ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಡೀ ಕುಟುಂಬವೇ ಸರ್ವನಾಶ, ಕೋಪದ ಕೈಗೆ ಬುದ್ದಿ ಕೊಟ್ಟು ಅನಾಥನಾದ ಮಗ..!

ಮನೆ ಬಳಿ ಕ್ಷುಲ್ಲಕ‌ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಕೊಲೆಯೊಂದು ನಡೆದು ಗಂಡ ಮತ್ತು ಮಗ ಜೈಲು ಸೇರಿದ್ದ ಬಂತು, ಆಘಾತಕ್ಕೆ ಒಳಗಾದ ಪತ್ನಿ ನೇಣು ಬಿಗುದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಚಾರ ತಿಳಿದ ಗಂಡ ಜೈಲಿನಲ್ಲಿ ಎದೆ ಬಡಿದುಕೊಂಡು ಉಸಿರು ಚೆಲ್ಲಿದ್ದಾರೆ. ಪರಿಣಾಮ ಕೋಪದ ಕೈಗೆ ಬುದ್ದಿ ಕೊಟ್ಟು ಕೊಲೆ ಮಾಡಿದ್ದ ಮಗ ಅನಾಥನಾದ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

Entire Family Annihilated for Trivial Reason in Mysuru grg

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು 

ಮೈಸೂರು(ಆ.22): ಚೆನ್ನಾಗಿದ್ದರೆ ಎಲ್ಲವೂ ಚಂದ. ಒಂದು ದುರ್ಘಟನೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿಬಿಡುತ್ತೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ. ಮಗ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಅದೇ ಕೇಸ್​ನಲ್ಲಿ ಅಪ್ಪ ಅರೆಸ್ಟ್ ಆಗಿದ್ದ. ಗಂಡ, ಮಗ ಜೈಲು ಸೇರಿದ್ದರಿಂದ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ, ಮೂರು ಜೀವಕ್ಕೆ ಕುತ್ತು ತಂದಿದೆ. 

ಹೌದು...ಮನೆ ಬಳಿ ಕ್ಷುಲ್ಲಕ‌ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಕೊಲೆಯೊಂದು ನಡೆದು ಗಂಡ ಮತ್ತು ಮಗ ಜೈಲು ಸೇರಿದ್ದ ಬಂತು, ಆಘಾತಕ್ಕೆ ಒಳಗಾದ ಪತ್ನಿ ನೇಣು ಬಿಗುದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಚಾರ ತಿಳಿದ ಗಂಡ ಜೈಲಿನಲ್ಲಿ ಎದೆ ಬಡಿದುಕೊಂಡು ಉಸಿರು ಚೆಲ್ಲಿದ್ದಾರೆ. ಪರಿಣಾಮ ಕೋಪದ ಕೈಗೆ ಬುದ್ದಿ ಕೊಟ್ಟು ಕೊಲೆ ಮಾಡಿದ್ದ ಮಗ ಅನಾಥನಾದ ದಾರುಣ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಕೃಷಿ ಸಚಿವರ ವಿರುದ್ಧ ಲಂಚಾರೋಪ: ಅಧಿಕಾರಿಗಳಿಬ್ಬರು ಸಿಐಡಿ ವಶಕ್ಕೆ

ಅಷ್ಟಕ್ಕು ಮೈಸೂರು ನಗರದ ವಿದ್ಯಾನಗರದಲ್ಲಿ ಆಗಸ್ಟ್ 20 ರಂದು ಒಂದು ಕೊಲೆ ನಡೆದಿತ್ತು. ಬಡಾವಣೆ ನಿವಾಸಿ, 28 ವರ್ಷದ ಬಾಲರಾಜ್​ ಎಂಬಾತನನ್ನು ನಾಲ್ವರು ಕೊಲೆ ಮಾಡಿದ್ರು. ತೇಜಸ್, ಕಿರಣ್, ಸಂಜಯ್ ಹಾಗೂ ಸಾಮ್ರಾಟ್ ಕೊಲೆ ಮಾಡಿದ್ದಾರೆ ಅಂತ ನಜರ್​ಬಾದ್ ಠಾಣೆಗೆ ದೂರು ನೀಡಲಾಗಿತ್ತು. ಈ ಪೈಕಿ ಎ1 ತೇಜಸ್ ಹಾಗೂ ಎ4 ಸಾಮ್ರಾಟ್ ಅಪ್ಪ-ಮಗ ಅನ್ನೋದು ವಿಶೇಷ. ಹಣಕಾಸಿನ ವಿಚಾರ ಗಲಾಟೆ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಬಾಲರಾಜ್​ ಕೊಲೆ ನಡೆದು ಹೋಗಿತ್ತು.

ಬಾಲರಾಜ್ ಕೊಲೆಗೆ ನಾಲ್ಕೈದು ಬಾರಿ ಚಾಕು ಚುಚ್ಚಿದ್ದ ತೇಜಸ್ ಎಸ್ಕೇಪ್ ಆಗಿದ್ದ. ಆದ್ರೆ ಆತನ ತಂದೆ ಸಾಮ್ರಾಟ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ರು. ಆರೋಪಿಗಳೊಂದಿಗೆ ಸ್ಥಳ ಮಹಜರು ಕೂಡ ನಡೆಸಿದ್ರು. ಗಂಡ, ಮಗ ಇಬ್ಬರೂ ಅರೆಸ್ಟ್ ಆಗಿದ್ದರಿಂದ ಮನನೊಂದಿದ್ದ ತೇಜಸ್ ತಾಯಿ, 35 ವರ್ಷದ ಇಂದ್ರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದು ತೇಜಸ್ ತಂದೆ ಹಾಗೂ ಪ್ರಕರಣದ ಎ4 ಸಾಮ್ರಾಟ್​ಗೆ ಹೃದಯಾಘಾತವಾಗಿದೆ. ಜೈಲಿನ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.  

ನಾನು ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಜಿ.ಟಿ.ದೇವೇಗೌಡ

ಇತ್ತ ಮೈಸೂರಿನ ಶವಾಗಾರದಲ್ಲಿ ತಂದೆ ತಾಯಿ ಇಬ್ಬರ ಶವ ಇದ್ದರೆ, ಮಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಜೊತೆಗೆ ಮಕ್ಕಳನ್ನು ಸರಿಯಾಗಿ ಬೆಳೆಸದ ಪೋಷಕರಿಗೂ, ಅಂಕೆ ಶಂಕೆಯಲ್ಲಿ ಬೆಳೆಯದ ಮಗನಿಗೂ ಅಲ್ಲಿದ್ದ ಸಂಬಂಧಿಗಳು ಬೈಯ್ಯೋದು ನೋಡಿದ್ರೆ ಇಂತಹ ಮಕ್ಕಳು ಯಾಕಪ್ಪ ಅನ್ನಿಸುತ್ತಿತ್ತು.

ಇಲ್ಲಿ ಕೊಲೆ ಪ್ರಕರಣ ಆರೋಪಿಯ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ರೆ, ತಂದೆ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಹಾಗೆ ನೋಡಿದ್ರೆ, ಕೊಲೆಯಾದ ಬಾಲರಾಜ್​ ದುಡ್ಡುಕಾಸಿನ ವಿಚಾರದಲ್ಲಿ ಎಲ್ಲರಿಗೂ ಟಾರ್ಚರ್ ಕೊಡ್ತಿದ್ದ ಎನ್ನಲಾಗಿದೆ. ಏನೇ ಆದ್ರೂ ಸಣ್ಣದೊಂದು ಗಲಾಟೆ ಮೂರು ಸಾವಿಗೆ ಕಾರಣವಾಗಿದ್ದು ಮಾತ್ರ ದುರಂತ. 

Latest Videos
Follow Us:
Download App:
  • android
  • ios