ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ ದೃಶ್ಯ ಸೆರೆಹಿಡಿದ ಯೂಟೂಬರ್: ಆತನ ಪಾಡು ನೀವೇ ನೋಡಿ..!
ಬೆಂಗಳೂರಿನ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ನಡೆಯುವ ವೇಶ್ಯಾವಾಟಿಕೆ ದಂಧೆಯ ಕುರಿತು ಯೂಟ್ಯೂಬರ್ ವಿಕಾಸ್‌ಗೌಡ ವಿಡಿಯೋ ಮಾಡಿದ್ದಾನೆ.
ಬೆಂಗಳೂರು (ನ.01): ಬೆಂಗಳೂರಿನ ಹೃದಯಭಾಗ ಹಾಗೂ ಅತ್ಯಂತ ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ನಡೆಯುವ ವೇಶ್ಯಾವಾಟಿಕೆ ದಂಧೆಯ ಕುರಿತು ಯೂಟ್ಯೂಬರ್ ವಿಕಾಸ್‌ಗೌಡ ವಿಡಿಯೋ ಮಾಡಿದ್ದಾನೆ. ವಿಡಿಯೋ ಮಾಡುವಾಗ ಸಿಕ್ಕಿಬಿದ್ದ ಆತನ ಪಾಡು ನಿವೇ ನೋಡಿ...
ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ (Bengaluru Majestic Underpass) ನಡೆಯತ್ತದೆ ಎಂದು ಹಲವು ಪ್ರಯಾಣಿಕರು ಹೇಳುತ್ತಾರೆ. ಇನ್ನು ಹಳ್ಳಿಗಳಿಂದ ಬಂದು ಬೆಂಗಳೂರಿನ ಮೆಜೆಸ್ಟಿಕ್ ಅಂಡರ್‌ಪಾಸ್ ಹಾದುಹೋದ ಎಲ್ಲರ ಬಾಯಲ್ಲಿಯೂ ಇದೇ ಸುದ್ದು ಹರಿದಾಡುತ್ತದೆ. ಇನ್ನು ಬೆಂಗಳೂರಿಗರು ಇದನ್ನು ನೋಡಿಯೂ ನೋಡದಂತೆ ದಿನನಿತ್ಯ ಓಡಾಡುತ್ತಿದ್ದಾರೆ. ಇದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಮಾಡಿದಾಗ ಪೊಲೀಸರು ಒಂದು ವಾರ ಸಿಬ್ಬಂದಿ ನಿಯೋಜನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ನಂತರ ಅದೇ ಹಾಡು.. ಅದೇ ರಾಗ ಎನ್ನುವಂತೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಪುರುಷರನ್ನು ಅಡ್ಡಹಾಕಿ ವೇಶ್ಯಾವಾಟಿಕೆಗೆ ಪುಸಲಾಯಿಸುವ ಘಟನೆಗಳಿ ಕಂಡುಬರುತ್ತವೆ. ಈಗ ವಿಕಾಸ್‌ಗೌಡ ಎನ್ನುವ ಯೂಟ್ಯೂಬರ್ ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ವಿಡಿಯೋ ಮಾಡಿದ್ದು, ಆತನಿಗೆ ದಂಧೆ ಮಾಡುವವರು ಕೊಟ್ಟ ಕಿರುಕುಳವನ್ನು ನಿವೇ ಕಣ್ಣಾರೆ ನೋಡಬಹುದು.
ಬೆಂಗಳೂರು ಆಪರೇಷನ್ ಲೆಪರ್ಡ್ ಸಕ್ಸಸ್, ಆದ್ರೆ ಪೇಶಂಟ್ ಚಿರತೆ ಡೆಡ್
ಪೊಲೀಸ್ ಇಲಾಖೆಯಿಂದ ರಾಜ್ಯಾದ್ಯಂತ ಎಲ್ಲೇ ವೇಶ್ಯಾವಾಟಿಕೆ ದಂಧೆ ನಡೆದರೂ ಅವರನ್ನು ಮುಲಾಜಿಲ್ಲದೇ ಬಂಧಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಇನ್ನು ಲೈಂಗಿಕ ಅಲ್ಪ ಸಂಖ್ಯಾತರು ಕೂಡ ದಂಧೆ ನಡೆಸದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ (ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್) ವೇಶ್ಯಾವಾಟಿಕೆ ದಂಧೆ ಮಾಡಲಾಗುತ್ತಿದೆ ಎಂದರೆ ನಾಚಿಕೆಗೇಡಿನ ವಿಚಾರವಾಗಿದೆ.
ವಿಡಿಯೋ ಮಾಡುತ್ತಿದ್ದವನನ್ನು ತಡೆದು ಡಿಲೀಟ್ ಮಾಡಿಸಿದ್ರು: ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ಯೂಟ್ಯೂಬರ್ ವಿಕಾಸ್‌ಗೌಡ ಸೆಲ್ಫಿ ವಿಡಿಯೋ ಮಾಡುತ್ತಾ ನಡೆದುಕೊಂಡು ಹೋಗುತ್ತಾನೆ. ಆಗ ಪಕ್ಕದಲ್ಲಿಯೇ ಮಹಿಳೆಯೊಬ್ಬರು ವ್ಯಕ್ತಿಯನ್ನು ನಿಲ್ಲಿಸಿಕೊಂಡು ವ್ಯವಹಾರ ಕುದುರಿಸುತ್ತಿರುವ ವಿಡಿಯೋ ಕೂಡ ಸೆರೆಯಾಗಿದೆ. ಜೊತೆಗೆ, ಮುಂದಕ್ಕೆ ಹೋಗುತ್ತಿದ್ದಂತೆ ಐದಾರು ಜನರು ಸೇರಿಕೊಂಡು ಯ್ಯೂಟೂಬರ್‌ನನ್ನು ಪ್ರಶ್ನೆ ಮಾಡಿ ವಿಡಿಯೋ ಮಾಡದಂತೆ ಹೇಳಿದ್ದಾರೆ. ನಂತರ, ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಎಲ್ಲ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ನಂತರ, ಅವರ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಂದ ಕಳಿಸಿದ್ದಾರೆ. ಕೊನೆಗೆ ಒಬ್ಬ ಮಹಿಳೆ ಯ್ಯೂಟೂಬರ್‌ನನ್ನು ದಂಧೆಗೆ ಪುಸಲಾಯಿಸಿದ ಘಟನೆ ಕೂಡ ನಡೆದಿದೆ.
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಗಂಗಮ್ಮನಗುಡಿ ಸ್ಪಾಂಜ್ ಫ್ಯಾಕ್ಟರಿಗೆ ಬೆಂಕಿ
ಕಾಲೇಜು ಹುಡುಗರು, ಅಂಕಲ್‌ಗಳು ಯಾರೇ ವ್ಯಕ್ತಿಗಳು ಇದ್ದರೂ ಜನಸಾಮಾನ್ಯರನ್ನು ತಮ್ಮ ವೇಶ್ಯಾವಾಟಿಕೆಗೆ ಕರೆದು ಮುಜುಗರ ಉಂಟುಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿರುವ ಬೆಂಗಳೂರಿನ ಹೃದಯ ಭಾಗದಲ್ಲಿಯೇ ಇಂತಹ ಘಟನೆಗಳು ನಡೆಯುತತಿರುವುದರಿಂದ ಬೆಂಗಳೂರು ಸುರಕ್ಷಿತ ತಾಣವಲ್ಲ ಎಂಬ ಭಾವನೆಯೂ ಬರುತ್ತದೆ. ಆದ್ದರಿಂದ ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ಪ್ರಯಾಣಿಕರಿಗೆ ಸುರಕ್ಷೆ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಯ್ಯೂಟೂಬರ್ ಬ್ಲಾಗರ್ ಮನವಿ ಮಾಡಿಕೊಂಡಿದ್ದಾನೆ.