ಆನೆಕಾಲು ರೋಗ ಮುಕ್ತ ಜಿಲ್ಲೆ ಉತ್ತರ ಕನ್ನಡ: ಜಿಲ್ಲಾಡಳಿತ, ಆರೋಗ್ಯ ಇಲಾಖೆ ಫುಲ್ ಖುಷ್

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರ ಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 

Elephantiasis Free District Uttara Kannada gvd

ಭರತ್‌ರಾಜ್ ಕಲ್ಲಡ್, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಏ.30): ರಾಜ್ಯದ (Karnataka) ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ (Elephantiasis) ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರ ಕ‌ನ್ನಡ (Uttara Kannada) ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ರೋಗ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣದ್ದರಿಂದ ಆರೋಗ್ಯ ಇಲಾಖೆ ಉತ್ತರಕನ್ನಡ ಜಿಲ್ಲೆಯನ್ನು ಆನೆ ಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರನ್ನು ತೀವ್ರವಾಗಿ ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಉತ್ತರಕನ್ನಡ ಜಿಲ್ಲೆಯಿಂದ ನಿರ್ಮೂಲನೆಯಾಗಿದೆ. ಈ ಮೂಲಕ ದಕ್ಷಿಣಕನ್ನಡ, ಉಡುಪಿಯ ಬಳಿಕ ಉತ್ತರಕನ್ನಡ ಜಿಲ್ಲೆಯೂ ಆನೆಕಾಲು ರೋಗ ಅಥವಾ ಫೈಲೇರಿಯಾ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಅದರಲ್ಲೂ ಗೋಕರ್ಣ ಹಾಗೂ ಭಟ್ಕಳ ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಕರಣ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣಿಸಿಲ್ಲ. 2021ರಲ್ಲಿ ನಡೆಸಲಾದ ಸರ್ವೆಯ ಪ್ರಕಾರ ಉತ್ತರಕನ್ನಡ ಜಿಲ್ಲೆಯಲ್ಲಿ 2017ರಲ್ಲಿ ಕಾಣಿಸಿದ್ದ 173 ಪ್ರಕರಣಗಳು ಮಾತ್ರ ದಾಖಲಾಗಿವೆ ಹೊರತು ಯಾವುದೇ ನೂತನ ಪ್ರಕರಣಗಳು ಆ ಬಳಿಕ ವರದಿಯಾಗಿಲ್ಲ. 

Uttara Kannada: ಹೋಬಳಿ ಮಟ್ಟದಲ್ಲೂ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ರಾಜ್ಯದಲ್ಲೇ ಪ್ರಥಮ ಪ್ರಯೋಗ

ಇನ್ನು ಜಿಲ್ಲೆಯ ಕಾರವಾರಲ್ಲಿ 4, ಅಂಕೋಲಾದಲ್ಲಿ 6, ಕುಮಟಾದಲ್ಲಿ 54, ಹೊನ್ನಾವರದಲ್ಲಿ 20, ಭಟ್ಕಳದಲ್ಲಿ 89 ಹಳೇಯ ಪ್ರಕರಣಗಳು ಮಾತ್ರ ಇವೆ ಹೊರತು ಯಾವುದೇ ನೂತನ ಪ್ರಕರಣಗಳು ವರದಿಯಾಗಿಲ್ಲ ಅಂತಾರೆ ಅಧಿಕಾರಿಗಳು. ಸೊಳ್ಳೆಯಿಂದ ಹರಡುವ ಆನೆಕಾಲು ರೋಗದಲ್ಲಿ ಗಂಭೀರ ರೂಪವಾದ ಹೈಡ್ರೋಸೀಲ್ ಪ್ರಕರಣಗಳೂ ಕಾಣುತ್ತಿದ್ದು, 2004ರಿಂದ ಇಂತಹ 428 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತೀ ವರ್ಷ ಆನೆಕಾಲು ರೋಗ ಅಥವಾ ಫೈಲೇರಿಯಾ ಕಾಣಿಸುತ್ತಿದ್ದ ಪ್ರದೇಶ ಹಾಗೂ ಕುಟುಂಬಗಳ ರಕ್ತದ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. 

ಈ ವರ್ಷ 60,000 ಜನರ‌ನ್ನು ಪರೀಕ್ಷಿಸಿ ಅವರ ರಕ್ತದ ಮಾದರಿಗಳನ್ನು ಪರೀಕ್ಷಣೆ ಮಾಡೋ ಗುರಿಯನ್ನು‌ ಜಿಲ್ಲಾ ಆರೋಗ್ಯ ಇಲಾಖೆ ಹೊಂದಿದ್ದು, ಈ ಹಿನ್ನೆಲೆ ಪ್ರತೀ ತಿಂಗಳು 6,000 ರಕ್ತದ ಮಾದರಿಗಳನ್ನು ಪರೀಕ್ಷಿಸಿ ಹೊಸ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕರಾವಳಿ ತೀರ ಪ್ರದೇಶಗಳಲ್ಲಿ ಎಲ್ಲೆಲ್ಲಿ ಈ ಸೋಂಕು ಹಬ್ಬುತ್ತದೆ ಎಂದು ಗುರುತು ಮಾಡಲಾಗಿದ್ದು, ಆ ಪ್ರದೇಶದಲ್ಲಿ ರಾತ್ರಿ ವೇಳೆ ರಕ್ತ ನಡೆಸಿದ ರಕ್ತ ಪರೀಕ್ಷೆಯಲ್ಲಿ ಮಾತ್ರ ಕ್ರಿಮಿ ಕಾಣೋದ್ರಿಂದ ತಪಾಸಣೆಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Uttara Kannada: ಮಂಗನ ಕಾಟಕ್ಕೆ ಬೆದರಿದ ಅಂಕೋಲಾದ ಬೊಬ್ರುವಾಡದ ಮಂದಿ: ಹಲವರ ಮೇಲೆ ದಾಳಿ

ಆನೆಕಾಲು ಮುಕ್ತ ಜಿಲ್ಲೆಯಾಗಿ ಸರಕಾರದ ಮಟ್ಟದಲ್ಲಿ ಘೋಷಣೆ ಮಾಡಲು ಜಿಲ್ಲಾಡಳಿತದಿಂದ ಪ್ರಸ್ತಾವನೆ ಕಳುಹಿಸಲಾಗಿದ್ದು, ಬೇರೆ ಜಿಲ್ಲೆಗಳಿಂದ ಬರುವವರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಹಬ್ಬುತ್ತಿದೆಯೇ ಎಂಬ ಪರೀಕ್ಷೆಯನ್ನು ಕೂಡಾ ನಡೆಸಿ, ಪ್ರಯೋಗಶಾಲೆಗೆ ಕಳುಹಿಸಲಾಗುವುದು ಅಂತಾರೆ ಸಿಇಒ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ನಿರ್ಮೂಲನೆ ಆಗುತ್ತಿರೋ ಸೋಂಕುಗಳ ಆಧಾರದ ಮೇಲೆ ಜಿಲ್ಲೆಯನ್ನು ಆಯಾಯ ಸೋಂಕಿನಿಂದ ಮುಕ್ತ ಜಿಲ್ಲೆಯೆಂದು ಜಿಲ್ಲಾಡಳಿತ ಘೋಷಣೆ ಮಾಡುತ್ತಿದೆ. ಸದ್ಯಕ್ಕೆ ಆನೆ ಕಾಲು ಎಂಬ ಭೀಕರ ರೋಗದಿಂದ ಜಿಲ್ಲೆಯಂತೂ ಮುಕ್ತವಾಗಿರೋದ್ರಿಂದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮಾತ್ರವಲ್ಲದೇ ಜನರು ಕೂಡಾ ಸಾಕಷ್ಟು ಸಂತೋಷಗೊಂಡಿದ್ದಾರೆ. 

Latest Videos
Follow Us:
Download App:
  • android
  • ios