ಬೆಂಗಳೂರು [ಜ.21]:  ಬೆಸ್ಕಾಂ ವ್ಯಾಪ್ತಿಯ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿ ವಿದ್ಯುತ್‌ ಕಂಬದ ಮೇಲೆ ಹತ್ತಿ ವಿದ್ಯುತ್‌ ಲೇನ್‌ ದುಸ್ಥಿತಿಯಲ್ಲಿ ತೊಡಗಿದ್ದಾಗ ಅಪಘಾತಕ್ಕೆ ಒಳಗಾಗಿದ್ದ ಯುವಕ ಪ್ರಕಾಶ್‌ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ವಿದ್ಯುತ್‌ ಸ್ಪರ್ಶಿಸಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ರಾಣೆಬೆನ್ನೂರು ತಾಲೂಕಿನ ಕುಪ್ಪೆಲ್ಲೂರು ಗ್ರಾಮದ ಮೂಲದ ಪ್ರಕಾಶ್‌ ಅವರು ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ಬೆಸ್ಕಾಂ ಅಧಿಕಾರಿಗಳು ಯುವಕ ಚಿಕಿತ್ಸೆಗೆ ಸ್ಪಂದಿಸಿದ್ದು, ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಸಂವಹನದಲ್ಲಿ ಉಂಟಾದ ಲೋಪದಿಂದ ತಪ್ಪು ಮಾಹಿತಿ ರವಾನೆಯಾಗಿರಬಹುದು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಒಬ್ಬಳ ಮೇಲೆ ಇಬ್ಬರಿಗೆ ಲವ್ : ಕೊಲೆಯಲ್ಲಿ ಅಂತ್ಯವಾಯ್ತು ಪ್ರೇಮ ಪ್ರಕರಣ...

ಪ್ರಕಾಶ್‌ ಅವರು, ಸುಂಕದಕಟ್ಟೆಯ ಶ್ರೀ ಲಕ್ಷ್ಮೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಕಾಶ್‌ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಕಾಲಿನ ಭಾಗಗಳಿಗೆ ಗಾಯಗಳಾಗಿದ್ದು, ಬೆನ್ನುಮೂಳೆಗೆ ಪೆಟ್ಟಾಗಿದೆ. 

ಸ್ಕೂಲ್ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ಕೊಟ್ಟ 11ನೇ ತರಗತಿ ವಿದ್ಯಾರ್ಥಿನಿ...

ಚಿಕಿತ್ಸೆ ಮುಂದುವರೆದಿದ್ದು ಸದ್ಯದಲ್ಲೇ ಸಂಪೂರ್ಣ ಚೇತರಿಸಿಕೊಳ್ಳುವ ವಿಶ್ವಾಸವಿದೆ. ಪ್ರಕಾಶ್‌ ಅವರ ಆರೋಗ್ಯ ಸ್ಥಿತಿ ಬಗ್ಗೆ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ ಪೊಲೀಸ್‌ ಠಾಣೆಗೂ ವರದಿ ನೀಡಿದ್ದೇವೆ ಎಂದು ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ನಾರಾಯಣ ಮಾಹಿತಿ ನೀಡಿದರು.