Asianet Suvarna News Asianet Suvarna News

ಶಿಕ್ಷಣ ವ್ಯವಸ್ಥೆ ಜಾತಿ, ನಿರಪೇಕ್ಷಿತವಾಗರಬೇಕು: ಶಾಸಕ ನಾರಾಯಣಸ್ವಾಮಿ

ಶಾಲಾ ಮತ್ತು ಕಾಲೇಜುಗಳು ಜಾತಿ, ಧರ್ಮರಹಿತವಾದ ಬೋಧನಾ ವ್ಯವಸ್ಥೆಯನ್ನು ಹೊಂದಿರಬೇಕು, ಧರ್ಮ ನಿರಪೇಕ್ಷಿತ ವ್ಯವಸ್ಥೆಯ ಮೂಲಕ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಇಂದಿನ ಮಕ್ಕಳು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

Education system should be caste free Says MLA SN Narayanaswamy gvd
Author
First Published Jan 14, 2024, 10:03 PM IST

ಬಂಗಾರಪೇಟೆ (ಜ.14): ಶಾಲಾ ಮತ್ತು ಕಾಲೇಜುಗಳು ಜಾತಿ, ಧರ್ಮರಹಿತವಾದ ಬೋಧನಾ ವ್ಯವಸ್ಥೆಯನ್ನು ಹೊಂದಿರಬೇಕು, ಧರ್ಮ ನಿರಪೇಕ್ಷಿತ ವ್ಯವಸ್ಥೆಯ ಮೂಲಕ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಇಂದಿನ ಮಕ್ಕಳು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದುಷ್ಟ ಶಕ್ತಿಗಳ ತಂತ್ರಕ್ಕೆ ಬಲಿಯಾಗದೆ ಗುರಿ ಸಾಧನೆಯತ್ತ ತಮ್ಮ ಚಿತ್ತವನ್ನು ಹರಿಸುವಂತಹಾಗಬೇಕು ಎಂದರು.

ಸಮಯ ಪಾಲನೆಗೆ ಆದ್ಯತೆ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಅದನ್ನು ಸಕಾರ ಗೊಳಿಸುವ ನಿಟ್ಟಿನಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಧೈರ್ಯವಾಗಿ ಗುರಿ ಸಾಧನೆಯುತ್ತ ಮುನ್ನಡೆಯಬೇಕು. ಒಂದು ಬಾರಿ ಕಳೆದು ಹೋದ ಸಮಯ ಮರುಕಳಿಸುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಹಾಗೂ ಗುರು ಹಿರಿಯರನ್ನು ಗೌರವಿಸುವುದರ ಮೂಲಕ ತಮ್ಮ ಪೋಷಕರಿಗೆ ಗೌರವ ತರುವ ನಿಟ್ಟಿನಲ್ಲಿ ನಡೆದುಕೊಳ್ಳುವಂತಾಗಬೇಕು.

ಸರ್ಕಾರಿ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಬಡವರು, ರೈತರು ಹಾಗೂ ಶ್ರಮಿಕ ವರ್ಗ ಕುಟುಂಬದಿಂದ ಸಾವಿರಾರು ಭರವಸೆಗಳನ್ನು ಹೊತ್ತು ಬಂದವರಾಗಿರುತ್ತಾರೆ, ಆದಕಾರಣ 11 ವರ್ಷದ ಸುದೀರ್ಘ ನನ್ನ ಅಧಿಕಾರ ಅವಧಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿಗೆ ಬೇಕಾದಂತ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇನೆ, ನಿಮ್ಮ ಭರವಸೆಗಳ ಗುರಿ ಹುಸಿ ಆಗದಿರಲಿ ಎಂದು ಬಯಸುತ್ತೇನೆ ಎಂದರು.

ಪರಿಹಾರ ಕೈಗೊಳ್ಳದಿದ್ದರೆ ಶಿಸ್ತು ಕ್ರಮ: ಸಂಸದ ಡಿ.ಕೆ.ಸುರೇಶ್

ಶಾಲೆಯ ವಿದ್ಯಾರ್ಥಿನಿ ಈಗ ಜಡ್ಜ್‌: ಇತರ ಕಾಲೇಜುಗಳಿಗೆ ಹೋಲಿಕೆ ಮಾಡಿದಾಗ ನಮ್ಮ ಕಾಲೇಜಿನಲ್ಲಿ ಅತಿ ಹೆಚ್ಚು ನುರಿತ ಉಪನ್ಯಾಸಕ ವೃಂದದವರಿದ್ದು ಅವರ ಶ್ರಮದಿಂದ ಉತ್ತಮ ಫಲಿತಾಂಶ ತಂದ‌ ಕೀರ್ತಿ ಕಾಲೇಜಿನದು. ನಮ್ಮ ಕಾಲೇಜಿನಲ್ಲಿ ಓದಿದ ಗಾಯತ್ರಿ ಎಂಬ ವಿದ್ಯಾರ್ಥಿಯು ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ ಇತರ ವಿದ್ಯಾರ್ಥಿಗಳು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಮಲಬಾರ್ ಗೋಲ್ಡ್ ಸಂಸ್ಥೆಯ ವತಿಯಿಂದ 160 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸುಬ್ರಮಣಿ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Follow Us:
Download App:
  • android
  • ios