Asianet Suvarna News Asianet Suvarna News

Untimely Rain Effect: ಡಬಲ್ ಸೆಂಚುರಿ ಬಾರಿಸಿದ ಬದನೆಕಾಯಿ ದರ: ಕಂಗಾಲಾದ ಗ್ರಾಹಕ..!

*  ಬದನೆಕಾಯಿ ಕೇಜಿಗೆ 200 ರು.: ಇನ್ನಿತರ ತರಕಾರಿ ದರವೂ ಗಗನಕ್ಕೆ
*  ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯ
*  ಬದನೆಕಾಯಿ ದರ ಸಾರ್ವಕಾಲಿಕ ಏರಿಕೆ

Eggplant Price Increase Due to Untimely Rain in Hubballi grg
Author
Bengaluru, First Published Dec 26, 2021, 8:11 AM IST

ಹುಬ್ಬಳ್ಳಿ(ಡಿ.26):  ಮಾರುಕಟ್ಟೆಗಳಲ್ಲಿ ತರಕಾರಿ(Vegetable) ಬೆಲೆ ಗಗನ ಮುಖಿಯಾಗಿದ್ದು, ಬದನೆಕಾಯಿ(Eggplant) ಬೆಲೆ ಡಬಲ್‌ ಸೆಂಚುರಿ ಬಾರಿಸಿದೆ! ಕಳೆದ ತಿಂಗಳು ಕೇಜಿಗೆ 50-60ರ ಆಸುಪಾಸಿನಲ್ಲಿ ಇದ್ದ ಬದನೆ ಈ ವಾರ ಇದ್ದಕ್ಕಿದ್ದಂತೆ 200ರ ಗಡಿ ತಲುಪಿದೆ. ಹಳೇಹುಬ್ಬಳ್ಳಿ ಮತ್ತು ಹುಬ್ಬಳ್ಳಿಯ(Hubballi) ಜನತಾ ಬಜಾರ್‌ನ ತರಕಾರಿ ಮಾರುಕಟ್ಟೆಗಳಲ್ಲಿ(Market) ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಕೆಲವು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ(Untimely Rain)  ತರಕಾರಿ ಬೆಳೆ ಹಾಳಾಗಿದೆ. ಅಲ್ಲದೆ ಇದರಿಂದಾಗಿ ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ.

ಹಾಗೆಯೇ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬದನೆಕಾಯಿ ಬರುತ್ತಿದೆ. 15 ಕೇಜಿಯ ಒಂದು ಬಾಕ್ಸ್‌ಗೆ 2,200-2,400 ಇದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ. ಬದನೆಕಾಯಿ ಬೆಲೆ ಹೆಚ್ಚಳ ವ್ಯಾಪಾರಸ್ಥರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಟೊಮಟೋ ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿ 30-40, ಜನತಾ ಬಜಾರ್‌ನಲ್ಲಿ 50 ಇದೆ. ಬದನೆಕಾಯಿ ಹಳೇಹುಬ್ಬಳ್ಳಿಯಲ್ಲಿ 120-140, ಜನತಾ ಬಜಾರ್‌ನಲ್ಲಿ 200ಕ್ಕೆ ಮಾರಾಟವಾಗುತ್ತಿದೆ. ತರಕಾರಿ ಬೆಲೆಗಳಲ್ಲಿ ನಿತ್ಯವೂ ಹೆಚ್ಚು ಕಮ್ಮಿಯಾಗುತ್ತದೆ. ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿ ಬೆಂಡೆಕಾಯಿ, ಬೀನ್ಸ್‌, ಬದನೆಕಾಯಿ, ಚೌಳಿಕಾಯಿ ಬೆಲೆ ತುಂಬಾ ಹೆಚ್ಚಾಗಿದೆ.

Cover Story: ತರಕಾರಿ ಬೆಲೆ ಗಗನಕ್ಕೆ, ಎಪಿಎಂಸಿಗಳಲ್ಲಿ ದಲ್ಲಾಳಿಗಳು ಹೇಳಿದ್ದೇ ಬೆಲೆ, ಆಡಿದ್ದೇ ಮಾತು!

ಸೊಪ್ಪಿನ ಬೆಲೆಯೂ ಹೆಚ್ಚಳ:

ಮೆಂತ್ಯೆ, ಸಬ್ಬಸಗಿ, ಪಾಲಕ್‌, ಕೊತ್ತಂಬರಿ ಸೇರಿದಂತೆ ಇನ್ನಿತರ ಸೊಪ್ಪುಗಳ ಬೆಲೆಯೂ ಗ್ರಾಹಕರ ಜೇಬು ಸುಡುತ್ತಿದೆ.

ತರಕಾರಿ ಬೆಲೆ

ಬದನೆಕಾಯಿ 200-220
ಬೆಂಡೆಕಾಯಿ 120-150
ಹಿರೇಕಾಯಿ 100-120
ಚಳಿಕಾಯಿ 100-120
ಬೀನ್ಸ್‌ 80-100
ಸೌತೆಕಾಯಿ 80-90
ಗಜ್ಜರಿ 70-80
ಕ್ಯಾರೇಟ್‌ 60-70
ಮೆಣಸಿನಕಾಯಿ 60-80
ಉಳ್ಳಾಗಡ್ಡಿ 40-50
ಟೊಮಾಟೋ .40​​​-50
ಆಲೂಗಡ್ಡೆ 15-30

ವಾರದಿಂದ ಮತ್ತೆ ಬೆಲೆ ಏರಿಕೆ ಬಿಸಿ

ಚಿಕ್ಕಬಳ್ಳಾಪುರ: ನವಿಲುಕೋಸು 100 ರು, ಕ್ಯಾಪ್ಸಿಕಂ 80 ರು, ಬೀನ್ಸ್‌ 90, ಮೂಲಂಗಿ, ಕ್ಯಾರೆಂಟ್‌ 70 ರಿಂದ 80 ರು, ಹೀರೆಕಾಯಿ, ಬದನೆ ಕಾಯಿ ಕೆಜಿ 80 ರು, ಸೊರೆಕಾಯಿ, ಹಾಗಲಕಾಯಿ ಕೆಜಿ 80 ರು, ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಟೊಮೇಟೋ (Tomato) ದರ ಕೇಳುವ ಸ್ಥಿತಿಯಲ್ಲಿ ಇಲ್ಲ. ಕೆಜಿ 1 ಟೊಮೇಟೋ 100, 120 ರು, ಮಹಾ ಮಳೆಯಿಂದಾಗಿ ಕೇವಲ 15 ದಿನಗಳಲ್ಲಿ 3 ಪಟ್ಟು ಬೆಲೆ ಹೆಚ್ಚಿಸಿಕೊಂಡಿರುವ ಜಿಲ್ಲೆಯ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆ ಪರಿ ಇದು.

Omicron: ಹಣ್ಣು, ತರಕಾರಿಗಳಿಂದಲೂ ಹರಡುತ್ತದೆಯೇ?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ ಅಪಾರ ಪ್ರಮಾಣದ ತರಕಾರಿ ಕೊಚ್ಚಿ ಹಾನಿಯಾದ ಪರಿಣಾಮ ಈಗ ತರಕಾರಿ ಬೆಳೆಯುವ ರೈತರೇ ತರಕಾರಿ ಖರೀದಿಸುವ ದುಸ್ಥಿತಿಗೆ ಬಂದಿದ್ದಾರೆ. ತೀವ್ರ ಮಳೆಯಿಂದ ಜಿಲ್ಲೆಯ ಕೃಷಿ ಬೆಳೆಗಳು (Price) ನೆಲಕಚ್ಚಿದ್ದು ಒಂದಡೆಯಾದರೆ ತೋಟಗಾರಿಕಾ ಬೆಳೆಗಳು ಹೇರಳ ಪ್ರಮಾಣದಲ್ಲಿ ಮಣ್ಣು ಪಾಲಾಗಿದ್ದರಿಂದ ಜಿಲ್ಲಾದ್ಯಂತ ಅಗತ್ಯ ತರಕಾರಿ ಬೆಳೆಗಳಿಗೆ ಭಾರೀ ಬೇಡಿಕೆ ಕಂಡು ಬಂದು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ದುಬಾರಿ ದುನಿಯಾ ಜನರನ್ನು ಕಂಗಾಲಾಗುವಂತೆ ಮಾಡಿದೆ. ತಿಂಗಳು, ನಾಲ್ಕೈದು ದಿನಗಳ ಹಿಂದೆ ಮಾರಾಟವಾದ ಬೆಲೆ ಇಂದು ಇಲ್ಲವಾಗಿದ್ದು ದಿನದಿಂದ ದಿನಕ್ಕೆ ತರಕಾರಿ ಬೆಲೆ ಹೆಚ್ಚಳ ಆಗುತ್ತಿರುವುದು ಗ್ರಾಹಕರ ನಿದ್ದೆಗೆಡಿಸಿದೆ.

ಇನ್ನು 2 ತಿಂಗಳು ತರಕಾರಿ ಬೆಲೆ ಬಿಲ್‌ಕುಲ್ ಇಳಿಯಲ್ಲ..!

ನಿರಂತರ ಮಳೆಯಿಂದಾಗಿ (Rain) ಬೆಳೆಗಳು ನೆಲಕಚ್ಚಿದ್ದು, ಎಲ್ಲ ತರಕಾರಿಗಳು  (Vegitables) ಬೆಲೆ ಗಗನಕ್ಕೇರಿವೆ. ಈ ಏರಿಕೆ ಮತ್ತಷ್ಟುಕಾಲ ಮುಂದುವರೆಯುವ ಲಕ್ಷಣಗಳಿವೆ. ಕ್ಯಾಪ್ಸಿಕಂ, ಕ್ಯಾರೆಟ್‌, ನುಗ್ಗೇಕಾಯಿ, ಟೊಮೆಟೋ ಮತ್ತಿತರ ಅಗತ್ಯ ತರಕಾರಿಗಳ ಬೆಲೆ ಕಡಿಮೆ ಆಗಲು ಸುಮಾರು ಒಂದೂವರೆಯಿಂದ ಎರಡು ತಿಂಗಳು ಬೇಕಾಗಬಹುದು.
 

Follow Us:
Download App:
  • android
  • ios