಿಸೋಕೆ ಆಗಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಡಿಸಿದ ಅಶೋಕ್, ನಿಮ್ಮ ಸರ್ಕಾರ ಇದ್ದಾಗ ಎಷ್ಟು ಜಮೀನು ವಶಕ್ಕೆ ತಗೊಂಡಿದ್ದಿರಿ? ಹಣ ವಸೂಲಿಗೆ ಮಾತ್ರ ಈ ಭೂ ಸುಧಾರಣಾ ಕಾಯಿದೆ ಇತ್ತು. ನೂರ್ ಎಕರೆನಾದರೂ  ವಶಕ್ಕೆ ತಗೊಂಡಿದ್ದಾರಾ? ಕೇಸ್ ಹಾಕಿ ಬರಿ ವಸೂಲಿ ಮಾಡೋದಷ್ಟೆ ಆಯ್ತು.. ಹೀಗಾಗಿ ಅಧಿಕಾರಿಗಳ ಶೋಷಣೆಗೆ ಬ್ರೇಕ್ ಹಾಕಲು ಈ ಕಾಯಿದೆ ತಂದಿದ್ದೇವೆ ಎಂದರು.

ಸಿದ್ದರಾಮಯ್ಯ ಹೇಳೋದು ನೋಡಿದರೆ ಕಾಯಿದೆ ತೆಗೆದುಹಾಕಿರೋ ತಮಿಳುನಾಡು, ಆಂಧ್ರ ಮುಳುಗಿ ಹೋಗಿಬಿಡಬೇಕಿತ್ತು. ಇಷ್ಟು ವರ್ಷ ಆಡಳಿತ ಮಾಡಿದವರು ಸರ್ಕಾರಕ್ಕೆ ಎಷ್ಟು ಆದಾಯ ತಂದಿದ್ದೀರಿ ಎಂದು ಪ್ರಶ್ನೆ ಮಾಡಿದರು.