Tumakur : ವಿದ್ಯಾವಂತರೇ ದೇಶ ಮತ್ತು ಸಮಾಜಕ್ಕೆ ಮಾರಕ
ವಿದ್ಯಾವಂತರಿಂದಲೇ ದೇಶ ಮತ್ತು ಸಮಾಜಕ್ಕೆ ಮಾರಕವಾಗುತ್ತಿದ್ದು, ನಾನು ಎಂಬ ಸ್ವಾರ್ಥ, ವಿದ್ಯೆ ಕಲಿತಿದ್ದೇನೆಂಬ ಆಹಂಕಾರ, ಹಣದ ವ್ಯಾಮೋಹಗಳಿಂದ ಕುಟುಂಬದಲ್ಲಿನ ಒಗ್ಗಟ್ಟು, ನಂಬಿಕೆ, ಸಾಮರಸ್ಯಗಳನ್ನು ಹಾಳಾಗುತ್ತಿದ್ದು ನಮ್ಮ ಸಂಸ್ಕೃತಿ, ಸಂಸ್ಕಾರದ ಮೇಲೂ ಪ್ರಭಾವ ಬೀರುತ್ತಿದ್ದು ಇದು ನೈತಿಕ ಅಧಃಪತನ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಿಪಟೂರು (ನ.06): ವಿದ್ಯಾವಂತರಿಂದಲೇ ದೇಶ ಮತ್ತು ಸಮಾಜಕ್ಕೆ ಮಾರಕವಾಗುತ್ತಿದ್ದು, ನಾನು ಎಂಬ ಸ್ವಾರ್ಥ, ವಿದ್ಯೆ ಕಲಿತಿದ್ದೇನೆಂಬ ಆಹಂಕಾರ, ಹಣದ ವ್ಯಾಮೋಹಗಳಿಂದ ಕುಟುಂಬದಲ್ಲಿನ ಒಗ್ಗಟ್ಟು, ನಂಬಿಕೆ, ಸಾಮರಸ್ಯಗಳನ್ನು ಹಾಳಾಗುತ್ತಿದ್ದು ನಮ್ಮ ಸಂಸ್ಕೃತಿ, ಸಂಸ್ಕಾರದ ಮೇಲೂ ಪ್ರಭಾವ ಬೀರುತ್ತಿದ್ದು ಇದು ನೈತಿಕ ಅಧಃಪತನ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕಸಬಾ ಹೋಬಳಿ ಮತ್ತೀಹಳ್ಳಿ ಗ್ರಾಮದಲ್ಲಿ (Village) ಹಿರಿಯ ವಿದ್ಯಾರ್ಥಿಗಳ (Students) ಸಂಘದ ವತಿಯಿಂದ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾವಂತರಿಂದಲೇ ಕುಟುಂಬದಲ್ಲಿನ ಸಾಮರಸ್ಯ ಹಾಳಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಯರನ್ನು ದೂರ ಮಾಡುವುದು, ಹೆಚ್ಚು ವಿಚ್ಛೇದನ ಪ್ರಕರಣಗಳು ನಡೆಯುತ್ತಿರುವುದು ನೋವಿನ ಸಂಗತಿ. ದೇಶ ಮತ್ತು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಮಕ್ಕಳು ಹೆತ್ತವರ ಆಸೆ-ಕನಸುಗಳಿಗೆ ಮಸಿ ಬಳಿಯುವ ಕೆಲಸ ಮಾಡದೆ ಸಂಸ್ಕಾರಯುತ ಶಿಕ್ಷಣ ಪಡೆದು ಗುರು-ಹಿರಿಯರು, ಹೆತ್ತವರನ್ನು ಗೌರವಿಸಬೇಕು. ಸರ್ಕಾರಿ ಶಾಲೆಗಳು ನೈತಿಕ ಶಿಕ್ಷಣ ಕೊಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದರು.
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಪೋಷಕರು ತಮ್ಮ ಮಕ್ಕಳಲ್ಲಿನ ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ಕೊಡಿಸುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಿದ್ದು ಸಮಯವನ್ನು ಉಳಿಸಲು ಸಹಕಾರಿ ಆಗಿದ್ದು ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬ್ರಿಟಿಷರ ಆಳ್ವಿಕೆಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಅವ್ಯವಸ್ಥೆಯಾಗುವ ಸಂದರ್ಭದಲ್ಲಿ ಮಠಗಳು ಮೂಲ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ದೇಶದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಂದು ಮೂಲಭೂತ ಸೌಕರ್ಯಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದ ಕೀರ್ತಿ ವಾಜಪೇಯಿರವರಿಗೆ ಸಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಸ್ವಾತಂತ್ರ್ಯ ಹೋರಾಟಗಾರರ ಆಶಯದಂತೆ ಬ್ರಿಟಿಷರ ಪದ್ಧತಿಗಳನ್ನು ಬದಲಾವಣೆ ಮಾಡುವ ಸಲುವಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದರಿಂದಾಗಿ ಸಾಮಾಜಿಕ ಜವಾಬ್ದಾರಿಯ ಜೊತೆಗೆ ನೈತಿಕ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವು ಅಗತ್ಯವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟುಬದಲಾವಣೆ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರುಗಳನ್ನು ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಗೌರವಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ.ಸುದರ್ಶನ್, ಸಾಹಿತಿ ಸಿಡ್ಲೇಹಳ್ಳಿ ಡಾ.ಕಿರಣ್, ಹಳೆವಿದ್ಯಾರ್ಥಿ ಶಿಕ್ಷಕ ಹನುಮಂತಪ್ಪ, ಮತ್ತಿಹಳ್ಳಿ ಪಟೇಲ ಎ.ಆರ್.ಜಯಣ್ಣ, ಗುಡಿಗೌಡರು ಎಂ.ಎಂ.ರಮೇಶ್, ಗ್ರಾ.ಪಂ.ಅಧ್ಯಕ್ಷ ಚನ್ನಬಸವಯ್ಯ, ಉಪಾಧ್ಯಕ್ಷೆ ತೀರ್ಥಾವತಿ, ಸದಸ್ಯರುಗಳಾದ ಎಂ.ಪಿ.ಹರೀಶ್, ರೇಣುಕಾ, ರೂಪಾ, ಎಂ.ಡಿ.ಹರೀಶ್ ಗೌಡ, ಪಿಡಿಓ ಗೋಪಿನಾಥ್ ಮತ್ತಿತರರಿದ್ದರು.
- ವಿದ್ಯಾವಂತರಿಂದಲೇ ದೇಶ ಮತ್ತು ಸಮಾಜಕ್ಕೆ ಮಾರಕವಾಗುತ್ತಿದ್ದು, ನಾನು ಎಂಬ ಸ್ವಾರ್ಥ, ವಿದ್ಯೆ ಕಲಿತಿದ್ದೇನೆಂಬ ಆಹಂಕಾರ, ಹಣದ ವ್ಯಾಮೋಹಗಳಿಂದ ಕುಟುಂಬದಲ್ಲಿನ ಒಗ್ಗಟ್ಟು, ನಂಬಿಕೆ, ಸಾಮರಸ್ಯ ಹಾಳು
- ನಮ್ಮ ಸಂಸ್ಕೃತಿ, ಸಂಸ್ಕಾರದ ಮೇಲೂ ಪ್ರಭಾವ ಬೀರುತ್ತಿದ್ದು ಇದು ನೈತಿಕ ಅಧಃಪತನ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಕಳವಳ
- ತಾಲೂಕಿನ ಕಸಬಾ ಹೋಬಳಿ ಮತ್ತೀಹಳ್ಳಿ ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಸಮಾರಂಭ