ಡ್ಯಾಂನ ಸುತ್ತ ಮುತ್ತಲು ಇರುವ ಗ್ರಾಮಗಳ ರೈತರಿಗೆ ಮಾತ್ರ ಇಲ್ಲಿಯವರೆಗೆ ಅಲ್ಪ ಸ್ವಲ್ಪ ನೀರಾವರಿಯನ್ನು ಮಾಡಿಕೊಳ್ಳಲು ಅನುಕೂಲವನ್ನು ಮಾಡಲಾಗಿದೆ. ಆದರೆ ಕೊನೆ ಹಂತದ ಗ್ರಾಮಗಳಾದ ದಂಡೊತಿ, ತೆಂಗಳಿ, ಗುಂಡಗುರ್ತಿ, ಇವಣಿ, ಪೇಠಶಿರೂರ ಸೇರಿದಂತೆ ಕೊನೆ ಹಂತದ ರೈತರ ಜಮೀನುಗಳಿಗೆ ಇದರ ಸೌಲಭ್ಯವೂ ಇನ್ನು ಮರೀಚಿಕೆಯಾಗಿದೆ. 

ಚಿತ್ತಾಪುರ(ಆ.23): ದಶಕಗಳ ಹಿಂದೆ ಚಿತ್ತಾಪುರ ತಾಲೂಕಿಗೆ ನೀರಾವರಿ ಯೊಜನೆಯು ಪೂರಕವಾಲಿ ಎಂದು ಹೆರೂರ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಬೆಣ್ಣೆತೊರ ನೀರಾವರಿ ಯೊಜನೆಯು ಕೊನೆ ಹಂತದ ಗ್ರಾಮಗಳ ರೈತರ ಹೊಲಗಳಿಗೆ ಇನ್ನು ನೀರು ಬರದೇ ಅವರ ನೀರಾವರಿ ಕನಸು ಈಡೇರದಂತಹ ಸ್ಥಿತಿ ಉಂಟಾಗಿದೆ.

ಚಿತ್ತಾಪುರ ತಾಲೂಕಿನಲ್ಲಿ ಬಹುಪಾಲು ರೈತರು ಒಣ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಇಲ್ಲಿ ನೀರಾವರಿ ಕ್ಷೇತ್ರವು ಅಷ್ಟಾಗಿ ಬೆಳವಣೆಗೆಯಾಗದೆ ರೈತರು ಸದಾ ಸಂಕಷ್ಟಕ್ಕೆ ಈಡಾಗುತ್ತಿರುತ್ತಾರೆ. ಇದರಿಂದ ಹೊರಬಂದು ರೈತರು ಸಹ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಮುಂದಾಲೊಚನೆಯಿಂದ ಎಂಭತ್ತರ ದಶಕದಲ್ಲಿ ಆರಂಭಗೊಂಡ ಬೆಣ್ಣೆತೊರ ಯೊಜನೆಯು ನಿಧಾನಗತಿಯಲ್ಲಿ ನಡೆದು ಇಂದಿಗೂ ಕಾಮಗಾರಿಗಳು ನಡೆಯುತ್ತಿರುವುದರಿಂದ ಯೊಜನೆಯ ಕೊನೆ ಹಂತದಲ್ಲಿರುವ ಗ್ರಾಮಗಳ ರೈತರಿಗೆ ಇನ್ನೂ ಒಣ ಬೇಸಾ​ಸ​ಯವೇ ಗತಿ​ಯಾ​ಗಿ​ದೆ.

ಕಲಬುರಗಿ: ಅಪ್ರಾಪ್ತ ಅಕ್ಕ, ತಮ್ಮನಿಗೆ ಲೈಂಗಿಕ ಕಿರುಕುಳ, ಕಾಮುಕರ ಬಂಧನ

ತಾಲೂಕಿನಲ್ಲಿ ಈ ಯೊಜನೆಯು ಸುಮಾರು 82 ಕಿ.ಮಿ ವರೆಗಿನ ಬಲದಂಡೆ ಮತ್ತು 62 ಕಿ.ಮಿ ಎಡದಂಡೆ ಭಾಗ​ದ ರೈತರ ಜಮೀನುಗಳಿಗೆ ಅನುಕೂಲವಾಗಲೆಂದು ನಿರ್ಮಾಣವಾಗಿರವ ಈ ಯೊಜನೆಯು ಸಾವತಖೇಡ, ತೊಂಚಿ, ಕಮಕನೂರ, ಮಾರಡಗಿ, ಹೆಬ್ಬಾಳ, ಅಶೋಕ ನಗರ, ಕಣಸೂರ, ಕಲಗುರ್ತಿ, ಗುಂಡಗುಂರ್ತಿ, ತೊನಸನಹಳ್ಳಿ, ತೆಂಗಳಿ, ಮಲಕೂಡ, ಮಾಡಬೂಳ, ಸಂಗಾವಿ, ಕಾಟಮದೇವರಹಳ್ಳಿ, ವಚ್ಚಾ, ಕೊರವಾರ, ಮುಛಖೇಡ, ಬೆಣ್ಣೂರ, ಬೆಳಗುಂಪಾ, ಇವಣಿ, ದಂಡೊತಿ, ಪೇಠಶೀರೂರ ಸೇರಿದಂತೆ ಅನೇಕ ಗ್ರಾಮಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸಣ್ಣ ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ಮಿಸಿರುವ ಕಾಲುವೆಗಳ ನಿರ್ವಹಣೆ ಆಗದೇ ಕಾಲುವೆಯಲ್ಲಿ ಜೇಕು ಬೆಳೆದು ನೀರು ಮುಂದಕ್ಕೆ ಹೊಗದಂತೆ ಆಗಿದೆ. ಅಲ್ಲದೇ ಜಾಕ್‌ವೆಲ್‌ ಇರುವಲ್ಲಿ ಸುತ್ತಲು ಗಿಡಗಳು ಬೆಳೆದಿದ್ದರೂ ಕೂಡಾ ಸಂಬಂಧಿಸಿದ ಅಧಿ​ಕಾರಿಗಳು ಇತ್ತ ಗಮನ ಹರಿಸದಿರುವುದು ಇಲ್ಲಿನ ವಾತಾವರಣ ನೊಡಿದರೆ ಗೊತ್ತಾಗುತ್ತದೆ.

ಡ್ಯಾಂನ ಸುತ್ತ ಮುತ್ತಲು ಇರುವ ಗ್ರಾಮಗಳ ರೈತರಿಗೆ ಮಾತ್ರ ಇಲ್ಲಿಯವರೆಗೆ ಅಲ್ಪ ಸ್ವಲ್ಪ ನೀರಾವರಿಯನ್ನು ಮಾಡಿಕೊಳ್ಳಲು ಅನುಕೂಲವನ್ನು ಮಾಡಲಾಗಿದೆ. ಆದರೆ ಕೊನೆ ಹಂತದ ಗ್ರಾಮಗಳಾದ ದಂಡೊತಿ, ತೆಂಗಳಿ, ಗುಂಡಗುರ್ತಿ, ಇವಣಿ, ಪೇಠಶಿರೂರ ಸೇರಿದಂತೆ ಕೊನೆ ಹಂತದ ರೈತರ ಜಮೀನುಗಳಿಗೆ ಇದರ ಸೌಲಭ್ಯವೂ ಇನ್ನು ಮರೀಚಿಕೆಯಾಗಿದೆ. ಈಗ ಮಳೆಯು ಬಾರದೇ ಇರುವದರಿಂದ ರೈತರು ಬಿತ್ತಿದ ಬೆಳೆಗಳು ಒಣಗುತ್ತಿದ್ದು ಡ್ಯಾಮನಿಂದ ನೀರು ಬಿಟ್ಟಲ್ಲಿ ಬೆಳೆಗಳಿಗೆ ಅಲ್ಪ ಸ್ವಲ್ಪವಾದರೂ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ಭಾಗದ ರೈತರು.

ನಾನು ಬಾಂಬೆ ಬಾಯ್ಸ್‌ ಟೀಮ್‌ ಅಲ್ಲ, ಬಿಎಸ್‌ವೈ ಟೀಮ್‌: ಸಂಸದ ಉಮೇಶ್‌ ಜಾಧವ್

ಕ್ಷೇತ್ರದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಅವರು ಚಿತ್ತಾಪುರ ತಾಲೂಕು ಪಂಚಾಯತ ಸಭಾಂಗಣದಲ್ಲಿ ಅ​ಕಾರಿಗಳ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಜಿಲ್ಲೆಯ ಎಲ್ಲಾ ನಿರಾವರಿ ಯೊಜನೆಗಳು ಅವ್ಯವಹಾರದಲ್ಲಿ ತೊಡಗಿರುವದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಅವುಗಳ ಕುರಿತು ತನಿಖೆ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ಅ​ಕಾರಿಗಳು ಎಚ್ಚೆತ್ತುಕೊಂಡು ಬರದ ಛಾಯೆಯಿಂದ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸುವ ಕಾರ್ಯ ಮಾಡಬೇಕೆನ್ನುವದು ರೈತರ ಒತ್ತಾಯವಾಗಿದೆ.

ಮಳೆ ಇಲ್ಲದೆ ಸೊರಗುತ್ತಿರುವ ರೈತರ ಬೆಳೆಗಳಿಗೆ ಡ್ಯಾಂ ನಿಂದ ನೀರು ಬಿಟ್ಟಲ್ಲಿ ಈ ಭಾಗದ 20ರಿಂದ 30 ಪ್ರತಿಶತ ರೈತರಿಗೆ ತುಂಬಾ ಅನುಕೂಲವಾಗುವುದು. ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್‌ ಖರ್ಗೆ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ನೀರಾವರಿ ಕ್ಷೇತ್ರ ಉತ್ತೇಜನ ನೀಡುವ ಮೂಲಕ ಈ ಭಾಗದ ರೈತರು ನೀರಾವರಿಯಲ್ಲಿ ತೊಡಗುವಂತಹ ಯೊಜನೆಗಳನ್ನು ಹೆಚ್ಚಾಗಿ ರೂಪಿಸಿ ರೈತರು ಆರ್ಥಿಕವಾಗಿ ಸದೃಢರಾಗಲು ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ಮುಖಂಡ ಬಸವರಾಜ ಬೆಣ್ಣೂರಕರ್‌ ತಿಳಿಸಿದ್ದಾರೆ.