Asianet Suvarna News Asianet Suvarna News

ಹೀಗಿದೆ ನೋಡಿ ಕತ್ನಳ್ಳಿ ಸ್ವಾಮೀಜಿಯ ಯುಗಾದಿ ಭವಿಷ್ಯ

ಕತ್ನಳ್ಳಿ ಸದಾಶಿವ ಮಠಾಧಿಪತಿ ಶಿವಯ್ಯ ಮುತ್ಯಾ ಕಾಲಜ್ಞಾನ ನುಡಿದಿದ್ದಾರೆ. ಈ ವರ್ಷದ ಭವಿಷ್ಯದ ಜೊತೆಗೆ, ಕೆಲ ಕಿವಿಮಾತನ್ನೂ ಹೇಳಿದ್ದಾರೆ ಸ್ವಾಮೀಜಿ. 

Katnalli Sadashiv mutt guru Shivayya Swamijis Ugadi yearly prediction skr
Author
bangalore, First Published Apr 4, 2022, 4:52 PM IST

ವಿಜಯಪುರ ತಾಲೂಕಿನ ಕತ್ನಳ್ಳಿ ಗ್ರಾಮದ ಚಕ್ರವರ್ತಿ ಸದಾಶಿವ ಮಠ(Chakravarti Sadashiva Mata)ದಲ್ಲಿ ನುಡಿಯೋ ಭವಿಷ್ಯ(prediction)ಕ್ಕೆ ಬಹಳ ಮಹತ್ವವಿದೆ. ಬಬಲಾದಿ ಮೂಲ ಮಠ(Babaladi mutt)ದಲ್ಲಿ ಶಿವರಾತ್ರಿಯಂದು ಭವಿಷ್ಯ ನುಡಿದರೆ, ಇಲ್ಲಿ ಯುಗಾದಿ(Ugadi)ಯಂದು ಭವಿಷ್ಯ ನುಡಿಯೋದು ವಾಡಿಕೆ. ಯುಗಾದಿಯಂದು ನಡೆಯುವ ಕತ್ನಳ್ಳಿ ಸದಾಶಿವ ಅಜ್ಜನ ಜಾತ್ರೆಯ ದಿನವೇ ಇಲ್ಲಿ ಶಿವಯ್ಯ ಸ್ವಾಮಿಗಳು ಮುಂದಿನ ಒಂದು ವರ್ಷದ ಭವಿಷ್ಯವನ್ನ ನುಡಿಯುತ್ತಾರೆ. ಈ ಭವಿಷ್ಯ ನಿಜವಾಗುವುದು ಎಂಬ ನಂಬಿಕೆ ಈ ಭಾಗದ ಬಹುತೇಕ ಎಲ್ಲರದ್ದು. 

ಈ ವರ್ಷ ಯುಗಾದಿ ಹೊಸತೊಡಕಿನ ಮರುದಿನ ಶಿವಯ್ಯ ಮುತ್ಯಾ ಭವಿಷ್ಯ ನುಡಿದಿದ್ದು, ಭಕ್ತರು ನಿಟ್ಟುಸಿರು ಬಿಡುವಂಥ ಮಾತು ಹೇಳಿದ್ದಾರೆ. ಹೌದು, ಶುಭಕೃತ ನಾಮ ಸಂವತ್ಸರ ಎಲ್ಲರಿಗೂ ಶುಭ ಮಾಡಲಿದೆ ಎಂದಿದ್ದಾರೆ ಕತ್ನಳ್ಳಿಯ ಶ್ರೀ ಚಕ್ರವರ್ತಿ ಸದಾಶಿವ ಮಠದ ಪೀಠಾಧಿಪತಿ ಶಿವಯ್ಯ ಮುತ್ಯಾ.

ಸಂಸ್ಕೃತಿ ಉಳಿಸಿ
ಭಾರತೀಯ ಸಂಸ್ಕ್ರತಿಯನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು. ಆಗ ವಿಶ್ವದ ಎಲ್ಲ ದೇಶಗಳು ಭಾರತದ ಮಾತು ಕೇಳುತ್ತವೆ. ಭಾರತ ದೇಶದಲ್ಲಿ ಸಂಸ್ಕ್ರತಿ, ಸಂಸ್ಕಾರ, ಆಚಾರ, ವಿಚಾರ ಉಳಿದಿದ್ದೆ ಹೆಣ್ಣುಮಕ್ಕಳಿಂದ. ಇವೆಲ್ಲವುಗಳನ್ನು ಹೆಣ್ಣುಮಕ್ಕಳು ಬಂಗಾರದ ಆಭರಣ ಕಾಪಾಡಿದಂತೆ ಕಾಪಾಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ. ಜೊತೆಗೆ, ಶುಭಕೃತ ಸಂವಸ್ಥರದಲ್ಲಿ ನೀವು ಕೆಟ್ಟ ಕೆಲಸ ಮಾಡಿದರೆ ಅದರ ಅನುಭವ ನೀವೆ ಉಣ್ಣುವಿರಿ ಎಂದು ಎಚ್ಚರವನ್ನೂ ಹೇಳಿದ್ದಾರೆ. 

ನಿಮ್ಮ ಕೂದಲ ಸಮಸ್ಯೆಗೂ ಗ್ರಹದೋಷ ಕಾರಣ! ಇಲ್ಲಿದೆ ಪರಿಹಾರ..

ಚುನಾವಣಾ ವಿಚಾರವಾಗಿಯೂ ಭವಿಷ್ಯ 
ಚುನಾವಣಾ ವಿಷಯವಾಗಿಯೂ ಭವಿಷ್ಯ ನುಡಿದಿರುವ ಸ್ವಾಮೀಜಿ, ಜನರಿಗೆ ಹಣಕ್ಕೆ ಮತ ಹಾಕಬೇಡಿ, ಗುಣಕ್ಕೆ ಮತ ಹಾಕಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ಕೈ ತಿದ್ದಿಕೋಬೇಕು ಎನ್ನುತ್ತದೆ. ಮುಂದಿನ ಜಾತ್ರೆಯಲ್ಲಿ ಅದರ ಭವಿಷ್ಯ ಸ್ಪಷ್ಟವಾಗುತ್ತದೆ. ಭಾರತದ ದೇಶದ ಸಂಸ್ಕ್ರತಿಯನ್ನು ಉಳಿಸಿಕೊಂಡು ಹೊಂಟವರನ್ನು ಹೃದಯಲ್ಲಿಟ್ಟುಕೊಳ್ಳಿ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ, ಇಷ್ಟೆಲ್ಲ ಜನಕ್ಕೂ ಸೌಲಭ್ಯ ಒದಗಿಸಿರುವ ಭಾರತ ಸರ್ಕಾರಕ್ಕೆ ನೀವೆಲ್ಲ ನೆನೆಸಬೇಕು. ಒಳ್ಳೆಯವರು, ಕೆಟ್ಟವರು ಯಾರು ಎಂದು ನೀವೆಲ್ಲ ಯೋಚಿಸಿ. ಕೊರೊನಾಗೆ ಎರಡು ಡೋಸ್ ಲಸಿಕೆ ಉಚಿತವಾಗಿ ನೀಡಲಾಗಿದೆ. ಬೇರೆ ಬೇರೆ ದೇಶಗಳಗೂ ಲಸಿಕೆ ನೀಡಲಾಗಿದೆ. ಅಂಥವರನ್ನ ಮರೆಯಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ. 

Astrology Prediction: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?! ಇದರಿಂದ ಒಳ್ಳೇದಾಗತ್ತಾ ಅಥವಾ ಕೆಟ್ಟದ್ದಾ?

ಜಾತಿಗೊಂಡು ಝೇಂಡಾ, ಝೇಂಡಾದಲ್ಲೊಂದು ಅಜೆಂಡಾ
ಜಾತಿ ವಿಷಯದಲ್ಲಿ ಬುದ್ಧಿಮಾತು ಹೇಳಿರುವ ಶಿವಯ್ಯ ಮುತ್ಯಾ, ಜಾತಿಗೊಂಡು ಝೇಂಡಾ, ಝೇಂಡಾದಲ್ಲೊಂದು ಅಜೆಂಡಾ ಕೊನೆಗೆ ಹಾದಿಗೊಂದು, ಬೀದಿಗೊಂದು ಆಗುತ್ತವೆ, ಅದಕ್ಕೆ ಯಾರೂ ಮೆಚ್ಚಬಾರದು. 
ಜಾತಿಯನ್ನೂ ಬಿಡಬೇಡಿ, ನೀತಿಯನ್ನೂ ಬಿಡಬೇಡಿ. ಪ್ರೀತಿಯನ್ನೂ ಬಿಡಬೇಡಿ, ಪದ್ದತಿಯನ್ನೂ ಬಿಡಬೇಡಿ, ಸಂಸ್ಕ್ರತಿಯನ್ನೂ ಬಿಡಬೇಡಿ. ಜಾತಿ ಮನೆಯೊಳಗೆ ಇರಲಿ, ಬಾಗಿಲು ದಾಟಿದ ಬಳಿಕ ಪ್ರೀತಿ ಇರಲಿ. ಸಮಾಜಕ್ಕೆ ಬಂದರೆ ನೀತಿ ಇರಲಿ, ಸೇವೆಗೆ ಬಂದಾಗ ಪದ್ದತಿ ಇರಲಿ ಎನ್ನುವ ಮೂಲಕ ಪರೋಕ್ಷವಾಗಿ ಹಿಜಾಬ್, ಹಲಾಲ್ ಪದ್ದತಿಗಳು ತಮ್ಮ ಮನೆಗಷ್ಟೇ ಸೀಮಿತವಾಗಿರಲಿ ಎಂಬ ಸಂದೇಶ ನೀಡಿದ್ದಾರೆ. 

ಹವಾಮಾನ
ವಾತಾವರಣದಲ್ಲಿ ಬದಲಾಗಲಿದೆ, ಬಿಸಿಲು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದ ಶಿವಯ್ಯ ಸ್ವಾಮಿ, ಈ ಬಾರಿ ಮೂರು ಪ್ರಕಾರದ ಮಳೆ ಸುರಿಯಲಿದ್ದು, ಒಂದು ಪ್ರಕಾರದ ಮಳೆ ಹರಕು ಮಳೆ, ಮುರುಕು ಹಪ್ಪಳದಂತೆ.. ಮತ್ತೊಂದೆಡೆ ಟೊಳ್ಳು ಟುಸ್ಸು ಎಂಬಂತೆ ಇರುತ್ತದೆ. 
ಮಲೆನಾಡು ಹೋಗಿ ಬೆಳವಲ ನಾಡು, ಬೆಳವಲ ನಾಡು ಹೋಗಿ ಮಲೆನಾಡು ಆಗಲಿದೆ ಎಂದಿದ್ದಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios