Asianet Suvarna News Asianet Suvarna News

NVS Recruitment 2022: 2,200 ಹುದ್ದೆಗೆ ನೇಮಕಾತಿ

ನವೋದಯ ವಿದ್ಯಾಲಯ ಸಮಿತಿಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸುವ ಕುರಿತು ಅಧಿಸೂಚನೆ ಹೊರಡಿಸಿದ್ದು, ಇದರ ಅನ್ವಯ 2,200 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಜುಲೈ 22ರಂದು ಕೊನೆಯ ದಿನಾಂಕವಾಗಿದೆ.

Navodaya Teacher recruitment 2022 notification  for 2,200 post gow
Author
Bengaluru, First Published Jul 6, 2022, 1:11 PM IST

ನವೋದಯ ವಿದ್ಯಾಲಯ ಸಮಿತಿ(ಎನ್‌ವಿಎಸ್‌)ಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸುವ ಕುರಿತು ಅಧಿಸೂಚನೆ ಹೊರಡಿಸಿದ್ದು, ಇದರ ಅನ್ವಯ 2,200 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ಅರ್ಹತೆ ಹಾಗೂ ವಯಸ್ಸು, ಬೇಕಾದ ದಾಖಲೆಗಳ ಮಾಹಿತಿ ಇತ್ಯಾದಿಗಳನ್ನು ಇಲ್ಲಿ ಕೆಳಗಡೆ ನೀಡಲಾಗಿದೆ.

ಹುದ್ದೆಗಳು, ವಿದ್ಯಾರ್ಹತೆ: ಅಧಿಸೂಚನೆಯಲ್ಲಿ ತಿಳಿದಂತೆ ನವೋದಯ ವಿದ್ಯಾಲಯ ಸಮಿತಿ ಸಂಸ್ಥೆಗಳಲ್ಲಿ ಒಟ್ಟು 2,200 ಹುದ್ದೆಗಳು ಖಾಲಿ ಇದೆ. ಈ ಪೈಕಿ ಪ್ರಾಂಶುಪಾಲರ ಹುದ್ದೆ 12, ಪೋಸ್ಟ್‌ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆ 397, ಟ್ರೈನ್‌್ಡ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆ 683, ಟಿಜಿಟಿ (ತೃತೀಯ ಭಾಷೆ) ಹುದ್ದೆಗಳು 343, ಮ್ಯೂಸಿಕ್‌ ಟೀಚ​ರ್‍ಸ್ ಹುದ್ದೆ 33, ಚಿತ್ರಕಲಾ ಶಿಕ್ಷಕರ ಹುದ್ದೆಗಳು 43, ದೈಹಿಕ ಶಿಕ್ಷಕರು(ಪುರುಷ) ಹುದ್ದೆಗಳು 21, ದೈಹಿಕ ಶಿಕ್ಷಕರು(ಮಹಿಳೆ) ಹುದ್ದೆ 31, ಗ್ರಂಥಪಾಲಕರ ಹುದ್ದೆ 53, ಎನಿ ರೀಜನ್‌ ಹುದ್ದೆ 584ಗೆ ನೇಮಕಾತಿ ನಡೆಸಲಾಗುತ್ತಿದೆ.ನೇಮಕಾತಿ ನಿಯಮಾನುಸಾರ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳು ವಿದ್ಯಾರ್ಹತೆಯನ್ನು ಪಡೆದಿರಬೇಕಿದೆ. ಅಭ್ಯರ್ಥಿಗಳು ಎಂಎ, ಎಂ.ಎಡ್‌/ಬಿಎ, ಬಿ.ಎಡ್‌/ಬಿಪಿ.ಎಡ್‌-(ದೈಹಿಕ ಶಿಕ್ಷಕರ ಹುದ್ದೆಗೆ) ತೇರ್ಗಡೆಯಾಗಿರಬೇಕಿದೆ.

ಕಲ್ಯಾಣ ಕರ್ನಾಟಕ ಶಿಕ್ಷಣ ‌ಇಲಾಖೆಯ ಸಭೆ, ‌ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ‌ಕೊಟ್ಟ ನಾಗೇಶ್

ವಯಸ್ಸು,ಅರ್ಜಿ ಶುಲ್ಕ: ಅಭ್ಯರ್ಥಿಗಳಿಗೆ ವಯಸ್ಸಿನ ಅರ್ಹತೆ ಹಾಗೂ ಅರ್ಜಿ ಶುಲ್ಕದ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಧಿಸೂಚನೆ ಅನ್ವಯ ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷದ ಒಳಗಿರಬೇಕಿದೆ. ಪೋಸ್ಟ್‌ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆಯ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷದೊಳಗಿರಬೇಕಿದೆ. ಟ್ರೈನ್‌್ಡ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷದೊಳಗಿರಬೇಕಿದೆ. ಉಳಿದ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೂಡ ಗರಿಷ್ಠ 35 ವರ್ಷದೊಳಗಿರಬೇಕಿದೆ.ಸರ್ಕಾರಿ ನಿಯಮದ ಅನ್ವಯ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್ಟಿಅಭ್ಯರ್ಥಿಗೆ 1ರಿಂದ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗೆ 10 ವರ್ಷ ವಯೋ ಸಡಿಲಿಕೆ ಅನ್ವಯವಾಗಲಿದೆ. ಪ್ರಾಂಶುಪಾಲರ ಹುದ್ದೆಯ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಅರ್ಜಿ ಶುಲ್ಕ 2,000ರು., ಪೋಸ್ಟ್‌ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆಗೆ 1,800 ರು., ದೈಹಿಕ ಶಿಕ್ಷಕ/ಕಿ ,ಸಂಗೀತ ಶಿಕ್ಷಕ/ಕಿ ಹಾಗೂ ಲೈಬ್ರರಿಯನ್‌ ಹುದ್ದೆಗಳಿಗೆ 1,500 ರು. ನಿಗದಿ ಮಾಡಲಾಗಿದೆ. ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್ಟಿಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ವೇತನ ಶ್ರೇಣಿ ಹೇಗಿದೆ?:ನವೋದಯ ವಿದ್ಯಾಲಯದ ನೇಮಕಾತಿ ಸಮಿತಿಯು ಅಧಿಸೂಚನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ಶ್ರೇಣಿಯನ್ನು ತಿಳಿಸಿದೆ. ಇದರಲ್ಲಿ ಇರುವಂತೆ ಪ್ರಾಂಶುಪಾಲರ ಹುದ್ದೆಗೆ 78,800-2,09,200(ಪೇ ಲೆವೆಲ್‌ 12 ಅನ್ವಯ) ಮಾಸಿಕ ವೇತನ ನೀಡಲಾಗುತ್ತದೆ. ಪೋಸ್ಟ್‌ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆಗೆ 47,600 ರು-1,51,100 ರು.(ಪೇ ಲೆವೆಲ್‌ 8 ಅನ್ವಯ), ಟ್ರೈನ್‌್ಡ ಗ್ರಾಜ್ಯುವೇಟ್‌ ಟೀಚರ್‌ ಹುದ್ದೆಗೆ 44,00 ರು.-1,42,400 ರು.(ಪೇ ಲೆವೆಲ್‌ 7ರ ಅನ್ವಯ), ಮ್ಯೂಸಿಕ್‌ ಟೀಚರ್‌,ದೈಹಿಕ ಶಿಕ್ಷಕರು ಹಾಗೂ ಲೈಬ್ರರಿಯನ್‌ ಹುದ್ದೆಗಳಿಗೆ 44,900 ರು.-1,42,400 ರು.(ಪೇ ಲೆವೆಲ್‌ 7ರ ಪ್ರಕಾರ) ಮಾಸಿಕ ವೇತನ ನೀಡಲಾಗುತ್ತದೆ. ಅಭ್ಯರ್ಥಿಯು ಅರ್ಜಿ ಜೊತೆಗೆ ಅಂಕಪಟ್ಟಿಗಳು, ಆಧಾರ್‌ಕಾರ್ಡ್‌ ನಕಲು ಪ್ರತಿಗಳನ್ನು ಎಂದು ನೇಮಕಾತಿ ವಿಭಾಗವು ತಿಳಿಸಿದೆ.

Raichur: ಸಿಂಗಾಪುರ ಕಾಮುಕ ಶಿಕ್ಷಕನ ಬಗ್ಗೆ ಸಚಿವ ನಾಗೇಶ್ ಗರಂ!

ಆಯ್ಕೆ, ಅರ್ಜಿ ಸಲ್ಲಿಕೆ:ಅಧಿಸೂಚನೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತಿಳಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಯಲಿದ್ದು, ಬಳಿಕ ವೈಯಕ್ತಿ ಸಂದರ್ಶನ ನಡೆಯಲಿದೆ. ಇವುಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ ಲಿಸ್ಟ್‌ ಸಿದ್ದಪರಡಿಸಲಾಗುತ್ತದೆ. ಹೀಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಅರ್ಜಿ ಸಲ್ಲಿಸಲು ಅಭ್ಯರ್ಥಿಯು ನವೋದಯ ವಿದ್ಯಾಲಯ ಸಮಿತಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಡೈರೆಕ್ಟ್ ರಿಕ್ರೂಟ್‌್ಮಂಟ್‌ ಡ್ರೈವ್‌ 2022-23 ಮೇಲೆ ಕ್ಲಿಕ್ಕಿಸಬೇಕು. ಅಲ್ಲಿ ದೊರೆಯುವ ಆನ್‌ಲೈನ್‌ ನಮೂನೆಯ ಅರ್ಜಿಯನ್ನು ಸರಿಯಾದ ಮಾಹಿತಿಗಳ ಮೂಲಕ ಭರ್ತಿಗೊಳಿಸಬೇಕು. ಬಳಿಕ ಶುಲ್ಕ ಪಾವತಿಸಿ ಅರ್ಜಿಯನ್ನು ಕಳುಹಿಸುವ ಆಯ್ಕೆ ಮೇಲೆ ಕ್ಲಿಕ್ಕಿಸಿದಾಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯಿತು.

*ಅರ್ಜಿ ಸಲ್ಲಿಸಲು ಜುಲೈ 22ರಂದು ಕೊನೆಯ ದಿನಾಂಕವಾಗಿದೆ.

*ಆನ್‌ಲೈನ್‌ ಅರ್ಜಿ ನಮೂನೆಗಾಗಿ (https://navodaya.gov.in/nvs/en/Home1) ಲಾಗಿನ್‌ ಮಾಡಬಹುದು.

Follow Us:
Download App:
  • android
  • ios