ವಿಜಯಪುರದಲ್ಲಿ ಆಲಿಕಲ್ಲು ಮಳೆ ತಂದ ಆಪತ್ತು: 'ಕೈಗೆ ಬಂದ ತುತ್ತು ಬಾಯಿಗೆ ಬಾರದೆ' ಕಂಗಾಲಾದ ಅನ್ನದಾತ..!
* ಲಕ್ಷಾಂತರ ರು ಮೌಲ್ಯದ ದ್ರಾಕ್ಷಿ, ಒಣದ್ರಾಕ್ಷಿ ಹಾನಿ
* ಅಕಾಲಿಕ ಮಳೆಗೆ ಬಬಲೇಶ್ವರ ತಾಲೂಕಿನ ರೈತರು ಹೈರಾಣು
* ಬೆಳೆ ಕೈಗೆ ಬಂತು ಅನ್ನೋವಾಗಲೇ ಒಕ್ಕರಿಸಿದ ಆಲಿಕಲ್ಲು
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ(ಏ.05): ವಿಜಯಪುರ(Vijayapura) ಜಿಲ್ಲೆಯ ರೈತರ(Farmers) ಹಣೆಬರಹ ಸರಿ ಇದ್ದಂತೆ ಕಾಣ್ತಿಲ್ಲ. ಬೇಸಿಗೆ ಆರಂಭವಾಗಿದೆ ಬೆಳೆದ ದ್ರಾಕ್ಷಿ(Grape) ಕಟಾವಾಗಿ ತುತ್ತು ಬಾಯಿಗೆ ಬಂತು ಅನ್ನೋವಾಗ್ಲೇ ಆಲಿಕಲ್ಲು ಮಳೆ ಆಪತ್ತು ತಂದಿದೆ. ನಿನ್ನೆ ಸುರಿದ ಆಲಿಕಲ್ಲು ಮಳೆಗೆ ಕಟಾವಾಗದೆ ಉಳಿದಿದ್ದ ದ್ರಾಕ್ಷಿ, ಶೆಡ್ ನಲ್ಲಿ ಇಡಲಾಗಿದ್ದ ಒಣದ್ರಾಕ್ಷಿ ಹಾನಿಗೊಳಗಾಗಿದೆ. ಇತರ ಬೆಳೆಗಳು ನಷ್ಟವಾಗಿವೆ.
ಅಡವಿಸಂಗಾಪುರದಲ್ಲಿ ಆಲಿಕಲ್ಲು ಆರ್ಭಟ..!
ಬಬಲೇಶ್ವರ(Babaleshwar) ತಾಲೂಕಿನ ಅಡವಿಸಂಗಾಪುರ ಗ್ರಾಮದ ಸುತ್ತಮುತ್ತ ಆಲಿಕಲ್ಲು ಮಳೆ(Rain) ಆರ್ಭಟಿಸಿದೆ. ನಿನ್ನೆ ಸಂಜೆ ಸುರಿದ ಆಲಿಕಲ್ಲು ಮಳೆ ಅವಾಂತರವನ್ನೆ ಸೃಷ್ಟಿ ಮಾಡಿದೆ. ಗ್ರಾಮದಲ್ಲಿ ಬೆಳೆದ ಶೇ.100 ರಷ್ಟು ದ್ರಾಕ್ಷಿಯಲ್ಲಿ ಶೇ.30 ರಷ್ಟು ಇನ್ನು ಕಟಾವು ಆಗಬೇಕಿತ್ತು. ರೈತರು ಸಹ ಇನ್ನೆರೆಡು ದಿನಗಳಲ್ಲಿ ದ್ರಾಕ್ಷಿ ಕಟಾವು ಮಾಡಿದ್ರೆ ಆಯ್ತು ಎಂದುಕೊಂಡಿದ್ದರು. ಆದ್ರೆ ರೈತರ ದುರಾದೃಷ್ಟವೋ ಏನೋ ಏಕಾಏಕಿ ಆಲಿಕಲ್ಲು ಮಳೆ ಆರ್ಭಟಿಸಿದೆ. ಪರಿಣಾಮ ಕಟಾವಾಗದೇ ಉಳಿದಿದ್ದ ಅಪಾರ ಪ್ರಮಾಣದ ದ್ರಾಕ್ಷಿ ಹಾನಿಯಾಗಿದೆ. ಆಲಿಕಲ್ಲು ಹೊಡೆತಕ್ಕೆ ದ್ರಾಕ್ಷಿ ಹಣ್ಣು ಉದುರಿ ಹೋಗಿವೆ.. ಇನ್ನು ಗೊಣೆಗಳೇ ಕತ್ತರಿಸಿ ಬಿದ್ದಿವೆ. ಇನ್ನೇನು ದ್ರಾಕ್ಷಿ ಬಾಯಿಗೆ ಬಂತು ಅನ್ನೋವಾಗ್ಲೇ ಆಲಿಕಟ್ಟು ಆರ್ಭಟಿಸಿ ಬಾಯಿಗೆ ಮಣ್ಣು ಬೀಳುವಂತೆ ಮಾಡಿದೆ..
ಹೀಗಿದೆ ನೋಡಿ ಕತ್ನಳ್ಳಿ ಸ್ವಾಮೀಜಿಯ ಯುಗಾದಿ ಭವಿಷ್ಯ
ಸಾರವಾಡದಲ್ಲಿ ಅಪಾರ ಪ್ರಮಾಣದ ಒಣದ್ರಾಕ್ಷಿ ಹಾನಿ..!
ಅಡವಿಸಂಗಾಪುರ, ಸಾರವಾಡ ಸೇರಿದಂತೆ ಹಲವು ಹಳ್ಳಿಗಳಲ್ಲಿ ಆಲಿಕಟ್ಟು ಆರ್ಭಟಿಸಿದೆ. ಗ್ರಾಮದ ಹೊರಗೆ ಶೆಡ್ ಗಳಲ್ಲಿ ಒಣದ್ರಾಕ್ಷಿ ತಯಾರಿಸಲು ಇಡಲಾಗಿದ್ದ ದ್ರಾಕ್ಷಿ ಎಲ್ಲವು ಹಾಳಾಗಿವೆ. ಆಲಿಕಟ್ಟು ಜೊತೆಗೆ ಬಿರುಗಾಳಿ ಬೀಸಿದ ಪರಿಣಾಮ ಶೆಡ್ ಗಳಿಗೆ ಹಾಕಲಾಗಿದ್ದ ತಾಡಪತ್ರಿಗಳು ಕೂಡ ಕಿತ್ತುಕೊಂಡು ಹೋಗಿವೆ. ಪರಿಣಾಮ ಒಣದ್ರಾಕ್ಷಿ ಸಂಗ್ರಹಿಸಿದ್ದ ಶೆಡ್ ಒಳಗೆ ಆಲಿಕಲ್ಲು ಹೊಕ್ಕು ಅಪಾರ ಪ್ರಮಾಣದ ಒಣದ್ರಾಕ್ಷಿ ಹಾನಿಯಾಗಿದೆ. ಅಂಬರಿಶ್ ಪವಾರ್ ಎಂಬುವರ ೪ ಏಕರೇ ದ್ರಾಕ್ಷಿ ಸೇರಿ, 1ರ್ಯಾಕ್ ನಷ್ಟು ಒಣದ್ರಾಕ್ಷಿ ಹಾನಿಯಾಗಿದೆ. ಸರಿಸುಮಾರು 7ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದೆ.
ನೆಲಕಚ್ಚಿದ ವಿವಿಧ ಬೆಳೆಗಳು..!
ಇನ್ನು ಆಲಿಕಲ್ಲು ಹೊಡೆತಕ್ಕೆ ದ್ರಾಕ್ಷಿ, ಒಣದ್ರಾಕ್ಷಿ ಮಾತ್ರವನ್ನ ಕಟಾವಿಗೆ ಬಂದಿದ್ದ ಇತರೆ ಬೆಳೆಗಳು ಹಾನಿಗೊಳಗಾಗಿವೆ. ಅಡವಿ ಸಂಗಾಪುರದ ಅರುಣ ಕೊಟ್ಯಾಳ್, ನಬಿ ಎಂಬುವರಿಗೆ ಸೇರಿದ ಗೋವಿನ ಜೋಳ, ಬಾಳೆ ನಾಶವಾಗಿವೆ. ಇನ್ನು ಬೇವಿನ ಮರ, ಪಪ್ಪಾಯಿ ನೆಲಕ್ಕುರುಳಿವೆ.. ಅದ್ರಲ್ಲು ಫಸಲಿಗೆ ಬಂದಿದ್ದ ಗೋವಿನ ಜೋಳ ಸಂಪುರ್ಣವಾಗಿ ನೆಲಕಚ್ಚಿ ಹೋಗಿದ್ದು ರೈತರು ಕೈಕೈ ಹಿಸುಕಿಕೊಳ್ತಿದ್ದಾರೆ..
ಬೆಳೆಹಾನಿ ಪರಿಹಾರಕ್ಕೆ ಮನವಿ
ನಿನ್ನೆ ಸುರಿದ ಆಲಿಕಲ್ಲು ಆರ್ಭಟಕ್ಕೆ ಅಪಾರ ಪ್ರಮಾಣದಲ್ಲಿ ಸಷ್ಟ(Loss) ಉಂಟಾಗಿದೆ. ಲಕ್ಷಾಂತರು ಬೆಲೆಬಾಳುವ ಒಣದ್ರಾಕ್ಷಿ, ದ್ರಾಕ್ಷಿ, ಗೋವಿನ ಜೋಳ, ಪಪ್ಪಾಯಿ ಸೇರಿದಂತೆ ಹಲವು ಬೆಳೆಗಳು(Crop) ಕೈಗೆ ಬರುವ ಸಮಯದಲ್ಲೆ ನಾಶವಾಗಿ ಹೋಗಿವೆ. ಅಕಾಲಿಕ ಮಳೆಯಿಂದ, ಆಲಿಕಲ್ಲಿನಿಂದ ಉಂಟಾದ ಬೆಳೆಹಾನಿಗೆ ಪರಿಹಾರ(Compensation) ನೀಡುವಂತೆ ರೈತರು(Farmers) ಮನವಿ ಮಾಡಿಕೊಳ್ತಿದ್ದಾರೆ.