ಶಿವಮೊಗ್ಗದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಾಗ್ರಿಗಳು ಪತ್ತೆಯಾಗಿವೆ. ಇಲ್ಲಿನ ವಿಮಾನ ನಿಲ್ದಾನದ ಬಳಿಯಲ್ಲಿ ಸ್ಫೊಟಕಗಳು ಪತ್ತೆಯಾಗಿವೆ. 

ಶಿವಮೊಗ್ಗ (ಮಾ.09): ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಸ್ಥಳದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದೆ.

ಈ ಸ್ಫೋಟಕ ಕಾನೂನು ಬದ್ಧವಾಗಿಯೇ ಇಲ್ಲಿಗೆ ಬಂದಿದ್ದು, ಸ್ಫೋಟಿಸಲು ಕಾನೂನಾತ್ಮಕ ತೊಂದರೆ ಉಂಟಾದ ಪರಿಣಾಮ ಪೂರೈಕೆದಾರರು ಸ್ಫೋಟಕವನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆನ್ನಲಾಗಿದೆ.

ಸುಮಾರು 904 ಕೆ.ಜಿ ಜಿಲೆಟಿನ್ ಕಡ್ಡಿಗಳು, 3267 ಡಿಟೋನೇಟರ್, ಪೇಸ್ಟ್ ಪತ್ತೆಯಾಗಿದೆ. ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಬಂಡೆ ಸ್ಫೋಟಿಸಲು ಚಿಕ್ಕಬಳ್ಳಾಪುರದ ಪೂರೈಕೆದಾರರೊಬ್ಬರು ಕಾನೂನಾತ್ಮಕವಾಗಿಯೇ ಈ ಸ್ಫೋಟಕಗಳನ್ನು ಪೂರೈಕೆ ಮಾಡಿದ್ದರೆನ್ನಲಾಗಿದೆ. 

ಶಿವಮೊಗ್ಗ ಸ್ಫೋಟ : 616 ಡಿಟೋನೇಟರ್‌ ಪತ್ತೆಹಚ್ಚಿದ ಎಎಸ್‌ಸಿ ತಂಡ

ಹುಣಸೊಡು ಘಟನೆ ಬಳಿಕ ಈ ಪ್ರಮಾಣದ ಸ್ಫೋಟಕ ಬಳಸಲು ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಹೀಗಾಗಿ ಪೂರೈಕೆದಾರರು ದೊಡ್ಡ ಪ್ರಮಾಣದ ಸ್ಪೋಟಕ ವಸ್ತುಗಳನ್ನ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. 

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರೀಯ ದಳ ಆಗಮಿಸಿ ಸ್ಫೋಟಕಗಳನ್ನು ನಿಷ್ಕ್ರೀಯ ಗೊಳಿಸಿದೆ. 

ಅಜಾಗರೂಕತೆಯಿಂದ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಬಿಟ್ಟುಹೋದ ಚಿಕ್ಕಬಳ್ಳಾಪುರ ಮಾಲೀಕರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.