* ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ದೂರು * ಪೊಲೀಸರಿಂದಲೇ ಸ್ಫೋಟಕಗಳು ಮಾರಾಟವಾಗಿರುವ ಆರೋಪ * 4580 ಡಿಟೋನೇಟರ್‌ ನಾಪತ್ತೆ  

ಮಂಡ್ಯ(ಆ.02): ಪೊಲೀಸರ ವಶದಲ್ಲಿದ್ದ ಭಾರೀ ಪ್ರಮಾಣದ ಸ್ಫೋಟಕಗಳು ನಾಪತ್ತೆಯಾಗಿದ್ದು, ಮಾರಾಟವಾಗಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ದೂರಿದ್ದಾರೆ. 

ಜ.21ರಂದು ಕೆ.ಆರ್‌.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ 6800 ಡಿಟೋನೇಟರ್‌, 14,400 ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವನ್ನು ವ್ಯಕ್ತಿಯೊಬ್ಬರ ಸ್ಥಳದಲ್ಲಿರಿಸಿದ್ದರು. ಜು.18ರಂದು ನಾಶಪಡಿಸಲು ಹೋದಾಗ 4580 ಡಿಟೋನೇಟರ್‌ ನಾಪತ್ತೆಯಾಗಿವೆ. 

ಶಿವಮೊಗ್ಗದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ

ಸ್ಫೋಟಕಗಳನ್ನು ಪೊಲೀಸರೇ ಗಣಿ ಮಾಲೀಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ರವೀಂದ್ರ ಆರೋಪಿಸಿದ್ದಾರೆ.