Dharwad: ಮೋಸಕ್ಕೆ ನೊಂದ ರೈತ ಕುಟುಂಬ ಆತ್ಮಹತ್ಯೆಗೆ ಯತ್ನ
* ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರಿನಲ್ಲಿ ನಡೆದ ಘಟನೆ
* ಗ್ರಾಮಸ್ಥರಿಂದ ರಕ್ಷಣೆ, ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು
* ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಗ್ರಾಮಸ್ಥರ ರಕ್ಷಣೆ
ಕಲಘಟಗಿ(ಫೆ.05): ಬೆಳೆಸಾಲ(Crop Loan) ಕೊಡಿಸುವುದಾಗಿ ಹೊಲ ಬರೆಸಿಕೊಂಡು ಮೋಸ ಮಾಡಿದ್ದಾರೆಂದು ನೊಂದ ರೈತರೊಬ್ಬರು ಕುಟುಂಬದ(Farmers Family) ಸದಸ್ಯರೊಂದಿಗೆ ಆತ್ಮಹತ್ಯೆಗೆ(Suicide) ಯತ್ನಿಸಿದ ಘಟನೆ ತಾಲೂಕಿನ ಜಿನ್ನೂರಿನಲ್ಲಿ ನಡೆದಿದೆ.
ಜಿನ್ನೂರ ಗ್ರಾಮದ ಚನ್ನಬಸಪ್ಪ ತಿಪ್ಪಣ್ಣ ಕುಷ್ಣಮ್ಮನವರ ಮೋಸಕ್ಕೆ ಒಳಗಾಗಿದ್ದು, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಜಿನ್ನೂರು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಗ್ರಾಮಸ್ಥರು ಅವರನ್ನು ರಕ್ಷಿಸಿ ಪೊಲೀಸರು(Police) ಮತ್ತು ತಹಸೀಲ್ದಾರ್ ಬಳಿ ಕರೆದೊಯ್ದಿದ್ದಾರೆ. ಆಗ ನಡೆದಿರುವ ಘಟನೆ ಬಗ್ಗೆ ಅವರು ವಿವರಿಸಿದ್ದಾರೆ. ಈ ಕುರಿತು ಕಲಘಟಗಿ(Kalaghatagi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Rape on Minor Girl : ಪತ್ನಿ ಹೆರಿಗೆಗೆ ಕಳಿಸಿ ಅಪ್ರಾಪ್ತೆ ಗರ್ಭಿಣಿಯಾಗಿಸಿದ : ಹೆದರಿ ಆತ್ಮಹತ್ಯೆಗೆ ಯತ್ನಿಸಿದ
ಏನಿದು ಘಟನೆ?:
ಚನ್ನಬಸಪ್ಪ ಎಂಬವರ 1.34 ಎಕರೆ ಜಮೀನಿಗೆ(Land) ಬೆಳೆಸಾಲ ಕೊಡಿಸುವುದಾಗಿ ನಂಬಿಸಿದ ಹೊರೋಗೆರೆ ಗ್ರಾಮದ ಶಂಕರ ಸಂಗಪ್ಪ ರೊಟ್ಟಿಗವಾಡ ಉಪನೋಂದಣಿ ಕಚೇರಿಗೆ ಹೋಗಿ ಸಹಿ ಮಾಡಿಸಿಕೊಂಡು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ನಂತರ ಸೂರಶೆಟ್ಟಿಕೊಪ್ಪ ಗ್ರಾಮದ ಮಂಜುನಾಥ ಮುರಳ್ಳಿಗೆ ಆ ಹೊಲವನ್ನು ಆರೋಪಿ ಶಂಕರ ಮಾರಾಟ ಮಾಡಿದ್ದಾನೆ. ಮಂಜುನಾಥ ಮುರಳ್ಳಿ ಅದೇ ಜಮೀನನ್ನು ಜಿನ್ನೂರ ಗ್ರಾಮದ ಕಲ್ಲಪ್ಪ ಮಹಾದೇಪ್ಪ ತೊಂಡಿಹಾಳಗೆ ಮಾರಾಟ ಮಾಡಲು ಸಿದ್ಧತೆ ನಡೆಸಿರುವಾಗ ಈ ವಿಷಯ ತಿಳಿದ ಚನ್ನಬಸಪ್ಪ ಕೇಳಲು ಹೋದಾಗ ಮೂವರು ಅವಾಚ್ಯವಾಗಿ ಬೈದು ಕಳುಹಿಸಿದ್ದಾರೆ. ಈ ಹಿನ್ನೆಲೆ ಚನ್ನಬಸಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಚನ್ನಬಸಪ್ಪ ಸೇರಿದಂತೆ ಆತನ ಕುಟುಂಬದ ಸದಸ್ಯರು ಮತ್ತು ರೈತ ಸಂಘದ ಮುಖಂಡರಾದ ಸೌಮ್ಯ ನಾಯಕಿ, ರವಿ ಕಾಂಬಳೆ, ಲೀಲಾವತಿ ವಾಗ್ಮೋಡೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಕೆಲ ಹೊತ್ತು ಧರಣಿ ನಡೆಸಿದ ಘಟನೆಯೂ ನಡೆಯಿತು. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ
ಹೊಸದುರ್ಗ(Hoadyrga): ಕೆಲಸದಿಂದ ತೆಗೆದಿದ್ದರಿಂದ ಮನನೊಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕನೋರ್ವ(Civil labor) ಪುರಸಭೆ ಕಚೇರಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಸಿದ ಘಟನೆ ಪಟ್ಟಣದಲ್ಲಿ ಫೆ.01 ರಂದು ನಡೆದಿತ್ತು. ಮಂಜುನಾಥ್ (35) ಆತ್ಮಹತ್ಯಗೆ ಯತ್ನಿಸಿದ್ದ ಪೌರ ಕಾರ್ಮಿಕ.
ಘಟನೆ ಹಿನ್ನಲೆ:
ನಾಲ್ಕು ವರ್ಷಗಳ ಹಿಂದೆ ಈತನನ್ನು ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕನನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಕಳೆದ 6 ತಿಂಗಳಿಂದ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು. ಈ ಹಿಂದೆಯೂ ಸರಿಯಾಗಿ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ಹಲವಾರು ಬಾರಿ ನೋಟಿಸ್ ನೀಡಿದಾಗ 6 ತಿಂಗಳ ಹಿಂದೆ ಇಲಿ ಪಾಷಣ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದ ಎನ್ನಲಾಗಿದೆ.ಮದ್ಯ ವ್ಯಸನಿಯಾಗಿದ್ದ ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಲ್ಲದೆ ಅನಾರೋಗ್ಯದಿಂದಲೂ ನರಳುತ್ತಿದ್ದ ಎಂದು ಹೇಳಲಾಗುತ್ತಿದೆ.
Love Failure: ಪ್ರೀತಿಸಿ ಕೈಕೊಟ್ಟ ಯುವತಿ: ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಯತ್ನ
ಬೆಳಿಗ್ಗೆ ಮದ್ಯ(Alcohol) ಸೇವಿಸಿ ಕಛೇರಿಗೆ ಬಂದ ಈತ ಕೈಯಲ್ಲಿ ಪೆಟ್ರೋಲ್ ತುಂಬಿದ ಬಾಟಲಿ ಹಿಡಿದು ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಿ ಇಲ್ಲವಾದರೆ ಇಲ್ಲಿಯೇ ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ ಎಂದು ಹೇಳುತ್ತಲೆ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಕಚೇರಿಯಲ್ಲಿದ್ದ ಪುರಸಭೆ ಅಧ್ಯಕ್ಷ ಶ್ರೀನಿವಾಸ್ ಹಾಗೂ ಅಧಿಕಾರಿಗಳು ತಕ್ಷಣವೇ ಬೆಂಕಿಯನ್ನು ಆರಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದ(Chitradurga)s ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.