ದೋಷಯುಕ್ತ ಮೊಬೈಲ್ ಸರಬರಾಜು; ಆಸುಸ್ ಕಂಪನಿಗೆ .78 ಸಾವಿರ ದಂಡ ಮತ್ತು ಪರಿಹಾರ
ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸುಸ್ ಕಂಪನಿಗೆ .78 ಸಾವಿರ ದಂಡ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
ಧಾರವಾಡ (ಜು.8) : ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸುಸ್ ಕಂಪನಿಗೆ .78 ಸಾವಿರ ದಂಡ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
ಇಲ್ಲಿಯ ಸರಸ್ವತಪುರದ ವಾಸಿ ಕೇತನ ಚಿಕ್ಕಮಠ ಎಂಬ ವಿಧ್ಯಾರ್ಥಿ ತನ್ನ ವಿಧ್ಯಾಭ್ಯಾಸಕ್ಕಾಗಿ .57,999 ನೀಡಿ ಉತ್ತಮ ಸೌಲಭ್ಯ ಇದೆ ಅನ್ನುವ ಆಸುಸ್ ಕಂಪನಿಯ, ಆಸಿಸ್ ರಾಗ್-5 ಮೊಬೈಲ್‌ನ್ನು 2021ರ ಜೂನ್ 5ರಂದು ಖರೀದಿಸಿದ್ದರು. ಮೊಬೈಲ್ ಖರೀದಿಸಿದ 6 ತಿಂಗಳ ಒಳಗೆ ಅದರಲ್ಲಿ ದೋಷಗಳು ಕಂಡು ಬಂದು ಅದು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಅದಕ್ಕಾಗಿ ದೂರುದಾರ ಮೊಬೈಲ್‌ನ್ನು ಆಸುಸ್ ಕಂಪನಿಯ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಅಧಿಕೃತ ಸರ್ವಿಸ್ ಸೆಂಟರ್‌ಗೆ ಅದರ ಪರಿಶೀಲನೆ ಮತ್ತು ದುರಸ್ತಿಗಾಗಿ ಹಲವಾರು ಬಾರಿ ಕೊಟ್ಟಿದ್ದರು. ಆದರೆ, ಮೊಬೈಲ್ ಪರಿಶೀಲಿಸಿ ಅದರ ಮದರ್ ಬೊರ್ಡ್ ಬದಲಾಯಿಸಿ ಕೊಟ್ಟರೂ ಕೆಲವೇ ದಿನಗಳಲ್ಲಿ ಮತ್ತೆ ದೋಷ ಕಾಣಿಸಿಕೊಂಡಿತು. ಆದ್ದರಿಂದ ದೂರುದಾರ ಸದರಿ ಆಸುಸ್ ಕಂಪನಿಯ ಉತ್ಪಾದಕರು ತನಗೆ ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ್ದಾರೆ ಹಾಗೂ ಸರ್ವಿಸ್ ಸೆಂಟರ್ ನವರು ಸೂಕ್ತ ಸೇವೆ ನೀಡದೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಮಾತು ತಪ್ಪಿದ ಗೋಲ್ಡನ್ ಹೋಮ್ಸ್ ಬಿಲ್ಡರ್ಗೆ ಕ್ರಯ ಪತ್ರ ಬರೆದು ಕೊಡಲು ಆಯೋಗದ ಆದೇಶ
ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿಹಾಗೂ ಪ್ರಭು ಹಿರೇಮಠ, ಮೊಬೈಲ್‌ನಲ್ಲಿ ಉತ್ಪಾದನಾ ದೋಷ ಮೇಲ್ನೊಟಕ್ಕೆ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಮೊಬೈಲ್‌ನಲ್ಲಿ ಉತ್ಪಾದನಾ ದೋಷ ಕಂಡುಬಂದಿದ್ದರಿಂದ ಅದನ್ನು ತಯಾರಿಸಿದ ಆಸುಸ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹೊಸ ಮೊಬೈಲ್ ದೂರುದಾರರಿಗೆ ಕೊಡಬೇಕು. ಒಂದು ತಿಂಗಳ ಒಳಗಾಗಿ ಮೊಬೈಲ ಬದಲಾವಣೆ ಮಾಡಿಕೊಡಲು ವಿಫಲರಾದಲ್ಲಿ ಮೊಬೈಲ್‌ನ ಬೆಲೆ .57,999 ಹಾಗೂ ಅದರ ಮೇಲೆ ಶೇ. 8ರಂತೆ ಈ ತೀರ್ಪು ನೀಡಿದ ದಿನದಿಂದ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಹಾಗೂ ಮಾನಸಿಕ ತೊಂದರೆಗಾಗಿ ಎದುರುದಾರ, ಉತ್ಪಾದಕರು .15,000ಗಳ ಪರಿಹಾರ ಹಾಗೂ .5,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಸುಸ್ ಮೊಬೈಲ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.
ಪ್ರಿಂಟರ್ ಬುಕ್ ಮಾಡಿದ ವ್ಯಕ್ತಿಗೆ ಸ್ಪೀಕರ್ ಡೆಲಿವರಿ: ಅಮೆಜಾನ್‌ಗೆ 30,000 ದಂಡ..!