ನಮ್ಮ ಸಮಸ್ಯೆಗೆ ಸ್ಪಂದಿಸದ ಸರ್ಕಾರಗಳು: ಸಚಿವ ಎಂ.ಬಿ.ಪಾಟೀಲ್ ಮುಂದೆ ರೈತರ ಅಳಲು
ನೀರಿಲ್ಲದೇ ಬೆಳೆಗಳು ಕಮರಿ ಹೋಗಿವೆ. ಸೂರ್ಯಕಾಂತಿ ಸಂಪೂರ್ಣ ಕಾಂತಿ ಅಳಿಸಿ ಹೋಗಿರುವ ದೃಶ್ಯಗಳು ಬರದ ಭೀಕರತೆಯನ್ನು ರೈತರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಎದುರು ಅಳಲು ತೋಡಿಕೊಂಡ ರೈತರು
ವಿಜಯಪುರ(ನ.16): ಬದುಕು ಹಾಳಾಗಿದೆ. ರಾಜ್ಯವಾಗಲಿ, ಕೇಂದ್ರ ಸರ್ಕಾರವಾಗಲಿ ನಮಗೆ ಪರಿಹಾರ ನೀಡುತ್ತಿಲ್ಲ. ಎರಡು ಸರ್ಕಾರಗಳಿಂದಲೂ ನಮಗೆ ಸ್ಪಂದನೆ ದೊರಕುತ್ತಿಲ್ಲ. ಜಾನುವಾರುಗಳು ಸಹ ತೊಂದರೆ ಎದುರಿಸುತ್ತಿವೆ ಎಂದು ರೈತರು ಬರ ಅಧ್ಯಯನಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರ ಮುಂದೆ ತಮ್ಮ ನೋವು ತೊಡಿಕೊಂಡರು.
ಇಂಡಿ ತಾಲೂಕು ಸೇರಿದಂತೆ ವಿವಿಧ ಬರಪೀಡಿತ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸಿದರು. ಇಂಡಿ ತಾಲೂಕಿನ ಸಾವಳಸಂಗ, ಹೊರ್ತಿ, ಇಂಚಗೇರಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದರು. ಇಂಡಿ ಶಾಸಕ ಯಶವಂತರಾಯಗೌಡ ಈ ಕಾರ್ಯಕ್ಕೆ ಸಾಥ್ ನೀಡಿದರು. ನೀರಿಲ್ಲದೇ ಬೆಳೆಗಳು ಕಮರಿ ಹೋಗಿವೆ. ಸೂರ್ಯಕಾಂತಿ ಸಂಪೂರ್ಣ ಕಾಂತಿ ಅಳಿಸಿ ಹೋಗಿರುವ ದೃಶ್ಯಗಳು ಬರದ ಭೀಕರತೆಯನ್ನು ರೈತರು ಜಿಲ್ಲಾ ಉಸ್ತುವಾರಿ ಸಚಿವರ ಎದುರು ಅಳಲು ತೋಡಿಕೊಂಡರು.
ವಿಜಯಪುರ: ವೈದ್ಯ ಸಿಬ್ಬಂದಿ ಇಲ್ಲದೇ ರೋಗಿಗಳ ಪರದಾಟ..!
ಸಾವಿರಾರು ರು. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಎಕರೆಗೆ ೧೨ ಸಾವಿರ ರು. ಖರ್ಚು ಮಾಡಿ ಸೂರ್ಯಕಾಂತಿ ಬೆಳೆದಿದ್ದೇವೆ. ಆದರೆ ಒಂದೇ ಒಂದು ರು. ಮರಳಿ ಬರುತ್ತದೆ ಎಂಬ ನಿರೀಕ್ಷೆ ಇಲ್ಲ, ಎಲ್ಲವೂ ಹಾಳಾಗಿದೆ. ಪಡೆದ ಸಾಲ ಹೇಗೆ ತೀರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಸಾವಳಸಂಗ ಗ್ರಾಮದ ಅನೇಕ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿದರು.
ಪ್ರತಿಯೊಬ್ಬ ರೈತರನ್ನು ಆತ್ಮೀಯವಾಗಿ ಮಾತನಾಡಿಸಿ ಅಭಯ ತುಂಬಿದ ಸಚಿವ ಡಾ.ಎಂ.ಬಿ. ಪಾಟೀಲ ಹಾಗೂ ಶಾಸಕರಾದ ಯಶವಂತರಾಯಗೌಡ ಪಾಟೀಲರು, ವಿಠ್ಠಲ ಕಟಕದೊಂಡ ಅವರು ರೈತರ ಸಮಸ್ಯೆಯನ್ನು ಆಲಿಸಿದರು. ಎಷ್ಟು ಖಚು ಮಾಡಿದ್ದೀರಿ, ಬೆಳೆ ಸ್ಥಿತಿಗತಿ ಹೀಗೆ ಎಲ್ಲವನ್ನೂ ಆಲಿಸಿ, ಸರ್ಕಾರಿ ಮಟ್ಟದಲ್ಲಿ ಯಾವ ರೀತಿ ಅನುಕೂಲ ಕಲ್ಪಿಸಬೇಕು ಅದಕ್ಕೆ ನಾವು ಸಂಪೂರ್ಣವಾಗಿ ಬದ್ಧರಿದ್ದೇವೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಭಯ ತುಂಬಿದರು.
ಕಾಲುವೆ ಜಾಲಕ್ಕೆ ಭೇಟಿ:
ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದ ಬಳಿ ಮುಳವಾಡ ಏತ ನೀರಾವರಿ ಯೋಜನೆಯಡಿ ಕಾಲುವೆಯನ್ನು ಸಹ ಇದೇ ಸಂದರ್ಭದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ವಿವಿಧ ಕೆರೆಗಳಿಗೆ ಭರ್ತಿ ಮಾಡಲಾಗುತ್ತಿರುವ ನೀರಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ವಿಜಯೇಂದ್ರ ನೇಮಕ ದೊಡ್ಡವರ ಕೆಲಸ ನಾವು ಜೈ ಅನ್ನೋದಷ್ಟೇ: ಸಂಸದ ರಮೇಶ ಜಿಗಜಿಣಗಿ
ಅದೇ ತೆರನಾಗಿ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಬಳಿ ೧೬ ಕೆರೆಗಳಿಗೆ ನೀರು ತುಂಬಿಸೋ ಕಾಮಗಾರಿ ವೀಕ್ಷಿಸಿದರು. ನಂತರ ಇಂಚಗೇರಿ ಕೆರೆಗೆ ಭೇಟಿ ನೀಡಿ ಕೆರೆ ತುಂಬಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಾಹುಲ್ ಶಿಂಧೆ, ಎಸ್.ಪಿ. ಹೃಷಿಕೇಶ ಸೋನಾವನೆ ಉಪಸ್ಥಿತರಿದ್ದರು.
ಇಂಚಗೇರಿ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಇಂಚಗೇರಿ ಕೆರೆಯನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿ ಬಂದಿತು. ಇಂಚಗೇರಿ ಕೆರೆಗೆ ನೀರು ಬಂದಿಲ್ಲ, ಅಂತರ್ಜಲ ಮಟ್ಟ ಹೆಚ್ಚುತ್ತಿಲ್ಲ, ಹೀಗಾಗಿ ನೀರಿಗೆ ಹಾಹಾಕಾರ ಉಂಟಾಗಿದೆ. ಹೀಗಾಗಿ ಮೊದಲು ಇಂಚಗೇರಿ ಕೆರೆಯನ್ನು ತುಂಬಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿಕೊಂಡ ಪ್ರಸಂಗ ಸಹ ನಡೆಯಿತು.