Asianet Suvarna News Asianet Suvarna News

ಯಾವ ಅನುಭವಗಳೂ ಮನುಷ್ಯನನ್ನು ವಂಚಿಸುವುದಿಲ್ಲ

ಯಾವ ಅನುಭವಗಳು ಮನುಷ್ಯನನ್ನು ವಂಚಿಸುವುದಿಲ್ಲ, ಆದರೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಚ್‌.ಎಲ್‌. ಮಲ್ಲೇಶ್‌ಗೌಡ ಹೇಳಿದರು.

  experiences do not deceive a man  mallesh Gowda
Author
First Published Jan 29, 2023, 6:02 AM IST

 ಕೆ.ಆರ್‌. ನಗರ :  ಯಾವ ಅನುಭವಗಳು ಮನುಷ್ಯನನ್ನು ವಂಚಿಸುವುದಿಲ್ಲ, ಆದರೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಚ್‌.ಎಲ್‌. ಮಲ್ಲೇಶ್‌ಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಕನ್ನಡ ಎಂ.ಎ ವಿಭಾಗದ ದಶಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿ ನಿತ್ಯ ಜಗತ್ತಿನ ವಿದ್ಯಾಮಾನಗಳನ್ನು ಅರಿಯಬೇಕು ಎಂದರು.

ತಮ್ಮಿಂದ ಕಲಿತ ವಿದ್ಯಾರ್ಥಿಗಳು ಸಾಧಕರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿದರೆ ಅದರಿಂದ ಅಕ್ಷರ ಕಲಿಸಿದ ಗುರುಗಳಿಗೆ ಆಗುವ ತೃಪ್ತಿಯನ್ನು ವರ್ಣಿಸಲು ಅಸಾಧ್ಯ ಎಂದು ಅವರು ಬಣ್ಣಿಸಿದರು.

ಕುವೆಂಪು ಅವರ ಆಶಯಗಳನ್ನು ಸಾಕಾರಗೊಳಿಸಲು ಯುವ ಜನತೆ ಮತ್ತು ವಿದ್ಯಾರ್ಥಿ ವೃಂದ ಕೆಲಸ ಮಾಡಿ ಆ ಮೂಲಕ ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೌಢ್ಯ ಮತ್ತು ಕಂದಾಚಾರಗಳನ್ನು ತೊಡೆದು ಹಾಕಲು ಕಂಕಣಬದ್ದರಾಗಿ ಮುಂದಡಿ ಇಡಬೇಕೆಂದರು. ಸಾಹಿತ್ಯವನ್ನು ಅಧ್ಯಯನ ಮಾಡಿ ಕನ್ನಡವನ್ನು ಅಭ್ಯಸಿಸುವವರು ಗ್ರಾಮೀಣ ಜನರ ಬಾಷೆಯ ಶೈಲಿ ಮತ್ತು ಅವರ ಜೀವನ ಕ್ರಮವನ್ನು ಗಮನಿಸಿದರೆ ಬಾಷೆಯ ಸೊಗಡು ಮತ್ತು ಶ್ರೀಮಂತಿಕೆಯನ್ನು ಕಾಣಬಹುದು ಎಂದು ಅವರು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಕೆ.ಸಿ. ವೀರಭದ್ರಯ್ಯ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾದಯ್ಯ ಮಾಕನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಪೊ›.ಎಂ. ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮಾತನಾಡಿ, ತಮ್ಮ ಅನುಭವ ಮತ್ತು ಪ್ರಾಧ್ಯಾಪಕರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು, ಆನಂತರ ವರ್ಗಾವಣೆಗೊಂಡಿರುವ ಹಾಗೂ ನಿವೃತ್ತ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.

ಮುಖ್ಯಅತಿಥಿಗಳಾಗಿ ಪತ್ರಾಂಕಿತ ವ್ಯವಸ್ಥಾಪಕ ಎಂ. ರಘು, ಹಿರಿಯ ಕನ್ನಡ ಸಹ ಪ್ರಾಧ್ಯಾಪಕ ಡಾ.ಡಿ. ಸತೀಶ್‌ಚಂದ್ರ, ವಿಶೇಷ ಆಮಂತ್ರಿತರಾಗಿ ನಿವೃತ್ತ ಪ್ರಾಂಶುಪಾಲ ಆರ್‌.ಕೆ.ಆರ್‌. ಕರುಣಾಕರ, ಕಾಲೇಜಿ ಅಧ್ಯಾಪಕ ಕಾರ್ಯದರ್ಶಿ ಡಾ.ಎಚ್‌. ಉರೀಗೌಡ, ಸ್ನಾತಕೋತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಚಿಕ್ಕಮಗಳೂರು ಗಣೇಶ್‌, ಹರೀಶ್‌, ಡಾ.ಕೆ.ಎಸ್‌. ಜ್ಯೋತಿ, ಡಾ.ಕೆ.ಆರ್‌. ಚಂದ್ರಕಲಾ, ಸಿ.ಎಂ. ಶ್ವೇತಾ, ಕೆ.ಎಸ್‌. ಯೋಗೇಶ್‌, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಎ.ಎಸ್‌. ರಾಮಪ್ರಸಾದ್‌, ಅಂಕಿತಾ ಕಶ್ಯಪ್‌, ಮಂಜುನಾಥ್‌, ಪ್ರಮೋದ್‌ ಇದ್ದರು.

Follow Us:
Download App:
  • android
  • ios