Asianet Suvarna News Asianet Suvarna News

ಬ್ಲ್ಯಾಕ್‌ ಫಂಗಸ್‌ಗೆ ಎಂಡೋಸ್ಕೋಪಿಕ್‌ ಸರ್ಜರಿ ಸೂಕ್ತ: ವಿಕ್ರಂ ಅಸ್ಪತ್ರೆ ವೈದ್ಯರು

* ಓಪನ್‌ ಸರ್ಜರಿಗಿಂತ ಉತ್ತಮ
* ಫಂಗಸ್‌ಗೆ ಚಿಕಿತ್ಸೆ ನೀಡದಿದ್ದರೆ ಮರಣ ದರ ಹೆಚ್ಚಳ
* ರೋಗದ ಪ್ರಮುಖ ಆರಂಭಿಕ ಲಕ್ಷಣ ಮೂಗಿನಲ್ಲಿ ತೊಂದರೆ ಮತ್ತು ತಲೆನೋವು
 

Endoscopic Surgery Appropriate for Black Fungus Says Vikram Hospital Doctors grg
Author
Bengaluru, First Published Jun 18, 2021, 7:15 AM IST

ಬೆಂಗಳೂರು(ಜೂ.18): ಕೊರೋನಾ ವೈರಾಣುವಿನ ಡೆಲ್ಟಾರೂಪಾಂತರ ಸೋಂಕಿತನ ರೋಗ ನಿರೋಧಕ ಶಕ್ತಿಯನ್ನು ಹತ್ತಿಕ್ಕಿ ಕಪ್ಪು ಶಿಲೀಂಧ್ರದಂತಹ ಅವಕಾಶವಾದಿ ಸೋಂಕಿನ ಅಪಾಯಕ್ಕೆ ತಳ್ಳುತ್ತಿದೆ. ಕಪ್ಪು ಶಿಲೀಂಧ್ರದಿಂದ ಬಾಧಿತರಾದವರಿಗೆ ಓಪನ್‌ ಸರ್ಜರಿಗಿಂತ ಎಂಡೋಸ್ಕೋಪಿಕ್‌ ಸರ್ಜರಿ ಹೆಚ್ಚು ಸೂಕ್ತ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಕಪ್ಪು ಶಿಲಿಂಧ್ರ ಸಾಂಕ್ರಾಮಿಕದ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಈ ಆಸ್ಪತ್ರೆಯ ವೈದ್ಯರು, ಕಪ್ಪು ಶಿಲೀಂಧ್ರ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದೆ ಹೋದರೆ ಮರಣ ದರ ಹೆಚ್ಚಿರುತ್ತದೆ. ಸೋಂಕು ಪತ್ತೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವವರ ಚೇತರಿಕೆ ದರ ಉತ್ತಮವಾಗಿರುತ್ತದೆ. ರೋಗದ ಪ್ರಮುಖ ಆರಂಭಿಕ ಲಕ್ಷಣ ಮೂಗಿನಲ್ಲಿ ತೊಂದರೆ ಮತ್ತು ತಲೆನೋವು ಎಂದು ತಿಳಿಸಿದ್ದಾರೆ. 

7 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ : ವೈದ್ಯರಿಗೆ ಆತಂಕ ತಂದ ಕೇಸ್

ಆಸ್ಪತ್ರೆಯ ಇಎನ್‌ಟಿ, ತಲೆ ಮತ್ತು ಕುತ್ತಿಗೆ ತಜ್ಞ ಡಾ. ಕೆ.ಶ್ರೀನಿವಾಸ್‌ ಮಾತನಾಡಿ, ಕಪ್ಪು ಶಿಲೀಂಧ್ರವು ಮಧುಮೇಹ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಔಷಧಿ ಪಡೆಯುತ್ತಿರುವವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಶಿಲೀಂಧ್ರವು ಉಸಿರಿನ ಮೂಲಕ ದೇಹ ಪ್ರವೇಶಿಸುತ್ತದೆ. ಗೋಡೆ, ಋುಣಾತ್ಮಕ ಒತ್ತಡ ಇರುವ ಕೋಣೆಗಳು, ನೀರಿನ ಸೋರಿಕೆ, ಕಡಿಮೆ ಗಾಳಿಯ ಪ್ರವೇಶ ಇರುವ ಕಟ್ಟಡ, ಕಟ್ಟಡ ನಿರ್ಮಾಣ ಚಟುವಟಿಕೆಗಳೆಲ್ಲ ಸೋಂಕು ಹಬ್ಬಲು ಕಾರಣವಾಗುತ್ತಿದೆ ಎಂದು ತಿಳಿಸಿದರು. ಆಸ್ಪತ್ರೆಯ ಇಂಟರ್ನಲ್‌ ಮೆಡಿಸಿನ್‌ ವಿಭಾಗದ ಡಾ. ಪ್ರಮೋದ್‌ ವಿ.ಸತ್ಯ ಮಾತನಾಡಿದರು.
 

Follow Us:
Download App:
  • android
  • ios