ಬಾಗಲಕೋಟೆ: ಬ್ಯಾರೇಜ್ ಗೇಟ್‌ಗೆ ಆಗ್ರಹಿಸಿ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ
ಹೊಸ ಬ್ಯಾರೇಜ್ ಗೆ ಗೇಟ್ ಕೂರಿಸಲು ಆಗ್ರಹಿಸಿ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿಚಖಂಡಿ ಬ್ರಿಡ್ಜ್ ಬಳಿ ನಡೆದಿದೆ.
ಬಾಗಲಕೋಟೆ (ಮಾ.30): ಹೊಸ ಬ್ಯಾರೇಜ್ ಗೆ ಗೇಟ್ ಕೂರಿಸಲು ಆಗ್ರಹಿಸಿ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿಚಖಂಡಿ ಬ್ರಿಡ್ಜ್ ಬಳಿ ನಡೆದಿದೆ.
ಚಿಚಖಂಡಿ ಹೊಸ ಬ್ಯಾರೇಜ್ ನಿರ್ಮಾಣವಾಗಿದ್ರೂ ಗೇಟ್ ಅಳವಡಿಸದೇ ಇದ್ದುದಕ್ಕೆ ಅಧಿಕಾರಿಗಳ ವಿರುದ್ಧ ಚಿಚಖಂಡಿ, ಜೀರಗಾಳ, ಗುಲಗಾಲಜಂಬಗಿ, ರೂಗಿ ಗ್ರಾಮಗಳ ರೈತರು ಆಕ್ರೋಶ ಹೊರಹಾಕಿದ್ದಾರೆ. ಎತ್ತಿನ ಬಂಡಿ ಸಮೇತ ಹೆದ್ದಾರಿಗೆ ಬಂದು ವಿಜಯಪುರ ಬೆಳಗಾವಿ ರಾಜ್ಯ ಹೆದ್ದಾರಿ ಬಂದ್ ಗೊಳಿಸಿ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಸ್ಥಿತಿ ನೋಡಿ ಸ್ಥಳಕ್ಕೆ ಮುಧೋಳ ತಹಶೀಲ್ದಾರ ವಿನಯ್ ಹತ್ತಳ್ಳಿ ಭೇಟಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿದ್ರು.
'ಮನುಷ್ಯತ್ವ ಅನ್ನೋದು ಇಲ್ವ ನಿಮಗೆ?' ಬಡರೋಗಿಗೆ ಅಂಬುಲೆನ್ಸ್ ಒದಗಿಸದ ವೈದ್ಯರಿಗೆ ಶಾಸಕ ಹಿಗ್ಗಾಮುಗ್ಗಾ ಕ್ಲಾಸ್!
ಏಪ್ರಿಲ್ ೮ ರೊಳಗೆ ಬ್ಯಾರೇಜ್ ಗೇಟ್ ಕೂರಿಸುವುದಾಗಿ ತಹಶೀಲ್ದಾರ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ನೂತನ ಬ್ಯಾರೇಜ್ ನಿರ್ಮಾಣವಾಗಿದ್ರೂ ಗೇಟ್ ಅಳವಡಿಸದೇ ಇರುವ ಕಾರಣ ಘಟಪ್ರಭಾ ನದಿಗೆ ನೀರು ಬಿಡುವವರಿದ್ದು, ಗೇಟ್ ಅಳವಡಿಸದೇ ಹೋದರೆ ಬ್ಯಾರೇಜ್ ಕಟ್ಟಿ ವ್ಯರ್ಥ ಆಗಲಿದೆ. ಹೀಗಾಗಿ ತಕ್ಷಣ ಗೇಟ್ ಅಳವಡಿಸಿ ಎಂದು ಪ್ರತಿಭಟನೆ ನಡೆಸಿ ರೈತರು ಆಗ್ರಹಿಸಿದರು. ರೈತರ ರಸ್ತೆ ತಡೆ ಹಿನ್ನೆಲೆಯಲ್ಲಿ ಕೆಲಕಾಲ ರಾಜ್ಯಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ಸಂಚಾರ ಅಸ್ತವ್ಯಸ್ಥವಾಗಿತ್ತು.
ನಮ್ಮದು ಹುಲಿಗಳ ಪಡೆ, ಒಗ್ಗಟ್ಟಾಗಿ ಕೆಲಸ ಮಾಡ್ತೀವಿ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್!