IAF Recruitment; ಅಗ್ನಿವೀರರಾಗಲು ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ

  ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಅಡಿ ಅಗ್ನಿವೀರರಾಗಲು ವಾಯು ಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಜೂ. 24ರಂದು ಮೊಟ್ಟಮೊದಲು ವಾಯುಪಡೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

IAF gets 7.5 lakh applications for 3000 Agniveer positions gow

ನವದೆಹಲಿ (ಜು.5): ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಅಡಿ ಅಗ್ನಿವೀರರಾಗಲು ವಾಯು ಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಇದರೊಂದಿಗೆ ನೋಂದಣಿ ಪ್ರಕ್ರಿಯೆ ಮಂಗಳವಾರ ಮುಗಿದಿದೆ. ವಾಯುಪಡೆಗೆ 3000 ಅಗ್ನಿವೀರನ್ನು ಆರಿಸಲು ನೇಮಕಾತಿ  ಅಧಿಸೂಚನೆ ಹೊರಡಿಲಾಗಿತ್ತು. 

 

ಜೂ. 24ರಂದು ಮೊಟ್ಟಮೊದಲು ವಾಯುಪಡೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಮಂಗಳವಾರ ನೋಂದಣಿಯ ಕೊನೆಯ ದಿನವಾಗಿದ್ದು, ಒಟ್ಟು 7.5 ಲಕ್ಷ ಯುವಕರು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಒಮ್ಮೆ ನೇಮಕಕ್ಕೆ 6.31 ಲಕ್ಷ ಅರ್ಜಿ ಬಂದಿದ್ದವು. ಆ ದಾಖಲೆಯನ್ನು ಅಗ್ನಿಪಥ ನೇಮಕಾತಿ ಮುರಿದಿದೆ ಎಂದು ವಾಯುಪಡೆ ಹೇಳಿದೆ.

NVS RECRUITMENT 2022: 2,200 ಹುದ್ದೆಗೆ ನೇಮಕಾತಿ 

17.5 ಮತ್ತು 23 ವಯಸ್ಸಿನ ಯುವಕರು ಮತ್ತು ಯುವತಿಯರು ಭಾರತೀಯ ವಾಯುಪಡೆಯ ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. Agneepath 2022 ರ ಯೋಜನೆಯು ದೇಶದ ಕಿರಿಯ ಜನಸಂಖ್ಯೆಯನ್ನು ಉನ್ನತ ವೇತನ ಶ್ರೇಣಿಯೊಂದಿಗೆ ಮಿಲಿಟರಿಗೆ ತೆಗೆದುಕೊಳ್ಳಲು ಉತ್ತೇಜಿಸಲು ಪ್ರಾರಂಭಿಸಲಾಗಿದೆ. ಈ ಯೋಜನೆಯು ಅಭ್ಯರ್ಥಿಗಳಿಗೆ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.  4 ವರ್ಷಗಳ ತರಬೇತಿ ಬಳಿಕ ಶೇ.25 ರಷ್ಟು ಅಗ್ನಿವೀರರಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ವಾಯುಪಡೆ ತಿಳಿಸಿದೆ. ಭೂಸೇನೆ ಮತ್ತು ನೌಕಾಪಡೆ ಶೀಘ್ರವೇ ನೇಮಕಾತಿಗೆ ಚಾಲನೆ ನೀಡಲಿವೆ.  

IAF ಅಗ್ನಿವೀರ್ ನೇಮಕಾತಿ 2022 ಅನ್ನು ಆರಂಭದಲ್ಲಿ ಜುಲೈ 24, 2022 ರಿಂದ ಪ್ರಾರಂಭವಾಗುವ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ. ದಾಖಲಾತಿ ಪ್ರಕ್ರಿಯೆ ಮುಂತಾದ ಇತರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದೆ. ಈ ನಡುವೆ ಕೇಂದ್ರ ಸರ್ಕಾರದ ಸಲಹೆ ಹೊರತಾಗಿಯೂ ಅಗ್ನಿವೀರರಿಗೆ ರಾಜ್ಯದಲ್ಲಿ ವಿಶೇಷ ಆದ್ಯತೆ ನೀಡುವುದಿಲ್ಲ. ಅವರೆಲ್ಲಾ ಬಿಜೆಪಿ ಕಾರ್ಯಕರ್ತರು ಎಂದು ಬಂಗಾಳ ಸಿಎಂ ಮಮತಾ ಕಿಡಿಕಾರಿದ್ದಾರೆ.

ಏನಿದು ಅಗ್ನಿಪಥ ಯೋಜನೆ? ಯಾರೆಲ್ಲ ಅಗ್ನಿವೀರ್‌ ಆಗಬಹುದು?: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಜೂನ್ 14ರಂದು ಅಗ್ನಿಪಥ್ ಯೋಜನೆಯನ್ನು ಘೋಷಿಸಿದ್ದಾರೆ. ಅಗ್ನಿಪಥ್ ಯೋಜನೆಯಡಿ ದೇಶದ ಯುವಕರಿಗೆ ಸೇನೆ ಸೇರುವ ಅವಕಾಶ ಸಿಗಲಿದೆ. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ದೇಶಭಕ್ತಿ ಮತ್ತು ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ರಕ್ಷಣಾ ಸಚಿವಾಲಯ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ, 4 ವರ್ಷಗಳ ಕೆಲಸದ ಅವಧಿ ಪೂರ್ಣಗೊಂಡ ನಂತರ, 'ಅಗ್ನಿವೀರ್' ಗೆ ಒಂದು ದೊಡ್ಡ ಮೊತ್ತದ 'ನಿವೃತ್ತಿ' ಪ್ಯಾಕೇಜ್ ಅನ್ನು ಸಹ ಪಾವತಿಸಲಾಗುವುದು ಎಂದು ಹೇಳಲಾಗಿದೆ. ಇದು ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ. ಅಗ್ನಿಪಥ್ ಯೋಜನೆಯಡಿ ಯಾರು ಅರ್ಜಿ ಸಲ್ಲಿಸಬಹುದು, ನೇಮಕಾತಿ ಪ್ರಕ್ರಿಯೆ ಏನು, ಸಂಬಳ ಏನು ಮತ್ತು ಸೌಲಭ್ಯಗಳೇನು?

ಶೀಘ್ರವೇ 3500 ಪಿಯು ಅತಿಥಿ ಉಪನ್ಯಾಸಕರ ನೇಮಕ

ಅಗ್ನಿಪಥ್ ಯೋಜನೆ: ಯಾರು ಅರ್ಹರು?: ಅಗ್ನಿಪಥ್ ಯೋಜನೆಗೆ ಅರ್ಹರಾಗಲು ನಿಮ್ಮ ವಯಸ್ಸು 17 ವರ್ಷದಿಂದ 21 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.

 

Latest Videos
Follow Us:
Download App:
  • android
  • ios