ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕೆ ಪ್ರಥಮ ಆದ್ಯತೆ: ಸಚಿವ ಮಂಕಾಳು ವೈದ್ಯ

ಮಕ್ಕಳು ಈ ದೇಶದ ಆಸ್ತಿಯಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಲ್ಲರು. ರಾಜ್ಯ ಸರ್ಕಾರದಿಂದ, ತಮ್ಮಿಂದ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಯಾವಾಗಲೂ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಹೇಳಿದರು. 

Education first priority from state government Says Minister Mankal Vaidya gvd

ಕಾರವಾರ (ಜು.01): ಮಕ್ಕಳು ಈ ದೇಶದ ಆಸ್ತಿಯಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಲ್ಲರು. ರಾಜ್ಯ ಸರ್ಕಾರದಿಂದ, ತಮ್ಮಿಂದ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಯಾವಾಗಲೂ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಹೇಳಿದರು. ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ನಡೆದ ಯುವ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವ, ಆದರ್ಶ ಹಾಗೂ ಅವರ ಮಾರ್ಗದರ್ಶನಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಹಾಗೆ ಸಾಧನೆಯಲ್ಲಿ ತೊಡಗಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಅಷ್ಟೊಂದು ಅವಕಾಶಗಳು ಇರುತ್ತಿರಲಿಲ್ಲ. 

ಆದರೆ ಈಗ ಎಲ್ಲ ತರಹದ ಅವಕಾಶಗಳು ಹಾಗೂ ಸೌಲಭ್ಯಗಳು ಇವೆ. ಅಂತಹ ಸೌಲಭ್ಯಗಳನ್ನು ಆದಷ್ಟು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಯುವಜನರ ಪ್ರತಿಭೆ ಹೊರತರಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇಂತಹ ಯೋಜನೆಗಳ ಬಗ್ಗೆ ತಿಳಿದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್‌ ವರಿಷ್ಠ ಎನ್‌. ವಿಷ್ಣುವರ್ಧನ, ಮೆಡಿಕಲ್‌ ಕಾಲೇಜಿನ ನಿರ್ದೇಶಕ ಡಾ. ಗಜಾನನ ನಾಯಕ, ಡಾ. ಶಿವಾನಂದ ಕುಡ್ತರಕರ ಮೊದಲಾದವರು ಇದ್ದರು.

Kolar: ಕಲ್ಲುಕುಟುಗರಿಗೆ ಕೆಲಸ ಮಾಡಲು ಪರವಾನಗಿ ನೀಡಿ: ಸಂಸದ ಮುನಿಸ್ವಾಮಿ ಆಗ್ರಹ

ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರ ನೀಡಲು ಹಣದ ಬೇಡಿಕೆ: ಉದ್ಯಮಿ ಒಬ್ಬರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಪ್ರಮಾಣಪತ್ರ ನೀಡಲು ಹಣ ಕೇಳುತ್ತಿರುವ ವಿಚಾರ ಸಚಿವ ಮಂಕಾಳು ವೈದ್ಯ ಅವರ ಗಮನಕ್ಕೆ ಬರುತ್ತಿದ್ದಂತೆ ಗರಂ ಆದರು. ತಾಲೂಕಿನ ನಂದವಾಳದ ಗೋವಿಂದ ನಾಯ್ಕ ತಮ್ಮ ಮಾಲೀಕತ್ವದ ರೋಷನ್‌ ರೆಡ್ಡಿ ಮಸಾಲ ತಯಾರಿಸುವ ಕಂಪೆನಿಗೆ ಪ್ರಮಾಣಪತ್ರ ನೀಡಲು ಇಲಾಖೆಯಲ್ಲಿ .5000 ಲಂಚ ಕೇಳಿರುವ ಬಗ್ಗೆ ಸಚಿವರಿಗೆ ತಿಳಿಸಿದರು. ಇದರಿಂದ ಕೋಪಗೊಂಡ ಸಚಿವರು ಜಿಪಂ ಸಿಇಒ ಅವರನ್ನು ಕರೆದು ಯಾರು ಅಧಿಕಾರಿ? ಹಣ ಏಕೆ ನೀಡಬೇಕು ಎಂದು ಪ್ರಶ್ನಿಸಿದರು. ಈ ಹಿಂದಿನ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆಗೆ ಬರಬೇಕಾದರೆ ಲಂಚ ನೀಡಿ ಬರಬೇಕು ಎನ್ನುವ ಬಗ್ಗೆ ಕೇಳಿದ್ದೇನೆ. ಆದರೆ ಇನ್ನು ಮುಂದೆ ಇದೆಲ್ಲ ನಡೆಯುವುದಿಲ್ಲ. ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ. ಅಂತಹ ಅಧಿಕಾರಿಗಳು ನನ್ನ ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಎಪಿಎಂಸಿ ಮಳಿಗೆ ಬಾಡಿಗೆ ಏರಿಕೆ ತಡೆಯಲು ಮನವಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಪ್ರಾಂಗಣದಲ್ಲಿನ ಪೇಟೆ ಕಾರ್ಯಕರ್ತರ ಮಳಿಗೆ ಬಾಡಿಗೆ ವಿಪರೀತ ಏರಿಕೆ ಸಮಸ್ಯೆ ಬಗೆಹರಿಸುವಂತೆ ಕೋರಿ ಪೇಟೆ ಕಾರ್ಯಕರ್ತರ ಪ್ರತಿನಿಧಿ ಅರವಿಂದ ಕೃಷ್ಣರಾವ್‌ ಪೈ ನೇತೃತ್ವದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರನ್ನು ಅವರ ಭಟ್ಕಳದ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ 35 ವರ್ಷಗಳಿಂದ ಮಳಿಗೆಗಳನ್ನು ಬಾಡಿಗೆಗೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಪೇಟೆ ಕಾರ್ಯಕರ್ತರಿಗೆ ಪ್ರತಿ ವರ್ಷ ಶೇ. 5ರಂತೆ ಏರಿಕೆ ಮಾಡಿ ವಿಧಿಸುತ್ತಿದ್ದ ಬಾಡಿಗೆಯನ್ನು ಏಕಾಏಕಿ ಎಂಟು ಪಟ್ಟು ಹೆಚ್ಚು ಮಾಡಿರುವುದು ಸರಿಯಲ್ಲ. 

ಸಂಸದ ಮುನಿಸ್ವಾಮಿ ಹೇಳಿಕೆಗೆ ಕಿಮ್ಮತ್ತಿನ ಬೆಲೆ ಇಲ್ಲ: ಶಾಸಕ ನಂಜೇಗೌಡ

ಇದನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ತಕ್ಷಣ ಮನವಿಗೆ ಸ್ಪಂದಿಸಿದ ಸಚಿವ ಮಂಕಾಳು ವೈದ್ಯ, ದೂರವಾಣಿ ಮೂಲಕ ಎಪಿಎಂಸಿ ಹೆಚ್ಚುವರಿ ನಿರ್ದೇಶಕ ನಾಗೇಶ್ವರ ಅವರನ್ನು ಸಂಪರ್ಕಿಸಿ, ಕುಮಟಾ ಮಾರುಕಟ್ಟೆಪ್ರಾಂಗಣದಲ್ಲಿ ಮಳಿಗೆಗಳ ಬಾಡಿಗೆಯನ್ನು ಏಕಾಏಕಿ ಎಂಟು ಪಟ್ಟು ಏರಿಕೆ ಮಾಡಿದ್ದನ್ನು ತಡೆಹಿಡಿಯಲು ಸೂಚಿಸಿದರು. ಮುಂದಿನ ದಿನಗಳಲ್ಲಿ ಎಪಿಎಂಸಿ ಕಾಯ್ದೆ ಬದಲಾವಣೆ ಹಾಗೂ ಆಡಳಿತ ಮಂಡಳಿಗೆ ಚುನಾವಣಾ ನಡೆಯಲಿದ್ದು, ಅಲ್ಲಿಯವರೆಗೆ ಈ ಹಿಂದಿನಂತೆ ಶೇ. 5ರಂತೆ ಬಾಡಿಗೆ ಏರಿಕೆ ಮಾಡಿ ಮಳಿಗೆಗಳನ್ನು ಮುಂದುವರಿಸಲು ನಿರ್ದೇಶನ ನೀಡಿದರು.

Latest Videos
Follow Us:
Download App:
  • android
  • ios