ಬೆಳಗಾವಿ(ಡಿ.05): ಚುನಾವಣೆಯಲ್ಲಿ ಶಾಲಾ ಮಕ್ಕಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಚುನಾವಣಾ ಆಯೋಗವೇ ಕಾನೂನು ಉಲ್ಲಂಘಣೆ ಮಾಡಿದ ಘಟನೆ ಜಿಲ್ಲೆಯ ಗೋಕಾಕ್ ನಗರದಲ್ಲಿ ಇಂದು(ಗುರುವಾರ) ನಡೆದಿದೆ.

ಬೆಳಗ್ಗೆ 7  ಗಂಟೆಯಿಂದ ಮತದಾನ ಆರಂಭವಾಗಿದ್ದು, ವೃದ್ಧರು, ಅಂಗವಿಕಲ ಮತದಾರರನ್ನು ಚುನಾವಣಾಧಿಕಾರಿಗಳು ಕರೆ ತರಲು ಶಾಲಾ ಮಕ್ಕಳ‌ನ್ನ ಬಳಕೆ ಮಾಡಿಕೊಂಡಿದ್ದಾರೆ. ಮರಡಿಮಠದ ಸಖಿ ಮತದಾನ ಕೇಂದ್ರದಲ್ಲಿ ವೀಲ್ ಚೇರ್ ಒತ್ತಲು ಮಕ್ಕಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇಂದು ಮತದಾನ ನಡೆಯುವ ಕಾರಣದಿಂದ ಎಲ್ಲಾ ಕ್ಷೇತ್ರಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಮರಡಿಮಠದ ಮತಗಟ್ಟೆಗೆ ಯೂನಿಫಾರ್ಮ್ ಹಾಕೊಂಡು ಇಬ್ಬರು ಮಕ್ಕಳು ಬಂದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಣ್ಣೂರು ಪುರಸಭೆ ವ್ಯಾಪ್ತಿಯ ಮರಡಿಮಠ ಬೂತ್ ಸಂಖ್ಯೆ 73ರಲ್ಲಿ 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ‌ಅಧಿಕಾರಿಗಳು ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಎಂಬ ಐಡೆಂಟಿಟಿ ಕಾರ್ಡ್ ಸಹ ನೀಡುವ ಮೂಲಕ ಚುನಾವಾಣಾ ಆಯೋಗ ಯಡವಟ್ಟು ಮಾಡಿಕೊಂಡಿದೆ.ಗೋಕಾಕ್ ತಾಲೂಕು ಸ್ವೀಪ್ ಸಮಿತಿಯಿಂದ ವಿದ್ಯಾರ್ಥಿಗಳಿಗೆ, ಸ್ವಯಂಸೇವಕರ ಐಡೆಂಟಿಟಿ ಕಾರ್ಡ್ ನೀಡಲಾಗಿದೆ. 

ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಡಿ. 9ರಂದು ಫಲಿತಾಂಶ ಪ್ರಕಟವಾಗಲಿದೆ.