ಮೈಸೂರು(ಮೇ 09): ಶಾಲಾ ಪಠ್ಯ ಕಡಿತ, ಆನ್‌ಲೈನ್‌ ಪಾಠ ಸಂಬಂಧ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಸಲಹೆ ನೀಡಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಐಎಎಸ್‌, ಕೆಎಎಸ್‌ಗಳ ಸಲಹೆ ಪಡೆದು ಶಾಲಾ ಪಠ್ಯ ಕಡಿತಗೊಳಿಸಬಾರದು. ಶಾಲಾ ಶಿಕ್ಷಕರು, ಮಕ್ಕಳ ಪೋಷಕರು, ಶಿಕ್ಷಣ ತಜ್ಞರ ಸಲಹೆ ಪಡೆದು ಈ ಬಗ್ಗೆ ನಿರ್ಧರಿಸುವುದು ಸೂಕ್ತ ಎಂದು ಹೇಳಿದರು.

ಕೊರೋನಾ ಸೋಂಕಿತ ಮಹಿಳೆಯಿಂದ ಸಂಡೂರಿಗೆ ಆತಂಕ..!

ಶಾಲಾ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಬೇಕಾದರೇ ಎಲ್ಲರ ಬಳಿಯೂ ಸ್ಮಾರ್ಟ್‌ ಫೋನ್‌ ಇರುವುದಿಲ್ಲ. ರಾಜ್ಯದ ಬಹುತೇಕ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಲಾಗಿದ್ದು, ಶಾಲಾ ಕಾಂಪೌಂಡ್‌ ಆವರಣದಲ್ಲೇ ಪಾಠ ಮಾಡುವುದು ಒಳಿತು. ಈ ವಿಚಾರದಲ್ಲಿ ಅವಸರ ಮಾಡಿ ಗೊಂದಲ ಸೃಷ್ಟಿಸುವುದು ಬೇಡ ಎಂದರು.

ಕೆಲವು ಕಾಯಕ, ಶ್ರಮಿಕ ಸಮಾಜಕ್ಕೆ ಸರ್ಕಾರ ಪ್ಯಾಕೇಜ್‌ ಘೋಷಿಸಿದೆ. ಅದೇ ರೀತಿ ಉಳಿದ ಬೇರೆ ಬೇರೆ ಸ್ಥರಗಳಲ್ಲಿ ದುಡಿಯುತ್ತಿರುವ ವೃತ್ತಿ ಕಾರ್ಮಿಕರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದರು.

ಕೂಡ್ಲಿಗಿಯಲ್ಲಿ ಓಡಾಡಿದ್ದ ದಾವಣಗೆರೆ ಕೊರೋನಾ ಸೋಂಕಿತ..!

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಾಡಿರುವ ಹೇಳಿಕೆ ನಿಜ. ರಾಜ್ಯದಲ್ಲಿ ಹಣಕಾಸು ವ್ಯವಸ್ಥೆ ಕೆಡಿಸಿ ಹೋಗಿದ್ದು ಯಾರು? ಹಣಕಾಸು ಮೂಲ ಮುಚ್ಚಿದವರು ಯಾರು? ರಾಜ್ಯದ ಆರ್ಥಿಕ ಶಿಸ್ತು ಕೆಡೆಸಿದವರು ಯಾರು? ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಡಲು ಕಾಂಗ್ರೆಸ್‌ ಕಾರಣ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರಮಿಕ ವರ್ಗವನ್ನು ಗುರುತಿಸಿದ್ದಾರೆ. ಹೀಗಾಗಿ, ಅಹಿಂದ, ಶ್ರಮಿಕ ವರ್ಗಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ ಪಕ್ಷದವರಿಗಿಲ್ಲ ಎಂದು ಅವರು ಕಿಡಿಕಾರಿದರು.