Asianet Suvarna News Asianet Suvarna News

ಲಾಕ್‌ಡೌನ್ ಎಫೆಕ್ಟ್‌: ಒಂದು ಕೆಜಿ ಟೊಮೆಟೋಗೆ ಬರೀ 4 ರುಪಾಯಿ..!

ಕಳೆದ ಮೂರು ತಿಂಗಳ ಹಿಂದೆ ತನ್ನ ಜಮೀನಿನಲ್ಲಿ ಟೊಮೋಟೋ ಹಾಕಿ ಉತ್ತಮ ಹಣ ಗಳಿಸುವ ನಿರೀಕ್ಷೆ ಹೊಂದಿದ್ದ ರಾಜೇಶ್‌ ಗೆ ಈಗ ನಿರಾಸೆಯ ಕಾರ್ಮೋಡ ಕವಿದಿದೆ. ಹನ್ನೆರಡು ಕೆಜಿ ಟೊಮೆಟೋ ಕೇವಲ 50 ರುಪಾಯಿಗೆ ಮಾರಬೇಕಾಗಿ ಬಂದಿದೆ.

 

Farmer sold tomato for 4 rupees per kg in Tumakuru
Author
Bangalore, First Published May 9, 2020, 12:41 PM IST

ತುಮಕೂರು(ಮೇ 09): ಒಂದ್‌ ಕ್ರೇಟ್‌ ಟೊಮೆಟೋ 50 ರುಪಾಯಿ. ಬನ್ನಿ ಬನ್ನಿ ಬನ್ನಿ. ಒಂದಲ್ಲ, ಎರಡಲ್ಲ ಹತ್ತು ಹನ್ನೆರಡು ಕೆಜಿ ಟೊಮೆಟೋ ಕೇವಲ 50 ರುಪಾಯಿಗೆ ಬನ್ನಿ, ಬನ್ನಿ.

ಇದು ತುರುವೇಕೆರೆ ಪಟ್ಟಣದ ಹಳೇ ಬಸ್‌ ನಿಲ್ದಾಣದಲ್ಲಿ ಮುನಿಯೂರಿನ ರಾಜೇಶ್‌ ತನ್ನ ವಾಹನದಲ್ಲಿ ಲೋಡುಗಟ್ಟಲೇ ಟೊಮೆಟೋಗಳನ್ನು ಮಾರುತ್ತಿದ್ದ ಪರಿ. ಕಳೆದ ಮೂರು ತಿಂಗಳ ಹಿಂದೆ ತನ್ನ ಜಮೀನಿನಲ್ಲಿ ಟೊಮೋಟೋ ಹಾಕಿ ಉತ್ತಮ ಹಣ ಗಳಿಸುವ ನಿರೀಕ್ಷೆ ಹೊಂದಿದ್ದ ರಾಜೇಶ್‌ ಗೆ ಈಗ ನಿರಾಸೆಯ ಕಾರ್ಮೋಡ ಕವಿದಿದೆ.

ಲಾಕ್‌ಡೌನ್‌: ಬಡವರಿಗೆ ಕುಂಬಳಕಾಯಿ ಹಂಚಿದ ಕಾಂಗ್ರೆಸ್ ಮುಖಂಡ

ಕಳೆದ ಮೂರ್ನಾಲ್ಕು ದಿನಗಳಿಂದ ಬೆಳಗ್ಗೆಯೇ ತನ್ನ ವಾಹನದಲ್ಲಿ ಟೊಮೆಟೋವನ್ನು ತುಂಬಿಕೊಂಡು ಬರುವ ರಾಜೇಶ್‌ ಟೊಮೋಟೋ ಕೀಳುವ ಕೂಲಿಯೂ ಸಿಗುತ್ತಿಲ್ಲ. ಜೊತೆಗೆ ಈಗ ವಾಹನವನ್ನೂ ಸಹ ಇದರೊಂದಿಗೆ ತರಬೇಕು. ಇದರ ಡೀಸೆಲ್‌ ದುಡ್ಡೂ ಸಹ ಹುಟ್ಟುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕೊರೋನಾದಿಂದ ರೈತಾಪಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಬೆಂಗಳೂರಿನಲ್ಲಿದ್ದ ಸಾವಿರಾರು ಮಂದಿ ತಮ್ಮ ಗ್ರಾಮಗಳಿಗೆ ವಾಪಸಾಗಿದ್ದಾರೆ. ಈಗ ವ್ಯವಸಾಯವನ್ನು ಮುಂದುವರಿಸಿದ್ದಾರೆ.

'ಆನ್‌ಲೈನ್ ಬೇಡ': ಶಾಲೆ ಕಂಪೌಂಡ್ ಒಳಗಡೆ ನಡೆಯುತ್ತಾ ಪಾಠ..?

ಹಲವಾರು ಮಂದಿ ತರಕಾರಿ ಬೆಳೆಯುವುದರಲ್ಲಿ ನಿರತರಾಗಿದ್ದರೆ, ಮತ್ತೆ ಕೆಲವರು ಮಾರುಕಟ್ಟೆಗೆ ತೆರಳಿ ಅಲ್ಲಿ ಸಿಗುವ ತರಕಾರಿ ಮತ್ತಿತರರೆ ಪದಾರ್ಥಗಳನ್ನು ಮಾರುತ್ತಿದ್ದಾರೆ. ಬೆಳೆಗಳು ಸಾಕಷ್ಟುಬರುತ್ತಿದ್ದು ಬೇಡಿಕೆ ಕಡಿಮೆ ಇರುವುದರಿಂದ ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ರಾಜೇಶ್‌ ಸಂಕಟಪಡುತ್ತಾರೆ.

Follow Us:
Download App:
  • android
  • ios