ಬೆಂಗಳೂರು(ಜು.  26) ಕೊರೋನಾ ವೈರಸ್ ಅಬ್ಬರದ ನಡುವೆಯೂ ರಾಜ್ಯ ಸರ್ಕಾರ ಈದ್ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದೆ. ಮಸೀದಿ ಒಳಗೆ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದು ಒಂದಿಷ್ಟು ನಿಯಮಗಳನ್ನು ಸ್ಪಷ್ಟಪಡಿಸಿದೆ.

ಪ್ರಾರ್ಥನೆ ವೇಳೆ  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.  ಹಿರಿಯ ನಾಗರಿಕರಿಗೆ ಪ್ರಾರ್ಥನೆ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಮತ್ತೆ ಬೆಂಗಳೂರಿನ ಮೂರು ವಲಯಗಳು ಡೇಂಜರ್

50 ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಸಾರಿಗೆ ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆ ಸಲ್ಲಿಸುವಾಗ ಮಾಸ್ಕ್ ಕಡ್ಡಾಯ. ಪ್ರಾರ್ಥನೆ ಮಾಡಲು ತಮ್ಮ ವೈಯಕ್ತಿಕ ನೆಲಹಾಸನ್ನು ತರಬೇಕು.

ಕೊರೋನಾ ವೈರಸ್ ಕಾರಣಕ್ಕೆ ಅನೇಕ ರಾಜ್ಯ ಸರ್ಕಾರಗಳು ಜನ ಒಂದೆಡೆ ಸೇರುವುದಕ್ಕೆ ನಿರ್ಬಂಧ ಹಾಕಿವೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  90 ಸಾವಿರ ಈಗಾಗಲೆ ದಾಟಿದೆ. ಕರ್ನಾಟಕಲ್ಲಿ ಪ್ರತಿದಿನ ಐದು ಸಾವಿರ ಕೇಸು ದಾಖಲಾಗುತ್ತಿದ್ದರೆ ಬೆಂಗಳೂರಿನಲ್ಲಿ ಎರಡು ಸಾವಿರ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ.