ಹಾಲು ಉತ್ಪಾದಕ ರೈತರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಪಶು ಆಹಾರ ದೊರುಕುವಂತೆ ಮಾಡಲು ಹಾವೇರಿಯಲ್ಲಿ ಪಶು ಆಹಾರ ಉತ್ಪಾದನೆ ಘಟಕ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ಘೋಷಿಸಿದರು.

ಹಾವೇರಿ (ಮಾ.11) : ಹಾಲು ಉತ್ಪಾದಕ ರೈತರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಪಶು ಆಹಾರ ದೊರುಕುವಂತೆ ಮಾಡಲು ಹಾವೇರಿಯಲ್ಲಿ ಪಶು ಆಹಾರ ಉತ್ಪಾದನೆ ಘಟಕ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಘೋಷಿಸಿದರು.

ತಾಲೂಕಿನ ಜಂಗಮನಕೊಪ್ಪ(Jangamanakoppa)ದಲ್ಲಿ ಹಾವೇರಿ ಹಾಲು ಒಕ್ಕೂಟದ ನೂತನ ಯುಎಚ್‌ಟಿ ಹಾಲು ಸಂಸ್ಕರಣ, ಪ್ಯಾಕಿಂಗ್‌ ಸ್ಥಾವರ ಮತ್ತು ಹಾಲು ಸ್ಯಾಚೆಟ್‌ ಪ್ಯಾಕಿಂಗ್‌ ಘಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Karnataka election 2023: ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ: ಸುರ್ಜೇವಾಲ ವಾಗ್ದಾಳಿ

ಸಹಕಾರಿ ವಲಯದ ನಂದಿನಿ ಕರ್ನಾಟಕ ಹಾಲು ಉತ್ಪಾದಕರಿಗೆ ಕಾಮಧೇನುವಾಗಿದೆ. ಕೇವಲ ಹಾಲು ಉತ್ಪಾದನೆಯಲ್ಲದೆ 20ರಿಂದ 25 ಮಾದರಿಯ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದ ಹೈನುಗಾರಿಕೆ ಕ್ಷೇತ್ರ ಸಾಲದ ಹೊರೆಯಿಂದ ನಲುಗಿತ್ತು. ರೈತರ ಹಾಲಿಗೆ ಸರಿಯಾಗಿ ದರ ನೀಡುತ್ತಿರಲಿಲ್ಲ. ಸಕಾಲಕ್ಕೆ ಹಾಲಿನ ಮೊತ್ತ ಪಾವತಿಯಾಗುತ್ತಿರಲಿಲ್ಲ. 2010-11ನೇ ಸಾಲಿನಲ್ಲಿ ಎನ್‌ಡಿಡಿಬಿಯೊಂದಿಗೆ ಚರ್ಚಿಸಿ . 27 ಕೋಟಿ ಸಾಲ ತೀರಿಸಿ ಸರ್ಕಾರದಿಂದ . 100 ಕೋಟಿ ಸಾಲ ಮನ್ನಾ ಮಾಡಿಸಲಾಯಿತು. ಇದರಿಂದ ಉತ್ತರ ಕರ್ನಾಟಕ ಭಾಗದ ಹೈನುಗಾರಿಕೆ ಚೇತರಿಕೆ ಕಂಡಿದೆ ಎಂದು ಹೇಳಿದರು.

ಸಾರ್ವಜನಿಕ ಸಹಭಾಗಿತ್ವದಲ್ಲಿ ಹಾಲು ಸಂಸ್ಕರಣಾ ಘಟಕ ಹಾಗೂ ಪ್ಯಾಂಕಿಂಗ್‌ ಘಟಕ ಆರಂಭಿಸಲಾಗಿದೆ. 80 ಸಾವಿರದಿಂದ 1 ಲಕ್ಷ ಲೀಟರ್‌ ಹಾಲನ್ನು ಟ್ರೆಟ್ರಾ ಪ್ಯಾಕ್‌ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಯಾಚೆಟ್‌ ಹಾಲು ಘಟಕದ ಸಾಮರ್ಥ್ಯ 25ರಿಂದ 50 ಸಾವಿರ ಲೀಟರ್‌ವರೆಗೆ ಇದೆ. ಅತ್ಯಾಧುನಿಕ ತಂತ್ರಜ್ಞಾನದ ಜರ್ಮನಿಯಿಂದ ಆಮದು ಮಾಡಿಕೊಂಡ ಯಂತ್ರ ಅಳವಡಿಸಲಾಗಿದೆ. ಗುಡ್‌ಲೈಫ್‌ ಹೆಸರಿನಲ್ಲಿ ತಯಾರಾಗುವ ಹಾಲಿನ ಪೊಟ್ಟಣ ಆರು ತಿಂಗಳವರೆಗೆ ಯಾವುದೇ ಶಿಥಿಲೀಕರಣ ವ್ಯವಸ್ಥೆ ಇಲ್ಲದೆ ಬಳಸಬಹುದಾಗಿದೆ. ರಾಜ್ಯದಲ್ಲೇ ಅತ್ಯುನ್ನತ ತಂತ್ರಜ್ಞಾನದ ಸ್ಯಾಚೆಟ್‌ ಪ್ಯಾಕೇಟ್‌ ತಯಾರಿಸುವ ಘಟಕ ಹಾವೇರಿಯಲ್ಲಿ ಸ್ಥಾಪಿಸಲಾಗಿದೆ. ಇದರಿಂದ ಗುಣಮಟ್ಟಹಾಗೂ ಸಮಯ ಉಳಿತಾಯ ಕಾಯ್ದುಕೊಳ್ಳಬಹುದು. ಇದರೊಂದಿಗೆ . 100 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆಗೆ ಚಾಲನೆ ದೊರೆತಿದೆ ಎಂದರು.

ಹೈನುಗಾರಿಕೆಯನ್ನು ಕಾರ್ಪೊರೇಟ್‌ ಸಹಭಾಗಿತ್ವದಲ್ಲಿ ನಡೆಸಬಹುದಾಗಿದ್ದರೂ ಸರ್ಕಾರ ರೈತರಿಗೆ ನೇರ ಲಾಭದೊರಕಿಸಿಕೊಡಲು ಸಹಕಾರಿ ಸಂಸ್ಥೆಗಳ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಇದರಿಂದ ಬರುವ ಎಲ್ಲ ಲಾಭವನ್ನು ರೈತರಿಗೆ ದೊರಕಿಸಿಕೊಡುವುದಾಗಿದೆ ಎಂದ ಅವರು, ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕೆಂಬ ರೈತರ ಆಶಯ ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂರು ಲಕ್ಷ ಲೀಟರ್‌ ಹಾಲು ಉತ್ಪಾದಿಸಬೇಕು. ರೈತರಿಗೆ ಇನ್ನೂ ಉತ್ತಮ ದರ ನೀಡಿ ಅವರ ಆದಾಯ ದ್ವಿಗುಣಗೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಪುಣ್ಯಕೋಟಿ:

ಗೋಹತ್ಯೆ ತಡೆಗೆ ಸರ್ಕಾರ ಕಠಿಣ ಕಾಯ್ದೆ ರೂಪಿಸಿದೆ. ಗೋರಕ್ಷಣೆಗಾಗಿ 30 ಜಿಲ್ಲೆಗಳಲ್ಲಿ ಪುಣ್ಯ ಕೋಟಿ ಯೋಜನೆಯಡಿ ಸರ್ಕಾರಿ ಗೋ ಶಾಲೆ ತೆರೆಯಲು ಸ್ಥಳ ಗುರುತಿಸಿದೆ. ಈ ಪೈಕಿ 13 ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಿದೆ. ಗೋವುಗಳನ್ನು ದತ್ತು ಪಡೆಯಲು ಆನ್‌ಲೈನ್‌ ಮೂಲಕ ಆಸಕ್ತರು ನೋಂದಾಯಿಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಈ ಯೋಜನೆಯಡಿ . 43 ಕೋಟಿ ಅನುದಾನ ಸಂಗ್ರಹವಾಗಿದೆ. ಪ್ರತಿ ಗೋವಿಗೆ . 11 ಸಾವಿರದಂತೆ ಇನ್ನೊಂದು ವಾರದೊಳಗೆ . 30 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಸಹಕಾರ ಖಾತೆ ಸಚಿವ ಎಸ್‌.ಟಿ. ಸೋಮಶೇಖರ ಮಾತನಾಡಿ, ಹೈನುಗಾರರಿಗೆ ಪ್ರತ್ಯೇಕ ಬ್ಯಾಂಕ್‌ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಂದಿನಿ ಸಹಕಾರಿ ಕ್ಷೀರ ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿತ್ತು. ಆದರೆ ಭಾರತೀಯ ರಿಜವ್‌ರ್‍ ಬ್ಯಾಂಕಿನ ಅನುಮತಿ ತಡವಾಗಿರುವ ಕಾರಣ ಕರ್ನಾಟಕ ರೈತರ ಅನುಕೂಲಕ್ಕಾಗಿ ನಂದಿನಿ ಕ್ಷೀರ ಸಹಕಾರಿ ಸಂಘ ಸ್ಥಾಪಿಸಲು ಮುಂದಾಗಿದೆ. ನಂತರ ಬ್ಯಾಂಕ್‌ ಆಗಿ ಪರಿವರ್ತಿಸಲಾಗುವುದು ಎಂದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ . 3ರಿಂದ . 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಾಚ್‌ರ್‍ ಅಂತ್ಯದೊಳಗೆ . 24 ಸಾವಿರ ಕೋಟಿ ಸಾಲವನ್ನು 30 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು. ಆಯುಷ್ಮಾನ್‌ ಯೋಜನೆ ಮಾದರಿಯಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿದೆ. ಈವರೆಗೆ 30 ಸಾವಿರ ರೈತರು ನೋಂದಾಯಿಸಿಕೊಂಡಿದ್ದಾರೆ. ಮಾಚ್‌ರ್‍ ಕೊನೆಯವರೆಗೆ ಅವಧಿ ವಿಸ್ತರಿಸಿದ್ದು 35 ಲಕ್ಷ ರೈತರ ಗುರಿ ಹೊಂದಲಾಗಿದೆ ಎಂದರು.

ಕರ್ನಾಟಕ ಕುಸ್ತಿ ಹಬ್ಬ, ಶಿಗ್ಗಾಂವಿಯತ್ತ ವಿಶ್ವದ ಚಿತ್ತ: ಸಿಎಂ ಬೊಮ್ಮಾಯಿ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೃಷಿ ಸಚಿವ ಬಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌, ಶಾಸಕ ನೆಹರು ಓಲೇಕಾರ, ಹಾವೆಮುಲ್‌ ಅಧ್ಯಕ್ಷ ಬಸವರಾಜ ಅರಬಗೊಂಡ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.