Asianet Suvarna News Asianet Suvarna News

3 ವರ್ಷ ಕಳೆದರೂ ಸಿಗದ ಭೂನಕ್ಷೆ: ಅಧಿಕಾರಿಗಳಿಗೆ ತರಾಟೆ

ಎರಡು- ಮೂರು ವರ್ಷಗಳಾದರೂ ಭೂನಕ್ಷೆಗಳು, ದಾಖಲೆಗಳು ಅರ್ಜಿದಾರರಿಗೆ ಸಿಗದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

even after 3 years Land map not given to applicants in mangalore
Author
Bangalore, First Published Nov 22, 2019, 1:56 PM IST

ಮಂಗಳೂರು(ನ.22): ಎರಡು- ಮೂರು ವರ್ಷಗಳಾದರೂ ಭೂನಕ್ಷೆಗಳು, ದಾಖಲೆಗಳು ಅರ್ಜಿದಾರರಿಗೆ ಸಿಗದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

ಕಡತಗಳನ್ನು ಮೂರು ತಿಂಗಳೊಳಗಾಗಿ ಇತ್ಯರ್ಥಗೊಳಿಸಿ, ಜನರಿಗೆ ಬೇಕಾದ ನಕ್ಷೆ, ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಮಾಡಿಕೊಡಬೇಕು. ಆದರೆ ನಿಮ್ಮ ಬಳಿ ಬಂದವರಿಗೆ ಕಳೆದ ಮೂರು ವರ್ಷಗಳಿಂದ ನಕ್ಷೆ ಸಹಿತ ದಾಖಲೆಗಳನ್ನು ನೀಡದೆ ಯಾಕೆ ಸತಾಯಿಸುತ್ತಿದ್ದೀರಿ. ದಾಖಲೆಗಳನ್ನು ಜನರ ಬಳಿ ಬೇಡಿಕೆ ಇಟ್ಟಿರುವ ಆಡಿಯೋ ರೆಕಾರ್ಡ್‌ ನನ್ನ ಬಳಿ ಇದೆ ಎಂದಿದ್ದಾರೆ.

ಕಟೀಲು ಮೇಳ ತಿರುಗಾಟದ ನೇತೃತ್ವ ಡಿಸಿಗೆ: ಹೈಕೋರ್ಟ್‌ ಮಧ್ಯಂತರ ಆದೇಶ.

ವಯೋವೃದ್ಧರು ಕೂಡ ಬಂದು ನನ್ನ ಬಳಿ ಇಲ್ಲಿನ ವ್ಯವಸ್ಥೆ, ಸತಾಯಿಸುವ ರೀತಿಯ ಬಗ್ಗೆ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮುಂದೆ ಸೂಕ್ತ ರೀತಿಯಲ್ಲಿ ಜನರ ಕೆಲಸ ಮಾಡದಿದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಮುಂದಿನ 15 ದಿನಗಳೊಳಗಡೆ ಹಳೆ ಬಾಕಿರುವ ಕಡತಗಳನ್ನು ಇತ್ಯರ್ಥ ಮಾಡಿಕೊಡಬೇಕು ಎಂದು ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

Follow Us:
Download App:
  • android
  • ios