Bidar; ಹಾಕ್ ಫೈಟರ್ ವಿಮಾನ ಹಾರಿಸಿ ಸ್ಪೂರ್ತಿಯಾದ ತಂದೆ- ಮಗಳು
ಬೀದರ್ ನ ಇಂಡಿಯನ್ ಏರ್ಫೋರ್ಸ್ ಸೆಂಟರ್ ನಲ್ಲಿ ಅಪ್ಪ- ಮಗಳು ಯುದ್ಧ ವಿಮಾನ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದಾರೆ.
ವರದಿ : ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್
ಅಪ್ಪ ಪೈಲಟ್- ಮಗಳು ಸಹ ಪೈಲಟ್ ಆಗಿ ಒಂದೇ ಮಾದರಿಯ ಫೈಟರ್ ಜೆಟ್ ಹಾರಿಸಿದ್ದಾರೆ. ಬೀದರ್ ನ ಇಂಡಿಯನ್ ಏರ್ಫೋರ್ಸ್ ಸೆಂಟರ್ ನಲ್ಲಿ ಅಪ್ಪ- ಮಗಳು ಯುದ್ಧ ವಿಮಾನ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯಲ್ಲಿ ಅಪ್ಪ- ಮಗಳ ಜೋಡಿ ಪೈಟರ್ ವಿಮಾನ ಹಾರಿಸಿದೆ ಎಂದು ಐಎಎಫ್ ನಿಂದ ತಿಳಿದು ಬಂದಿದೆ.
ಐಎಎಫ್ ಕಮಾಂಡರ್ ಆಗಿರುವ ಸಂಜಯ್ ಶರ್ಮಾ ಪುತ್ರಿ ಅನನ್ನಾ ಶರ್ಮಾರನ್ನ ಸಹ ಪೈಲೆಟ್ ಆಗಿ ಪಡೆದು ಒಂದೇ ಮಾದರಿಯ ಹಾಕ್ ಸೋರ್ಟೆ( Hawk sortie) ಯುದ್ಧ ವಿಮಾನ ಹಾರಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
IAF RECRUITMENT; ಅಗ್ನಿವೀರರಾಗಲು ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ
ಏರ್ ಕಮಾಂಡರ್ ಸಂಜಯ್ ಶರ್ಮಾ 1989ರಲ್ಲಿ ಐಎಎಫ್ ನ ಫೈಟರ್ ಸ್ಟ್ರೀಮ್ಗೆ ನೀಯೋಜಿಸಲ್ಪಿದ್ದರು,.. ಅವರು ಮಿಗ್-21 ಸ್ಕ್ವಾಡ್ರನ್ ಮತ್ತು ಮುಂಚೂಣಿ ಯುದ್ಧ ವಿಮಾನ ನಿಲ್ದಾಣಕ್ಕೆ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದಾರೆ,.. ಯುದ್ಧ ವಿಮಾನಗಳ ಕಾರ್ಯಾಚರಣೆಗಳ ಅನುಭವ ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ನಲ್ಲಿ ಬಿಟೆಕ್ ಪದವಿ ಪಡೆದಿರುವ ಅನನ್ಯಾ ಐಎಎಫ್ ನ ತರಬೇತಿಗೆ ಆಯ್ಕೆಯಾಗಿದ್ದು,.. ಡಿಸೆಂಬರ್ 2021ರಲ್ಲಿ ಫೈಟರ್ ಪೈಲಟ್ ಆಗಿ ನೇಮಕಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
NVS Recruitment 2022: 2,200 ಹುದ್ದೆಗೆ ನೇಮಕಾತಿ
ವಿಮಾನ ಹಾರಟ ಮಾಡುವ ಮುನ್ನ ಅಪ್ಪ- ಮಗಳು ಇಬ್ಬರೂ ಹ್ವಾಕ್ -132 ಯುದ್ಧ ವಿಮಾನದ ಮುಂದೆ ನಿಂತು ತೆಗೆದುಕೊಂಡಿರುವ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗಿವೆ,