ತನ್ನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರೊಂದಿಗೆ ಸೇರಿ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.  

ಹುಬ್ಬಳ್ಳಿ: ತನ್ನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರೊಂದಿಗೆ ಸೇರಿ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬಲ್ಡೋಜರ ನಿವಾಸಿಯಾದ ಮಹ್ಮದ ರಫೀಕ್ ಆಯಟ್ಟಿ(40) ಎನ್ನುವ ವ್ಯಕ್ತಿಯೇ ಹತ್ಯೆಯಾದ ದುರ್ದೈವಿ.

ಪತ್ನಿ ಶಬಾನಾ ಆಯಟ್ಟಿ ಹಾಗೂ ಪ್ರೀಯಕರ ಬಾಷಾ ಸಾಬ್ ಸೇರಿ ಈ ಕೃತ್ಯ ಎಸಗಿದ್ದು, ಇಬ್ಬರನ್ನೂ ಕೂಡ ಬಂಧಿಸಲಾಗಿದೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇದ್ದು, ಇದಕ್ಕೆ ಪತಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದರಿಂದ ಪ್ರಿಯಕರ ಬಾಷಾ ಸಾಬ್ ಜೊತೆ ಸೇರಿ ಪತಿಯನ್ನು ಕೊಡಲಿಯಿಂದ ಹೊಡೆದು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದಾರೆ.

ಜೂನ್‌ 11 ರಂದೇ ಶವ ಪತ್ತೆಯಾಗಿದ್ದು, ಬಳಿಕ ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದರು. ನವನಗರ ಪೊಲೀಸ ಇನ್ಸ್ ಪೆಕ್ಟರ್ ಎಸ್.ಆರ್ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಬಳಿಕ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವಿಚಾರಣೆ ವೇಳೆ ತನ್ನ ಹಾಗೂ ಬಾಷಾ ಸಾಬ್ ನಡುವೆ ಅನೈತಿಕ ಸಂಬಂಧ ಇರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.