Asianet Suvarna News Asianet Suvarna News

Panchamasali Reservation: 2ಎ ಮೀಸಲಾತಿ ನೀಡದಿದ್ರೆ ಮತ್ತಷ್ಟು ಉಗ್ರ ಹೋರಾಟ: ಕೂಡಲ ಶ್ರೀ

*   ಪಂಚಮಸಾಲಿ ಜನಾಂಗಕ್ಕೆ ಸರ್ಕಾರ 2ಎ ಮೀಸಲಾತಿ ನೀಡಲಿ
*   ಮೀಸಲಾತಿ ದೊರಕಿಸಿ ಕೊಡುತ್ತೇನೆ ಎಂಬ ಭರವಸೆ ನೀಡಿದ ಸಿಎಂ ಬೊಮ್ಮಾಯಿ
*   ಹೋರಾಟ ಮುಂದುವರಿಸುವ ಎಲ್ಲ ಬಗೆಯ ಸಿದ್ಧತೆ 
 

Fierce Fight for If Not Give 2A Reservation to Panchamasali Says Jayamrutunjaya Swamiji grg
Author
Bengaluru, First Published Dec 6, 2021, 12:09 PM IST

ಕೊಟ್ಟೂರು(ಡಿ.06):  ಪಂಚಮಸಾಲಿ(Panchamasali) ಜನಾಂಗಕ್ಕೆ ಸರ್ಕಾರ 2ಎ ಮೀಸಲಾತಿ(2A Reservation) ಸೌಲಭ್ಯ ನೀಡುವ ನಿರ್ಧಾರವನ್ನು ಜನವರಿ 14ರೊಳಗೆ ಘೋಷಿಸುವ ನಿರೀಕ್ಷೆ ಹೊಂದಿದ್ದೇವೆ. ಒಂದೊಮ್ಮೆ ಸರ್ಕಾರ ಅನಗತ್ಯ ಕಾರಣದಿಂದ ವಿಳಂಬ ಮಾಡಿದರೆ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳುವುದು ನಿಶ್ಚಿತ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು(Jayamrutunjaya Swamiji) ಹೇಳಿದ್ದಾರೆ. 

ಬುಧವಾರ ಕೊಟ್ಟೂರಿನ ಬ್ಯಾಂಕರ್‌ ಅಂಗಡಿ ಪಂಪಾಪತಿಯವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಅಧಿಕಾರ ವಹಿಸಿಕೊಂಡ ನಂತರ ಪಂಚಮಸಾಲಿ ಜನಾಂಗದ ಮುಖಂಡರು ಮತ್ತು ತಮ್ಮನ್ನು ಕರೆಯಿಸಿಕೊಂಡು ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಖಚಿತತೆ ವ್ಯಕ್ತಪಡಿಸಿ ಕೆಲ ಸಮಯ ನೀಡುವಂತೆ ಕೇಳಿದ್ದರು. ಇದರ ಜೊತೆಗೆ ಹಿಂದುಳಿದ ವರ್ಗಗಳ ಆಯೋಗ ವರದಿ ಸ್ವೀಕಾರದ ನಂತರ ಅದರ ಮಾರ್ಗಸೂಚಿಯಂತೆ ಜನಾಂಗಕ್ಕೆ ಮೀಸಲಾತಿ ದೊರಕಿಸಿ ಕೊಡುತ್ತೇನೆ ಎಂಬ ಭರವಸೆ ನೀಡಿದ್ದರು.

Panchamasali Reservation| ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಸ್ವಾಮೀಜಿ..!

ಈಗಾಗಲೇ ಹೋರಾಟವನ್ನು ಮುಂದುವರಿಸುವ ಎಲ್ಲ ಬಗೆಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದೇವೆ. ಜನಾಂಗದವರಿಗೆ ಸಂವಿಧಾನತ್ಮಕ ಸೌಲಭ್ಯ ದೊರಕಿಸಿ ಕೊಡುವ ವರೆಗೂ ಹೋರಾಟದಿಂದ ವಿರಮಿಸುವುದಿಲ್ಲ ಎಂದ ಶ್ರೀಗಳು, ಡಾ.ಸಿ.ಎಸ್‌. ದ್ವಾರಕನಾಥ್‌ ನಂತಹವರು ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಸೌಲಭ್ಯ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವುದರಲ್ಲಿ ಯಾವುದೇ ಹುರುಳಿಲ್ಲ ಎಂದರು.

ಪಂಚಮಸಾಲಿ 3ನೇ ಪೀಠ ಸ್ಥಾಪನೆಗೆ ಕೆಲವರು ಪಟ್ಟಭದ್ರ ಹಿತಾಸಕ್ತ ಮತ್ತು ಬಂಡವಾಳ ಶಾಹಿಗಳ ಕಪಿ ಮುಷ್ಠಿಗೆ ಒಳಗಾಗಿ ಮುಂದಾಗಿದ್ದಾರೆ. ಈ ಕುರಿತು ಹೆಚ್ಚಿಗೆ ಮಾತನಾಡುವ ಅವಶ್ಯಕತೆ ಇಲ್ಲ. ಪಂಚಮಸಾಲಿ ಜನಾಂಗದ ಹೋರಾಟವನ್ನು ದುರ್ಬಲಗೊಳಿಸಲು 3ನೇ ಪೀಠ ಸ್ಥಾಪನೆಗೆ ಹೂಡಿರುವ ಸಂಚು ಎಂದು ಅವರು ಹೇಳಿ ಇಂತಹ ದುಷ್ಠ ಶಕ್ತಿಗಳಿಗೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದರು. ಪಂಚಮಸಾಲಿ ಜನಾಂಗದ ಮುಖಂಡರುಗಳಾದ ಎಂ. ಶಿವಣ್ಣ, ಪಂಪಾಪತಿ ಅಂಗಡಿ, ಕೆ.ಆರ್‌. ಪರಂಜ್ಯೋತಿ, ನಂಜನಗೌಡ ಮತ್ತಿತರರು ಇದ್ದರು.

ನೀತಿ ಸಂಹಿತೆ ಮುಗಿದ ಬಳಿಕ ಮೀಸಲಾತಿ ಗ್ರಾಪಂ ಅಭಿಯಾನ

ವಿಧಾನ ಪರಷತ್‌ ಚುನಾವಣೆಯ(Vidhan Parishat Election) ನೀತಿ ಸಂಹಿತೆಯ ನಂತರ ಮತ್ತೆ ಪಂಚಮಸಾಲಿ ಮೀಸಲಾತಿ ಗ್ರಾಮ ಪಂಚಾಯಿತಿ ಅಭಿಯಾನ ಮುಂದುವರಿಯಲಿದೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. 

Bagalkot| ಪಂಚ​ಮ​ಸಾಲಿ ಶ್ರೀಗಳ ಟ್ರಸ್ಟ್‌ ರಚನೆ: 3ನೇ ಪೀಠಕ್ಕೆ ಮುನ್ನುಡಿ?

ಅ. 13ರಂದು ಶಿವಮೊಗ್ಗದ ಅಕ್ಕಮಹಾದೇವಿ(Akka Mahadevi) ಜನ್ಮಸ್ಥಳ ಉಡತಡಿಯಿಂದ ಈಗಾಗಲೇ ಅಭಿಯಾನ ಆರಂಭಿಸಲಾಗಿದೆ. ದಾವಣಗೆರೆ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಅಭಿಯಾನ ನಡೆಸಲಾಗಿತ್ತು. ವಿಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ(Code of Conduct) ಜಾರಿಯಲ್ಲಿ ಇರುವುದರಿಂದ ಸ್ಥಗಿತಗೊಳಿಸಲಾಗಿದೆ. ಡಿ. 10ರ ಬಳಿಕ ಮತ್ತೆ ಅಭಿಯಾನ(Campaign) ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಯಾವುದೇ ಚಳವಳಿಗಳು ನಿಂತರೂ ಪಂಚಮಸಾಲಿ ಮೀಸಲಾಯಿತಿ ಚಳವಳಿ ನಿಲ್ಲುವುದಿಲ್ಲ. ಅ. 1ರಿಂದ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಸೇರಿದಂತೆ ಹೋರಾಟ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಚಿವ ಸಿ.ಸಿ ಪಾಟೀಲ(CC Patil) ಅವರ ನೇತೃತ್ವದಲ್ಲಿ ಸಭೆ ನಡೆಸಿ ವರದಿ ಬಂದ ಬಳಿಕ ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದ್ದರಿಂದ ಸತ್ಯಾಗ್ರಹ ಕೈಬಿಡಲಾಗಿತ್ತು. ಜ. 1ರ ವರೆಗೆ ಮೀಸಲಾತಿ ನೀಡಲು ಸರ್ಕಾರ ಕಾಲಾವಕಾಶ ನೀಡಿದ್ದು ಬಳಿಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal), ವಿಜಯಾನಂದ ಕಾಶಪ್ಪನವರ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೂಡಿ ಸಭೆ ನಡೆಸಿ ಮುಂದಿನ ಮುಂದಿನ ಹೋರಾಟದ ಬಗ್ಗೆ ತಿಳಿಸಲಾಗುವುದು ಎಂದರು.
 

Follow Us:
Download App:
  • android
  • ios