ಧಾರವಾಡ(ಡಿ.16): ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕಳ್ಳತನ ಮಾಡಿದ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗ್ರಾಮದ ಜಮೀನೊಂದರಲ್ಲಿ ಬಾಳೆಗಿಡಗಳನ್ನು ಕಡಿದು ಕದ್ದೊಯ್ದಿದ್ದಾರೆ.  

ಸೋಮಾಪುರ ಗ್ರಾಮದ ರಾಯಪ್ಪ ಸುಳ್ಳದ ಎಂಬ ರೈತನ ಬಾಳೆ ತೋಟಕ್ಕೆ ಆಗಮಿಸಿದ ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಬೆಲೆ ಬಾಳುವ ಬಾಳೆಗಿಡಗಳನ್ನು ಕದ್ದೊಯ್ದು ಪರಾರಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಕಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮಾಡಿದ ಕೈಚಳಕದಿಂದ ರೈತ ರಾಯಪ್ಪ ಸುಳ್ಳದ ಅವರಿಗೆ ಸುಮಾರು 1 ಲಕ್ಷ ನಷ್ಟ ಉಂಟಾಗಿದೆ. ಸುಮಾರು 200 ಕ್ಕೂ ಹೆಚ್ಚು ಬಾಳೆಗಿಡಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)