ಸ್ಕೂಲ್ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ಕೊಟ್ಟ 11ನೇ ತರಗತಿ ವಿದ್ಯಾರ್ಥಿನಿ| ಹಾಸ್ಟೆಲ್ ಅಧೀಕ್ಷಕ ಸಸ್ಪೆಂಡ್| ನವಜಾತ ಶಿಶುವಿನ ದೇಹ ವಿದ್ಯಾರ್ಥಿನಿ ಕುಟುಂಬಕ್ಕೆ ಹಸ್ತಾಂತರ

ರಾಯ್ಪುರ[ಜ.19]: ಛತ್ತೀಸ್ ಗಢದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. 11 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸ್ಕೂಲ್ ಹಾಸ್ಟೆಲ್ ನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ನವಜಾತ ಶಿಶು ಹುಟ್ಟುವ ಮುನ್ನವೇ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ನಕ್ಸಲ್ ಪೀಡಿತ ದಂತೇವಾಡಾ ಜಿಲ್ಲೆಯ ಪತಾರಸ್ ನಲ್ಲಿರುವ ಶಾಲಾ ಆವರಣದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಉಪ ಜಿಲ್ಲಾಧಿಕಾರಿ 'ನವಜಾತ ಶಿಶು ಹುಟ್ಟುವ ಮುನ್ನವೇ ಮೃತಪಟ್ಟಿದೆ. ಕಳೆದ ಎರಡು ವರ್ಷಗಳಿಂದ ತಾನು ತನ್ನ ಹಳ್ಳಿಯ ಹುಡುಗನೊಂದಿಗೆ ಸಂಬಂಧವಿಟ್ಟುಕೊಂಡಿದ್ದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಸದ್ಯ ಹಾಸ್ಟೆಲ್ ಅಧೀಕ್ಷಕರನ್ನು ಅಮಾನತ್ತುಗೊಳಿಸಿದ್ದೇವೆ' ಎಂದಿದ್ದಾರೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

Scroll to load tweet…

ಅವಸರದಿಂದಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಿದ್ರು

11ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯನ್ನು ಅವಸರದಿಂದಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಅಧೀಕ್ಷಕರನ್ನು ಸದ್ಯ ಸಸ್ಪೆಂಡ್ ಮಾಡಲಾಗಿದ್ದು, ತನಿಖೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಉಪ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಮೃತ ನವಜಾತ ಶಿಶುವನ್ನು ವಿದ್ಯಾರ್ಥಿನಿ ಕುಟುಂಬ ಸದಸ್ಯುರಿಗೆ ಹಸ್ತಾಂತರಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.