Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ 68ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ, ಇಂಧನ ಸಚಿವ ಕೆ ಜೆ ಜಾರ್ಜ್ ರಿಂದ ಧ್ವಜಾರೋಹಣ

ಎರಡೂವರೆ ಸಾವಿರ ವರ್ಷಗಳ ಹಿರಿಮೆಯನ್ನು ಹೊಂದಿರುವ ನಮ್ಮ ಕನ್ನಡ ನಾಡಿನಲ್ಲಿ ತಾಯಿ ಭುವನೇಶ್ವರಿಯನ್ನು ಕರುನಾಡ ದೇವಿಯಾಗಿ ಆರಾಧಿಸಿಕೊಂಡು ಬರುತ್ತಿದ್ದೇವೆ ಎಂದರು.  ನಮಗೆ ಕನ್ನಡ ಎಂದರೆ ಬರಿ ನುಡಿ ಅಲ್ಲ ಅದು ಜೀವ, ಭಾವ, ಉಸಿರು ಮತ್ತು ನಮ್ಮ ಅಸ್ಮಿತೆ.

Energy minister kj george flag hoisting at chikmagalur srb
Author
First Published Nov 1, 2023, 8:03 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ನ.01): ಕಾಫಿನಾಡು ಚಿಕ್ಕಮಗಳೂರಿನಲ್ಲಿ 68ನೇ ಕನ್ನಡರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಕಾರ್ಯಕ್ರಮವನ್ನು ಜಿಲ್ಲಾಉಸ್ತುವಾರಿ ಸಚಿವರಾದ ಇಂಧನ ಸಚಿವ ಕೆ ಜೆ ಜಾರ್ಜ್ ಧ್ವಜಾರೋಹಣ ಮಾಡಿದರು. ಈ ವೇಳೆ ಪಥ ಸಂಚಲನದಲ್ಲಿ ಭಾಗಿಯಾದ ವಿವಿಧ ತಂಡಗಳು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. 

ತೆರೆದ ವಾಹನದಲ್ಲಿ ಧ್ವಜವಂದನೆಯನ್ನು ಸಚಿವರು ಸ್ವೀಕಾರಿಸಿದರು. ತದನಂತರ ಮಾತಾಡಿದ ಸಚಿವರು ಮೈಸೂರು ರಾಜ್ಯವು ಕರ್ನಾಟಕವೆಂದು ಮರುನಾಮಕರಣವಾಗಿ 50 ವರ್ಷಗಳು ಪೂರೈಸಿದೆ. ನಾಳೆ ಹಂಪಿಯಲ್ಲಿ ಕನ್ನಡ ಜ್ಯೋತಿ ಬೆಳಗುವ ಮೂಲಕ ರಾಜ್ಯಾದ್ಯಂತ ಒಂದು ವರ್ಷದವರೆಗೆ ನಡೆಯುವ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.  

ಎರಡೂವರೆ ಸಾವಿರ ವರ್ಷಗಳ ಹಿರಿಮೆಯನ್ನು ಹೊಂದಿರುವ ನಮ್ಮ ಕನ್ನಡ ನಾಡಿನಲ್ಲಿ ತಾಯಿ ಭುವನೇಶ್ವರಿಯನ್ನು ಕರುನಾಡ ದೇವಿಯಾಗಿ ಆರಾಧಿಸಿಕೊಂಡು ಬರುತ್ತಿದ್ದೇವೆ ಎಂದರು.  ನಮಗೆ ಕನ್ನಡ ಎಂದರೆ ಬರಿ ನುಡಿ ಅಲ್ಲ ಅದು ಜೀವ, ಭಾವ, ಉಸಿರು ಮತ್ತು ನಮ್ಮ ಅಸ್ಮಿತೆ. ಜಿಲ್ಲೆಯ ನಮ್ಮ ಅಂಬಳೆ ಕೃಷ್ಣಶಾಸ್ತ್ರಿಗಳು ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರ ಮಾನ್ಯತೆ ಸಿಗಲೇಬೇಕೆಂದು ಜೀವನವಿಡಿ ದುಡಿದವರು. 

ಅವರು ಹೇಳಿರುವ ‘ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಹಿರಿಯ ಆಸ್ತಿಯಾಗಿ ಉಳಿದಿರುವುದು ಅವರ ಕನ್ನಡ ಭಾಷೆ. ಕನ್ನಡವನ್ನು ಎಲ್ಲರೂ ಒಂದಾಗಿ ಕಾಪಾಡಿಕೊಂಡು ಬಂದರೆ ಅದು ತಾಯಿ ನುಡಿಯಾಗಿ ಉಳಿಯುತ್ತದೆ, ಬೆಳೆಯುತ್ತದೆ.ಆರ್ಥಿಕವಾಗಿ ಹಿಂದುಳಿದವರ ಮತ್ತು ದೀನ ದಲಿತರ ಸಬಲೀಕರಣಕ್ಕಾಗಿ ಅವರನ್ನು ಆರ್ಥಿಕವಾಗಿ ಮುನ್ನೆಲೆಗೆ ತರುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು ಕನ್ನಡದ ಜನತೆ ನಮಗೆ ಆಶೀರ್ವಾದ ನೀಡಿದ್ದಾರೆ. 

ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ ದೃಶ್ಯ ಸೆರೆಹಿಡಿದ ಯೂಟೂಬರ್: ಆತನ ಪಾಡು ನೀವೇ ನೋಡಿ..!

ಅವರ ಶ್ರೀರಕ್ಷೆಯಿಂದ ನಮ್ಮ ಸರ್ಕಾರ  ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಹೆಚ್ ಡಿ ತಮ್ಮಯ್ಯ, ಟಿ ಡಿ ರಾಜೇಗೌಡ ಸೇರಿದಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜಿಲ್ಲಾ ವರಿಷ್ಟಾಧಿಕಾರಿ ವಿಕ್ರಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಲ್ಲದೇ ಪೇರಡ್ ನಲ್ಲಿ ಪೊಲೀಸ್ರು ಕನ್ನಡ ಬಳಕೆ ಮಾಡಿದ್ದು ವಿಶೇಷವಾಗಿತ್ತು.ಇದಕ್ಕೂ ಮುನ್ನ ನಗರದ ಹನುಮಂತಪ್ಪ ವೃತ್ತದಿಂದ ಕನ್ನಡ ಸಂಸ್ಕೃತಿ ಬಿಂಬಿಸುವ ಸ್ತಭ್ದಚಿತ್ರಗಳ ಮೂಲಕ ಮೆರವಣಿಗೆ ನಡೆಸಲಾಯಿತು.

ಗಂಡಸರ ರೂಮಿಗೆ ನನ್ನನ್ನು ತಳ್ಳಿದ್ದು ಬೇರೆ ಯಾರೂ ಅಲ್ಲ; ಗಳಗಳನೇ ಅತ್ತು ದುಃಖ ತೋಡಿಕೊಂಡ ಶಕೀಲಾ

Follow Us:
Download App:
  • android
  • ios