ದಾವಣಗೆರೆಯಲ್ಲಿ ಎರಡು ಕೋಮುಗಳ ನಡುವೆ ಮಾತಿನ ಚಕಮಕಿ
ಸಾಮಾನ್ಯವಾಗಿ ಗಣೇಶ ಹಬ್ಬ, ಈದ್ ಮಿಲಾದ್ ಅಂಥ ಹಬ್ಬಗಳು ಎದುರಾದಾಗ ಪೊಲೀಸ್ ಇಲಾಖೆ ಸ್ಥಳೀಯ ಮಟ್ಟದಲ್ಲಿ ಶಾಂತಿ ಸಭೆ ನಡೆಸಿ ಎಲ್ಲ ಕೋಮಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ಆದರೆ ದಾವಣಗೆರೆಯಲ್ಲಿ ಸಣ್ಣ ಮಟ್ಟದ ಘರ್ಷಣೆ ಆಗಿದ್ದು ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ದಾವಣಗೆರೆ[ನ.20] ಈದ್ ಮಿಲಾದ್ ಹಬ್ಬದ ಪ್ರಯುಕ್ತ ಧ್ವಜ ಕಟ್ಟುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಮಧ್ಯ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯ ರಿಂಗ್ ರೋಡ್ ಬಳಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಧ್ವಜ ಕಟ್ಟುವ ವಿಚಾರ ವೇಳೆ ಎರಡು ಕೋಮುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಕಂಬವೊಂದಕ್ಕೆ ಹಬ್ಬದ ಧ್ವಜ ಕಟ್ಟಲು ಮುಂದಾಗಿದ್ದ ಒಂದು ಸಮುದಾಯದ ಯುವಕರು ಮುಂದಾಗಿದ್ದರು. ಆದರೆ ಅದೆ ಜಾಗದಲ್ಲಿ ಮತ್ತೊಂದು ಸಮುದಾಯಕ್ಕೆ ಸೇರಿದ ಧ್ವಜ ಇತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ತಲುಪಿತ್ತು.