Asianet Suvarna News Asianet Suvarna News

ಕಲಬುರಗಿ: ಮಳೆ ನಿರೀಕ್ಷೆಯಲ್ಲಿದ್ದ ರೈತರ ಲೆಕ್ಕಾಚಾರ ಬುಡಮೇಲು

ತೊಗರಿ ಕೀಟ ಬಾಧೆಯನ್ನು ಆವರಿಸಿಕೊಂಡಿದೆ. ಭಾಧೆ ನಿವಾಸಿರಿಸಲು ಕ್ರಿಮಿನಾಶಕ ಔಷಧಿ ಸಿಂಪರಣೆಯಲ್ಲೂ ತೊಡಗಿದ್ದಾರೆ. ಒಂದೆಡೆ ತೇವಾಂಶ ಕೊರತೆಯಿಂದ ಹಳ್ಳಹಿಡಿದ ತೊಗರಿ ಬೆಳೆಗೆ ಮತ್ತೊಂದೆಡೆ ಮಳೆಯಾದರೆ ನಾಲ್ಕು ಕಾಯಿಕಟ್ಟಬಹುದು ಎಂದುಕೊಂಡಿದ್ದ ರೈತರಿಗೆ ಈಗ ಬಾಧಿಸಿದ ಕೀಟ ಬಾಧೆ ನಿರ್ವಹಿಸಿಲು ಸಹ ಕೈಸುಟ್ಟು ಕೊಂಡಿದ್ದಾರೆ.

Farmers Faces Problems for No Rain in Kalaburagi grg
Author
First Published Nov 5, 2023, 10:41 PM IST

ಆಳಂದ(ನ.05): ಹಸಿರು ಬರದ ನಡುವೆ ಹಿಂಗಾರು ಮಳೆಯಾದರೆ ಅಳಿದುಳಿದ ತೊಗರಿ ಬೆಳೆಯಾದರೂ ಕೈಸೇರಲಿದೆ ಎಂಬ ಅನೇಕ ರೈತರ ನಿರೀಕ್ಷೆಗೆ ಭೂಮಿಯಲ್ಲಿನ ತೇವಾಂಶ ಕೊರತೆಯಿಂದ 56618 ಹೆಕ್ಟೇರ್ ನೀರಾವರಿ ಹೊರತು ಪಡಿಸಿ ಉಳಿದೆಯಲ್ಲ ಬೆಳೆ ನೆಲ ಕಚ್ಚಿದ್ದರಿಂದ ಅವರ ಲೆಕ್ಕಾಚಾರ ಬಿಡುಮೇಲಾಗಿ ಕಂಗಾಲಾಗಿಸಿದೆ.

ಈ ನಡುವೆ ತೊಗರಿ ಕೀಟ ಬಾಧೆಯನ್ನು ಆವರಿಸಿಕೊಂಡಿದೆ. ಭಾಧೆ ನಿವಾಸಿರಿಸಲು ಕ್ರಿಮಿನಾಶಕ ಔಷಧಿ ಸಿಂಪರಣೆಯಲ್ಲೂ ತೊಡಗಿದ್ದಾರೆ. ಒಂದೆಡೆ ತೇವಾಂಶ ಕೊರತೆಯಿಂದ ಹಳ್ಳಹಿಡಿದ ತೊಗರಿ ಬೆಳೆಗೆ ಮತ್ತೊಂದೆಡೆ ಮಳೆಯಾದರೆ ನಾಲ್ಕು ಕಾಯಿಕಟ್ಟಬಹುದು ಎಂದುಕೊಂಡಿದ್ದ ರೈತರಿಗೆ ಈಗ ಬಾಧಿಸಿದ ಕೀಟ ಬಾಧೆ ನಿರ್ವಹಿಸಿಲು ಸಹ ಕೈಸುಟ್ಟು ಕೊಂಡಿದ್ದಾರೆ.

ಕಲಬುರಗಿ: ಕೆಪಿಎಸ್‌ಸಿ ಕನ್ನಡ ಭಾಷೆ ಲಿಖಿತ ಪರೀಕ್ಷೆ ತುಂಬ ಕಟ್ಟುನಿಟ್ಟು

ನೆಲಕ್ಕಚ್ಚಿದ 56628 ಹೆಕ್ಟೇರ್ ತೊಗರಿ:

ಬಿತ್ತನೆ ತೊಗರಿ ಖುಷ್ಕಿ ಪ್ರದೇಶದಲ್ಲಿ 65117 ಹೆಕ್ಟೇರ್‌ ಗುರಿಯಲ್ಲಿ 82587 ಹೆಕ್ಟೇರ್ ಹೆಚ್ಚಿನ (ಶೇ 126.83) ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ 4360 ಗುರಿಯಲ್ಲಿ 2566 ಹೆಕ್ಟೇರ್ ಬಿತ್ತನೆ ಸಾಧನೆ (ಶೇ 58.85)ಸಾಧಿಸಲಾಗಿದೆ. ಖುಷ್ಕಿ ಮತ್ತು ನೀರಾವರಿ ಸೇರಿ ಬಿತ್ತನೆಯಾದ ತೊಗರಿ 85143 ಬಿತ್ತನೆನೆಯಲ್ಲಿ 28525 ಹೆಕ್ಟೇರ್ ತೊಗರಿ ಹಾನಿಯಾಗಿ ಬಾಕಿ ಉಳಿದಿದ್ದ ತೊಗರಿ 56628 ಹೆಕ್ಟೇರ್ ಪ್ರದೇಶದಲ್ಲಿನ ನೀರಾವರಿ ಬಿಟ್ಟು ಉಳಿದೆಯಲ್ಲ ಭಾಗಶಃ ತೇವಾಂಶ ಕೊರತೆಯಿಂದ ಬೆಳೆಯೂ ನೆಲಕ್ಕಚ್ಚಿದೆ.

ಹಿಂಗಾರು ಮಳೆಯೂ ಕೈಕೊಟ್ಟಿದ್ದರಿಂದ ರೈತರು ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ, ತೇವಾಂಶವಿಲ್ಲದೆ ಬಿತ್ತನೆಗೆ ಹಿಂದೇಟು ಹಾಕಿದ್ದಾರೆ. ಕೆಲವರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆಯೂ ನಡೆಸಿದ್ದು ಅಲ್ಲಲ್ಲಿ ಕಂಡುಬಂದಿದೆ.

ನೀರಿದ್ದರೂ ವಿದ್ಯುತ್ ಸಮಸ್ಯೆ:

ಬಾವಿ, ಕೊಳವೆ ಬಾವಿಯಲ್ಲಿ ನೀರಿರುವ ರೈತರು ತಮ್ಮ ತೋಟಗಾರಿಕೆ ಮತ್ತು ಒಣ ಬೇಸಾಯದ ಬೆಳೆ ಉಳಿಸಿಕೊಳ್ಳಲು ಮುಂದಾದರೆ ಸಕಾಲಕ್ಕೆ ಮತ್ತು ಸಮಯಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿದ್ದರಿಂದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಹೆಚ್ಚಿನ ಪಂಪ್‌ಸೆಟ್‌ ಅಳವಡಿಸಿದ್ದು, ಬಾರ ತಾಳದೆ ಪದೇ ಪದೇ ಸುಟ್ಟು ನಿಲ್ಲುತ್ತಿವೆ. ದುರಸ್ತಿಗೆ ಹೆಚ್ಚಿನ ದಿನ ಕಳೆಯುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಹಾಸ ಪಡುತ್ತಿದ್ದಾರೆ.

Follow Us:
Download App:
  • android
  • ios