Asianet Suvarna News Asianet Suvarna News

ಅತಿವೃಷ್ಟಿಯಿಂದ ಕಂಗಾಲಾದ ರೈತ; ಗಾಯದ ಮೇಲೆ ಬರೆ ಎಳೆದ ಬ್ಯಾಂಕ್ ನೋಟಿಸ್!

 ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ರೈತರನ್ನ ಕಂಗೆಡಿಸಿದೆ. ಬೆಳೆದ ಬೆಳೆಗಳೆಲ್ಲ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆ  ಮರುಪಾವತಿಸದ್ದಕ್ಕೆ ಬ್ಯಾಂಕ್ ನೀಡಿರುವ ನೋಟಿಸ್ ನಿಂದ ರೈತರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

Farmer distressed by heavy rains and  Bank notice gadag farmers rav
Author
Bangalore, First Published Aug 11, 2022, 11:13 AM IST

ವರದಿ : ಗಿರೀಶ್ ಕಮ್ಮಾರ, ಏಷ್ಯ ನೆಟ್ ಸುವರ್ಣ ನ್ಯೂಸ್ ಗದಗ

ಗದಗ (ಆ.11) : ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಅನ್ನದಾತರನ್ನ ಕಂಗಾಲು ಮಾಡಿದೆ.. ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ ನೆಲ ಕಚ್ಚಿವೆ. ಬೆಳೆಹಾನಿಯಿಂದ ಸಂಕಷ್ಟದಲ್ಲಿರುವಾಗಲೇ ರೈತ್ರಿಗೆ ಸಾಲ ಮರುಪಾವತಿಗಾಗಿ ಬ್ಯಾಂಕ್ ನಿಂದ ನೋಟಿಸ್ ಬಂದಿದ್ದು, ಅನ್ನದಾತರ ನಿದ್ದೆ ಕೆಡಿಸಿದೆ..  ಗದಗ(Gadag) ಜಿಲ್ಲೆ ಮುಂಡರಗಿ(Mundaragi) ತಾಲೂಕಿನ ರೈತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank), ಸಾಲ ಮರುಪಾವತಿ ನೋಟಿಸ್ ನೀಡಿದೆ.‌.

ಡಬಲ್‌ ಆಗಿದ್ದು ರೈತರ ಆದಾಯವಲ್ಲ, ಸಾಲ: ಮೋದಿ ವಿರುದ್ಧ ಸಿದ್ದು ಟೀಕೆ

ಡೋಣಿ ಗ್ರಾಮದ ರೈತ್ರು 2010 ರಿಂದ ಪಿಎಲ್  ಬ್ಯಾಂಕ್(PL Bank) ನಿಂದ ಬೆಳೆ ಸಾಲ(Crop Loan) ಪಡೆದಿದ್ರು.. 2016 ರಿಂದ ಸರಿಯಾಗಿ ಹಣ ಮರುಪಾವತಿ ಮಾಡಿರಲಿಲ್ವಂತೆ.. ಅತಿವೃಷ್ಟಿ, ಅನಾವೃಷ್ಟಿಯಿಂದ ಹಣ ಮರುಪಾವತಿ ಸಾಧ್ಯವಾರಿಲಿಲ್ಲ.. ಡೋಣ ಭಾಗದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿ ಸಂಭವಿಸ್ತಾನೆ ಬಂದಿದೆ.. ಈ ಬಾರಿ ಅತಿಯಾದ ಮಳೆಯಿಂದಾಗಿ ಗ್ರಾಮದಲ್ಲಿ ಹರಿಯುವ ಮೂರು ಹಳ್ಳಗಳು ತುಂಬಿ 500 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ.. ನೀರಿನ ಮಟ್ಟ ಇಳಿಯುವ ಲಕ್ಷಣ ಹಾಕ್ತಿಲ್ಲ.. ಇಂಥದ್ರಲ್ಲಿ ಬ್ಯಾಂಕ್ ಸಿಬ್ಬಂದಿ ಅಂತಿಮ ನೋಟಿಸ್ ನೀಡಿ, ರೈತರ ಜೀವನದ ಜೊತೆ ಆಟವಾಡೋದಕ್ಕೆ ಮುಂದಾಗಿದೆ.. 

ಜಪ್ತಿ, ಹರಾಜು ಪ್ರಕ್ರಿಯೆ ನಡೆಸೋದಾಗಿ ನೋಟಿಸ್:

ಡೋಣಿ ಗ್ರಾಮದ ವ್ಯಾಪ್ತಿಯ 20 ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ನೋಟಿಸ್ ನೀಡಲಾಗಿದೆ, ವಾರದಲ್ಲಿ ಹಣ ಪಾವತಿಸ್ಬೇಕು. ಇಲ್ದಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ತೀವಿ ಅಂತಾ ನೋಟಿಸ್ ನಲ್ಲಿ ಹೇಳಲಾಗಿದೆ.. ಅಧಿಕ ಮಳೆಯಿಂದ ಕಂಗಾಲಾದ ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದ ಅನುಭವವಾಗಿದೆ.. ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರಯವಾಗಲೇ ಸಾಲ ಮರುಪಾವತಿಗಾಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡ್ತಿದಾರೆ ಅಂತಾ ಗ್ರಾಮದ ರೈತ್ರು ಆರೋಪಿಸ್ತಿದಾರೆ.. ಪೂರ್ಣ ಪ್ರಮಾಣದ ಹಣ ನೀಡ್ದಿದ್ರೆ, ಜಪ್ತಿ, ಹರಾಜು ಪ್ರಕ್ರಿಯೆ ನಡೆಸೋದಾಗಿ ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.. 

ವಾಡಿಕೆಗಿಂತ ಹೆಚ್ಚಿನ ಮಳೆ: ಅಪಾರ ನಷ್ಟ

 

ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ,  ಆದ್ರೂ ನೋಟಿಸ್!

ಗದಗ ಜಿಲ್ಲೆ 3 ಲಕ್ಷ 17 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದೆ.. ಈ ಪೈಕಿ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.. 73 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ನಿರಂತರ ಮಳೆಗೆ ನೆಲ ಕಚ್ಚಿದೆ.. ಇಂಥದ್ರಲ್ಲಿ ರೈತ್ರು, ಸಾಲದ ಹಣ ಮರು ಪಾವತಿಸಲು ಸಾಧ್ಯವಾ ಅನ್ನೋ ಪ್ರಶ್ನೆ ಉದ್ಭವಿಸಿದೆ.. 

ಲಕ್ಷಾಂತರ ರೂಪಾಯಿ ಲಾಭ ನಿರೀಕ್ಷೆ ಮಾಡಿದ್ದ ಅನ್ನದಾತನಿಗೆ ಬೆಳೆನಾಶ ಹೊಡೆತ ಕೊಟ್ಟಿದೆ.. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲರೇ, ರೈತರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾನಿಯಾದ ಬಗ್ಗೆ ವಿವರ ನೀಡಿದ್ರು.. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರೈತರಿಗೆ ಬ್ಯಾಂಕ್ ನೋಟಿಸ್ ನೀಡ್ಲಾಗಿದ್ದು, ಅಧಿಕಾರಿಗಳಿಗೆ ಮಾಹಿತಿ ಇಲ್ಲ ಅಂತಿದಾರೆ.. ಬೆಳೆಯಿಂದ ಲಾಭನೂ ಇಲ್ಲ, ಸರಕಾರದಿಂದ ಪರಿಹಾರವೂ ಇಲ್ಲ, ಈ ನಡುವೆ ಬ್ಯಾಂಕ್ ನೋಟಿಸ್ ನೀಡಿದ್ದು ರೈತರನ್ನ ಅಕ್ಷರಶಃ ಕಂಗಾಲಾಗಿಸಿದೆ.. ಬ್ಯಾಂಕ್ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರ ಹಿಡಿಶಾಪ ಹಾಕುವಂತೆ ಮಾಡಿದೆ.. ಸರ್ಕಾರ ಈ ಬಗ್ಗೆ ಗಮನ ಹರಿಸಿ ನೋಟಿಸ್ ವಾಪಾಸ್ ನಡೆದು ರೈತರಿಗೆ ಕಾಲಾವಕಾಶ ಕೊಡುವಂತೆ ಮಾಡ್ಬೇಕಿದೆ.. ಈ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಿದೆ..

Follow Us:
Download App:
  • android
  • ios