Fake Nandini Ghee : ಎಚ್ಚರ ! ರಾಜ್ಯದಲ್ಲಿ ತಲೆ ಎತ್ತಿದೆ ನಕಲಿ ತುಪ್ಪದ ಜಾಲ

  • ನಕಲಿ ನಂದಿನಿ ತುಪ್ಪ ಜಾಲ ಇದೀಗ ನೆಲಮಂಗಲದಲ್ಲಿಯೂ ಪತ್ತೆ
  • ನೆಲಮಂಗಲದ ಮಾಕಳಿ ಬಳಿ ಬೃಹತ್ ಘಟಕದಲ್ಲಿ ಸಂಗ್ರಹಿಸಿದ್ದ ತುಪ್ಪ
Fake packets of Nandini ghee worth 15 lakhs seized in nelamangala snr

 ನೆಲಮಂಗಲ (ಡಿ.21) : ಕೆಲ ದಿನಗಳ ಹಿಂದಷ್ಟೆ ಮೈಸೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಪತ್ತೆಯಾಗಿದ್ದ ನಕಲಿ ನಂದಿನಿ ತುಪ್ಪ ಜಾಲ ಇದೀಗ ನೆಲಮಂಗಲದಲ್ಲಿಯೂ ಪತ್ತೆಯಾಗಿದೆ.  ನೆಲಮಂಗಲದ ಮಾಕಳಿ ಬಳಿ ಬೃಹತ್ ಘಟಕದಲ್ಲಿ ಸಂಗ್ರಹಿಸಿದ್ದು ಈ ಘಟಕದ ಮೇಲೆ ಅಧಿಕಾರಿಗಳು ದಾಳಿ  ನಡೆಸಿದ್ದಾರೆ. ನಕಲಿ ನಂದಿನಿ ತುಪ್ಪದ ಜಾಲದ ಮೇಲೆ ಆಹಾರ ಸಂರಕ್ಷಣಾ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿದ್ದು ಮಾಕಳಿಯ ಖಾಸಗಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ನಕಲಿ ನಂದಿನಿ ತುಪ್ಪವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಕೆಎಂಎಪ್ ನ ನಂದಿನಿ ತುಪ್ಪವನ್ನೇ ಹೋಲುವ ನಕಲಿ ಪ್ಯಾಕೇಟ್‌ನಲ್ಲಿ ತುಪ್ಪ ಸಂಗ್ರಹಿಸಿದ್ದು ಸುಮಾರು 15 ಲಕ್ಷ ಮೌಲ್ಯದ ನಕಲಿ ತುಪ್ಪ ವಶಕ್ಕೆ ಪಡೆದುಕೊಳ್ಳಲಾಗಿದೆ.  

ಮೈಸೂರಿನಲ್ಲಿ ತಯಾರಾಗುವ ನಕಲಿ ತುಪ್ಪ  ರಾಜ್ಯದ ಮೂಲೆ ಮೂಲೆಗೂ ಸರಬರಾಜಾಗಿದ್ದು  ಹಲವೆಡೆ ನಕಲಿ  ತುಪ್ಪದ ಹಾವಳಿ ಕಂಡು ಬರುತ್ತಿದೆ. ಮಾದನಾಯಕನಹಳ್ಳಿ ಪೊಲೀಸ್  ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದ್ದು,  ಲಕ್ಷ ಲಕ್ಷ ಮೌಲ್ಯದ ತುಪ್ಪದ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದಿದ್ದು,  ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. 

ನಂದಿನಿ ತುಪ್ಪ ನಕಲಿ ಹಿಂದೆ ಕೆಎಂಎಫ್‌ನ ವೈಫಲ್ಯವೂ ಇದೆ : ಮೈಸೂರಿನಲ್ಲಿ (Mysuru) ಕೆಎಂಎಫ್‌ನ (KMF) ನಂದಿನಿ ತುಪ್ಪ ನಕಲಿ ತಯಾರಿಕೆ ಚಟುವಟಿಕೆ ನಡೆಯುವುದರ ಹಿಂದೆ ಕೆಎಂಎಫ್‌ನ ವೈಪಲ್ಯವೂ ಇದೆ. ಕೆಎಂಎಫ್‌ನ ವಿಚಕ್ಷಣ ದಳ ಸರಿಯಾಗಿ ಕೆಲಸ ಮಾಡಿದ್ದರೇ ಇಂತಹ ಅಕ್ರಮ ಚಟುವಟಿಕೆ ನಡೆಯುತ್ತಿರಲಿಲ್ಲ ಎಂದು ಮಾಜಿ ಮೇಯರ್‌ ಬಿ.ಎಲ್‌. ಭೈರಪ್ಪ ಆರೋಪಿಸಿದರು.

ನಾಲ್ಕು ತಿಂಗಳ ಹಿಂದಿನಿಂದಲೇ ಅಲ್ಲಿ ನಕಲಿ ತುಪ್ಪ(Fake Ghee ) ತಯಾರಿಕೆ ನಡೆಯುತ್ತಿದ್ದರೂ ಸಂಘಟನೆಯೊಂದರಿಂದ ಬೆಳಕಿಗೆ ಬಂದಿದೆ. ಇದೇ ವೇಳೆ ಘಟಕಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ತಯಾರಾದ ನಕಲಿ ತುಪ್ಪವನ್ನು ಪ್ರತಿಷ್ಠಿತ ಸಿಹಿ ತಿನಿಸು ತಯಾರಿಕಾ ಸಂಸ್ಥೆಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ಕೆಎಂಎಫ್‌ ಅಧಿಕಾರಿಗಳು ಆರೋಪಿಸಿರುವುದು ಸರಿಯಲ್ಲ. ಏಜೆನ್ಸಿ ಹಾಗೂ ಕೆಎಂಎಫ್‌ ಮಳಿಗೆಯಿಂದಲೇ ತುಪ್ಪ ಖರೀದಿಸುತ್ತಿದ್ದಾರೆ. ಹೀಗಾಗಿ ತನಿಖೆ ಹಂತದಲ್ಲಿ ಮಳಿಗೆಯ ಹೆಸರನ್ನು ಬಳಸಿರುವುದು ಸರಿಯಲ್ಲ ಎಂದು ಅವರು   ಖಂಡಿಸಿದರು.

ನಂದಿನಿ (Nandini) ಪಾರ್ಲರ್‌ಗಳಲ್ಲಿ ಸಿಗುವ ತುಪ್ಪದ ದರ ಮಾಲ್‌ಗಳಲ್ಲಿ ಸುಮಾರು . 15 ಕಡಿಮೆ ಬೆಲೆಗೆ ದೊರೆಯುತ್ತದೆ. ಈ ರೀತಿ ಕೆಎಂಎಫ್‌ ಗ್ರಾಹಕರನ್ನು ವಂಚಿಸುವುದು ಸರಿಯಲ್ಲ. ಮಾಲ್‌ಗಳಲ್ಲಿ ಮಾರಾಟ ಮಾಡುವ ಬೆಲೆಗೇ ಪಾರ್ಲರ್‌ಗಳಲ್ಲೂ ಮಾರಾಟ ಮಾಡಬಹುದಾಗಿತ್ತು ಎಂದರು. 

ಹೊಟೇಲ್‌ (Hotel) ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಮಹಾಲಕ್ಷ್ಮಿ ಸ್ವೀಟ್ಸ್‌ನ ಏಳಿಗೆ ಸಹಿಸಲಾಗದವರು ನಕಲಿ ತುಪ್ಪ ಬಳಕೆಗೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನು ನಕಲಿ ತುಪ್ಪ ತಯಾರಿಸಿ ಮಾರಾಟ ವೇಳೆ ಬಳಸುವ ಪ್ಯಾಕೆಟ್‌ಗಳು ನಕಲಿ ಘಟಕಕ್ಕೆ ಎಲ್ಲಿಂದ ಬಂದವು ಎಂಬುದು ಸಹ ಶಂಕೆ ಮೂಡಿಸುತ್ತದೆ. ಸದ್ಯದಲ್ಲಿ ಕೆಎಂಎಫ್‌ ಅವನ್ನು ಗುಜರಾತ್‌ನಿಂದ ತರಿಸುತ್ತಿದ್ದು, ಈ ನಕಲಿ ಘಟಕಕ್ಕೂ ಅವು ಸಿಗುವ ನಿಟ್ಟಿನಲ್ಲಿ ಕೆಎಂಎಫ್‌ ಅಧಿಕಾರಿಗಳೇ ಶಾಮೀಲಾಗಿರಬಹುದು. ಈ ಸಂಬಂಧ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಹೊಟೇಲ್‌ ಉದ್ಯಮಿ ರವಿಶಾಸ್ತ್ರಿ ಇದ್ದರು.

  • ನೆಲಮಂಗಲ : ಮತ್ತೇ ನಕಲಿ ನಂದಿನಿ ತುಪ್ಪ ಜಾಲ ಪತ್ತೆ
  • ನಕಲಿ ನಂದಿನಿ ತುಪ್ಪದ ಜಾಲದ ಮೇಲೆ ದಾಳಿ 
  • ನೆಲಮಂಗಲದ ಮಾಕಳಿ ಬಳಿ ಅಧಿಕಾರಿಗಳ ದಾಳಿ 
  • ಆಹಾರ ಸಂರಕ್ಷಣಾ ಇಲಾಖೆ ಹಾಗೂ ಪೊಲೀಸರಿಂದ ದಾಳಿ 
  • ಮಾಕಳಿಯ ಖಾಸಗಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ನಕಲಿ ನಂದಿನಿ ತುಪ್ಪ 
  • ಕೆಎಂಎಪ್ ನ ನಂದಿನಿ ತುಪ್ಪವನ್ನೇ ಹೋಲುವ ನಖಲಿ ತುಪ್ಪ 
  • ಸುಮಾರು 15 ಲಕ್ಷ ಮೌಲ್ಯದ ನಕಲಿ ತುಪ್ಪ ವಶ 
Latest Videos
Follow Us:
Download App:
  • android
  • ios