ಎಲ್ಲಾ ಸಮಸ್ಯೆಗೆ ಶಿಕ್ಷಣವೊಂದೇ ಪರಿಹಾರ

ಶಿಕ್ಷಣದಿಂದ ಮಾತ್ರ ಪ್ರಗತಿ. ಗ್ರಾಮೀಣ ಬಡವರು ಹೆಚ್ಚು ವಿದ್ಯಾವಂತರಾಗಬೇಕು. ಇದರಿಂದ ಗ್ರಾಮ ಮತ್ತು ಸುಭದ್ರವಾದ ದೇಶಕಟ್ಟಲು ಸಾಧ್ಯ ಎಂದು ಮಾತೃಶ್ರೀ ¶ೌಂಡೇಷನ್‌ ಸಂಸ್ಥೆಯ ಅಧ್ಯಕ್ಷ ಹಾಗೂ ನಿವೃತ್ತ ಅಪರ ವಾಣಿಜ್ಯ ತೆರಿಗೆ ಆಯುಕ್ತ ತಾಲೂಕಿನ ಜಂಗಮರಹಳ್ಳಿಯ ಎಚ್‌. ಲಕ್ಷ್ಮೀನಾರಾಯಣ್‌ ಅವರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Education is the only solution to all problems snr

  ಪಾವಗಡ :  ಶಿಕ್ಷಣದಿಂದ ಮಾತ್ರ ಪ್ರಗತಿ. ಗ್ರಾಮೀಣ ಬಡವರು ಹೆಚ್ಚು ವಿದ್ಯಾವಂತರಾಗಬೇಕು. ಇದರಿಂದ ಗ್ರಾಮ ಮತ್ತು ಸುಭದ್ರವಾದ ದೇಶಕಟ್ಟಲು ಸಾಧ್ಯ ಎಂದು ಮಾತೃಶ್ರೀ ¶ೌಂಡೇಷನ್‌ ಸಂಸ್ಥೆಯ ಅಧ್ಯಕ್ಷ ಹಾಗೂ ನಿವೃತ್ತ ಅಪರ ವಾಣಿಜ್ಯ ತೆರಿಗೆ ಆಯುಕ್ತ ತಾಲೂಕಿನ ಜಂಗಮರಹಳ್ಳಿಯ ಎಚ್‌. ಲಕ್ಷ್ಮೀನಾರಾಯಣ್‌ ಅವರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಾತೃಶ್ರೀ ದಾರಿದೀಪ ¶ೌಂಡೇಶನ್‌ ಜಂಗಮರಹಳ್ಳಿ ಇವರ ವತಿಯಿಂದ ಶುಕ್ರವಾರ ತಾಲೂಕಿನ ವೈ.ಎನ್‌. ಹೊಸಕೋಟೆ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಪೆನ್ನು ಇತರೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಈ ಹಿಂದೆ ತಂದೆ-ತಾಯಿ ಕಷ್ಟಪಟ್ಟು ದುಡಿದ ಹಣದಲ್ಲಿ ಹೊಟ್ಟೆಬಟ್ಟೆಕಟ್ಟಿವ್ಯಾಸಂಗ ಮಾಡುವ ಪರಿಸ್ಥಿತಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ ಅನೇಕ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಈಗ ಕಾಲ ಬದಲಾಗಿದೆ. ಉತ್ತಮ ವಾತಾವರಣ, ನುರಿತ ಶಿಕ್ಷಕರು ಮತ್ತು ಸರ್ಕಾರ ಹೆಚ್ಚಿಗೆ ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಉತ್ತಮ ವಿದ್ಯಾವಂತರಾಗಿ ತಂದೆ-ತಾಯಿ, ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತಹ ವಿದ್ಯಾರ್ಥಿಗಳಾಗಬೇಕು. ಶಿಕ್ಷಣದಿಂದ ಮಾತ್ರ ಗ್ರಾಮ, ದೇಶದ ಪ್ರಗತಿ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆ ಸಾಧ್ಯವಾಗಲಿದೆ ಎಂದು ವಿವರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜಿಸಿದರು.

ಪ್ರತಿ ವರ್ಷದಂತೆ ನಮ್ಮ ಮಾತೃಶ್ರೀ ದಾರಿದೀಪ ¶ೌಂಡೇಶನ್‌ ತಾಲೂಕಿನ ಗ್ರಾಮೀಣ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿದೆ. ಈಗಾಗಲೇ ಚಿಕ್ಕಜಾಲೋಡು, ಜಿ.ಟಿ.ಹಳ್ಳಿ, ವೈ.ಎನ್‌ ಹಳ್ಳಿ,ದೊಡ್ಡಹಳ್ಳಿ, ಚಿಕ್ಕಹಳ್ಳಿ, ಪೋತಗಾನಹಳ್ಳಿ, ನೀಲಮ್ಮನಹಳ್ಳಿ, ಇಂದ್ರಬೆಟ್ಟ, ಗುಜ್ಜನಡು, ಸಿ.ಎಚ್‌.ಪಾಳ್ಯ, ವೀರ್ಲಗೊಂದಿ, ತಾಲೂಕಿನ ಹಲವಾರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದ್ದು ಸಂತಸ ತಂದಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ವೇಲುರಾಜ್‌ ಮಾತನಾಡಿದರು. ಕಾರ್ಯದರ್ಶಿ ಆರ್‌.ಎಲ್‌.ರಾಜೇಶ್‌, ಶಾಲಾ ಮುಖ್ಯೋಪಾಧ್ಯಾಯ, ಸಹ ಶಿಕ್ಷಕರು, ಗ್ರಾಮಸ್ಥರು, ಮಾತೃಶ್ರೀ ದಾರಿದೀಪ ¶ೌಂಡೇಶನ್‌ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಲ್ಪ ಸಂಖ್ಯಾತ ಶಿಕ್ಷಣಕ್ಕೆ ಭರ್ಜರಿ ಕೊಡುಗೆ

 ಬೆಂಗಳೂರು (ಜು.08): ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ, ಸ್ವ ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಮುಸ್ಲಿಮರಿಗೆ ಮಾತ್ರವಲ್ಲದೆ, ಇತರ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರೈಸ್ತ, ಜೈನ, ಸಿಖ್ಖರಿಗೆ ಭರಪೂರ ಅನುದಾನ ಘೋಷಿಸಿದೆ. ವಿಶೇಷವಾಗಿ ಕ್ರಿಶ್ಚಿಯನ್‌ ಸಮುದಾಯದ ಅಭಿವೃದ್ಧಿಗೆ ‘ಕರ್ನಾಟಕ ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮ’ ಸ್ಥಾಪಿಸಿ 100 ಕೋಟಿ ರು. ಅನುದಾನ ನೀಡಿದೆ

 

10 ಹೊಸ ಶಾಲೆ: ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಮುಂದುವರೆಸುವುದಕ್ಕೆ 60 ಕೋಟಿ ರು., 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ರಿಂದ 12ನೇ ತರಗತಿಗಳನ್ನು ಇಂಟಿಗ್ರೆಡೇಟ್‌ ಶಾಲೆಗಳನ್ನಾಗಿ ಉನ್ನತೀಕರಿಸಲು 30 ಕೋಟಿ ರು. ನೀಡಿದೆ. ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ 28 ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗಕ್ಕೆ ಶೇ.2ರ ಬಡ್ಡಿ ದರದಲ್ಲಿ ವಾರ್ಷಿಕ ಒಂದು ಲಕ್ಷ ರು. ಸಾಲ ನೀಡಲು 75 ಕೋಟಿ ರು. ಮೀಸಲಿಟ್ಟಿದೆ. ಎಲ್ಲಾ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಭಾಷಾ ಪ್ರಯೋಗಾಲಯ ಸ್ಥಾಪನೆಯ ಘೋಷಣೆ ಮಾಡಿದೆ.

Latest Videos
Follow Us:
Download App:
  • android
  • ios