ಕೋಲಾರ(ಏ.05): ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಹೂ ಬೆಳೆಗಾರರು ತೀವ್ರ ನಷ್ಟಕ್ಕೆ ಒಳಗಾಗಿದ್ದು ಶುಭಕಾರ್ಯಗಳಿಗೆ ಉಪಯೋಗಿಸುತ್ತಿದ್ದ ಹೂಗಳನ್ನು ತಿಪ್ಪೆಗೆ ಎಸೆಯಲಾಗುತ್ತಿದೆ.

ಜಿಲ್ಲೆಯಲ್ಲಿ ಗುಲಾಬಿ, ಚೆಂಡು ಹೂ, ಮಲ್ಲಿಗೆ ಮುಂತಾದ ಹೂಗಳನ್ನು ಬೆಳೆಯುತ್ತಾರೆ. ಗುಲಾಬಿಯಲ್ಲಿ ಡಚ್‌, ರೆಡ್‌ರೂಬಿ ಜಾತಿ ಹೂಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ 5 ಸಾವಿರ ಹೂವು ಬೆಳೆಗಾರರು ಇದ್ದು ಅದರಲ್ಲಿ ಬಟನ್‌ ರೋಸ್‌ ಬೆಳೆಯುವವರು 3 ಸಾವಿರ ರೈತರಿದ್ದಾರೆ. ಲಕ್ಷಾಂತರ ಖರ್ಚು ಮಾಡಿ ಪಾಲಿಹೌಸ್‌ಗಳನ್ನು ನಿರ್ಮಿಸಿ ಗುಣಮಟ್ಟದ ರೋಸ್‌ಗಳನ್ನು ಬೆಳೆಯುವ 150 ಮಂದಿ ಇದ್ದಾರೆ. ಹೂವಿನ ಮಾರುಕಟ್ಟೆಯಿಲ್ಲದೆ ಇಂದು ಹೂ ಬೆಳೆಗಾರರು ತಿಂಗಳಿಗೆ 7ರಿಂದ 10 ಕೋಟಿ ರು.ಗಳಷ್ಟುನಷ್ಟವನ್ನು ಅನುಭವಿಸುತ್ತಿದ್ದಾರೆ.

ಬೆಳೆದಲ್ಲೇ ಕೊಳೆತ:

ಆದರೆ ಇದರಲ್ಲಿ ಪ್ರಮುಖವಾಗಿ ರೋಸ್‌ ಮತ್ತು ಚೆಂಡು ಮಲ್ಲಿಗೆ ಹೂಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಇವುಗಳನ್ನು ಹೊರದೇಶಗಳಿಗೂ ರಪ್ತು ಮಾಡಲಾಗುತ್ತದೆ. ವಿದೇಶದಲ್ಲಿ ಲಕ್ಷಾಂತರ ರು. ಬೆಲೆಗೆ ಮಾರಾಟವಾಗುತ್ತಿದ್ದ ಈ ಹೂಗಳಿಗೆ ಬೆಲೆ ಇಲ್ಲದೆ ಕಾಲ ಕಸವಾಗಿದೆ. ಲಾಕ್‌ಡೌನ್‌ನಿಂದಾಗಿ ವಾಹನ ಸಂಚಾರ ಮಾಡಲಾಗದೆ ತೋಟದಿಂದ ಹೊರಗೆ ಹೂಗಳನ್ನು ತರಲಾಗದೆ ಬೆಳೆದಲ್ಲೇ ಕೊಳೆಯುತ್ತಿದೆ.

ವದಂತಿಗಳಿಗೆ ಕಿವಿಗೊಡಬೇಡಿ: ಕೊರೋನಾ ಆತಂಕದ ಮಧ್ಯೆ ಸುಳ್ಳು ಸುದ್ದಿಗಳದ್ದೇ ಕಾರುಬಾರು!

ಹೂಗಳು ತೋಟದಲ್ಲೇ ಕೊಳೆತರೆ ಹೂವಿನ ಬೆಳೆಗೆ ರೋಗಗಳು ಬರುವುದರಿಂದ ಹೂಗಳನ್ನು ಕಿತ್ತು ತಿಪ್ಪೆಗೆ ಎಸೆಯಬೇಕಾಗಿದೆ. ತೋಟದಲ್ಲಿ ಬೆಳೆದಿರುವ ಹೂಗಳನ್ನು ಕಿತ್ತು ಹೊರ ಹಾಕಲೂ ಕೂಲಿ ಕೊಡಬೇಕಾದ ದುಸ್ಥಿತಿ ಇದೆ. ಚೆಂಡು ಹೂ ಬೆಳೆಯನ್ನು ಟ್ರ್ಯಾಕ್ಟರ್‌ಗಳಿಂದ ಉಳುಮೆ ಮಾಡುತ್ತಿದ್ದಾರೆ.

ಹೊರ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆ:

ಕೋಲಾರದಲ್ಲಿ ಬೆಳೆಯುವ ಚೆಂಡು ಮತ್ತು ರೋಸ್‌ ಹೂಗಳನ್ನು ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳಾ, ಮಹಾರಾಷ್ಟ್ರ, ಕಲ್ಕತ್ತ, ದೆಹಲಿಗೆ ಸಾಗಣೆ ಮಾಡಲಾಗುತ್ತದೆ, ಈ ರಾಜ್ಯಗಳಲ್ಲಿ ರೋಸ್‌ ಮತ್ತು ಚೆಂಡೂ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಕ್ವಾರಂಟೈನ್‌ನಲ್ಲಿದ್ದ ವಿದೇಶದಿಂದ ಬಂದ 2 ಸಾವಿರಕ್ಕೂ ಹೆಚ್ಚು ಜನಕ್ಕೆ ಕೊರೋನಾ ನೆಗೆಟಿವ್

ಡಚ್‌ ರೋಸ್‌ಗಳನ್ನು ಪಾಲಿಹೌಸ್‌ಗಳಲ್ಲಿ ಬೆಳೆಯಲಾಗುತ್ತಿದ್ದು ಈ ಗುಣಮಟ್ಟದ ಹೂಗಳನ್ನು ಅಮೆರಿಕ, ಇಂಗ್ಲೆಂಡ್‌, ಇಟಲಿ, ಫ್ರಾನ್ಸ್‌ ಹಾಗೂ ಅರಬ್‌ ದೇಶಗಳಿಗೂ ರಪ್ತು ಮಾಡಲಾಗುತ್ತದೆ. ಬೆಂಗಳೂರಿನ ದೇವನಹಳ್ಳಿ ಏರ್‌ಪೋರ್‌್ಟಬಳಿ ಹೂವಿಗೆ ಮಾರುಕಟ್ಟೆಇದ್ದು ವಿದೇಶಿ ಮತ್ತು ಹೊರ ರಾಜ್ಯಗಳ ವ್ಯಾಪಾರಸ್ಥರು ಇಲ್ಲಿ ಖರೀದಿಸಿ ಹೊರ ರಾಜ್ಯಗಳಿಗೆ ರಪ್ತು ಮಾಡುತ್ತಾರೆ.

ಲಾಕ್‌ಡೌನ್‌ನಿಂದಾಗಿ ಹೊರ ದೇಶಕ್ಕೆ ಹೋಗುವ ಸರಕು ಸಾಗಣೆ ವಿಮಾನಗಳು ಸಂಪೂರ್ಣ ರದ್ದಾಗಿರುವುದರಿಂದ ಹೂವಿನ ವ್ಯಾಪಾರ ಸಂಪೂರ್ಣ ಕುಸಿತಗೊಂಡಿದೆ. ಇದರಿಂದಾಗಿ ವ್ಯಾಪಾರಸ್ಥರೂ ತೀವ್ರ ನಷ್ಟಅನುಭವಿಸುತ್ತಿದ್ದಾರೆ. ಈ ಮಧ್ಯೆ ಹೂವಿನ ಬೇಸಾಯವನ್ನೇ ನಂಬಿಕೊಂಡಿರುವ ಕೂಲಿ ಕಾರ್ಮಿಕರ ಸಾವಿರಾರು ಕುಟುಂಬಗಳು ಕೂಲಿ ಇಲ್ಲದೆ ಬೀದಿ ಪಾಲಾಗಿವೆ.

ಗಂಗೆಯನ್ನು ಶೇ. 50ರಷ್ಟು ಸ್ವಚ್ಛಗೊಳಿಸಿದ ಲಾಕ್‌ಡೌನ್: ಉಸಿರಾಡ್ತಿದ್ದಾಳೆ ಪ್ರಕೃತಿ ಮಾತೆ!

ಲಾಕ್‌ಡೌನ್‌ನಿಂದಾಗಿ ರೋಸ್‌ ಹೂವು ಸೇರಿದಂತೆ ವಿವಿಧ ಹೂಗಳನ್ನು ಬೆಳೆಯುವ ರೈತರು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಇಂದು ಮದುವೆ, ದೇವಸ್ಥಾನ, ಶುಭಕಾರ್ಯಗಳು ಸಂಪೂರ್ಣವಾಗಿ ನಿಂತಿರುವುದರಿಂದ ಹೂವಿಗೆ ಮಾರುಕಟ್ಟೆಇಲ್ಲದಂತಾಗಿದೆ, ಪ್ರಮುಖವಾಗಿ ಸಂಚಾರ ವ್ಯವಸ್ಥೆ ಇಲ್ಲದೆ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ನಮ್ಮನ್ನೇ ನಂಬಿಕೊಂಡಿರುವ ಕೂಲಿ ಕಾರ್ಮಿಕರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಹೂವು ಬೆಳೆಗಾರ ವಕ್ಕಲೇರಿ ರಾಜಪ್ಪ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಸಂಚಾರಿ ವ್ಯವಸ್ಥೆ ಇಲ್ಲದಿರುವುದರಿಂದ ಹೂವು ಬೆಳೆಗಾರರಿಗೆ ಸಂಕಷ್ಟಎದುರಾಗಿದೆ. ಕಳೆದ ಎರಡು ದಿವಸಗಳಿಂದ ಬೆಳಗಿನ ಹೊತ್ತು ಸ್ವಲ್ಪ ಮಾರುಕಟ್ಟೆಗಳು ತೆರೆಯುತ್ತಿರುವುದರಿಂದ ಹೂವಿನ ಮಾರಾಟ ನಡೆಯುತ್ತಿದೆ ಮುಂದೆ ಇದು ಸರಿ ಹೋಗಲಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.