ತಂಗಿ ಮದುವೆ ವಿರೋಧಿಸಿ ಅಕ್ಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  ತಂಗಿ ಮದುವೆ ಆದ ಎರಡೇ ದಿನಕ್ಕೇ ಅಕ್ಕ ಲಕ್ಷ್ಮಿ (34)  ನೇಣು ಬಿಗಿದುಕೊಂಡು ಆತ್ಮಹತ್ಯೆ 

ಮೈಸೂರು (ಸೆ.20): ತಂಗಿ ಮದುವೆ ವಿರೋಧಿಸಿ ಅಕ್ಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಂಗಿ ಮದುವೆ ಆದ ಎರಡೇ ದಿನಕ್ಕೇ ಅಕ್ಕ ಲಕ್ಷ್ಮಿ (34) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ಘಟನೆ ನಡೆದಿದೆ.

ಸಾವಿನಲ್ಲೂ ಒಂದಾದ ಅವಳಿ ಸಹೋದರಿಯರು!

ದೂರದ ಊರಿಗೆ ತಂಗಿ ಮದುವೆ ಮಾಡದಂತೆ ಅಕ್ಕ ವಿರೋಧಿಸಿದ್ದು, ಅಕ್ಕನ ವಿರೋಧದ ನಡುವೆ ತಂಗಿಯ ಮದುವೆಯನ್ನು ಪೋಷಕರು ಮಾಡಿದ್ದರು. 

ತಂಗಿ ಬಿಂದುಳಿಗೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿಗೆ ಮದುವೆ ಮಾಡಿಕೊಡಲಾಗಿತ್ತು. ಸೆಪ್ಟೆಂಬರ್ 16 ರಂದು ತಂಗಿ ಬಿಂದುಳ ಮದುವೆ ನಡೆದಿತ್ತು. 

ಇದರಿಂದ ಬೇಸತ್ತು ತವರು ಮನೆಯಲ್ಲೇ ಅಕ್ಕ ಲಕ್ಷ್ಮಿ ನೇಣಿಗೆ ಶರಣಾಗಿದ್ದಳು.

ಸದ್ಯ ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.