ವಿಜಯಪುರಜಿಲ್ಲೆಯ ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವ.
ವಿಜಯಪುರ(ಫೆ.24): ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಇಂದು(ಶುಕ್ರವಾರ) ಮತ್ತೆ ಭೂಕಂಪನದ ಅನುಭವವಾಗಿದೆ. ಹೌದು, ಜಿಲ್ಲೆಯ ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಎಲ್ಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಇಂದು ರಾತ್ರಿ 10.32 ರ ಸುಮಾರಿಗೆ ಭಯಾನಕ ಕಂಪನದ ಅನುಭವವಾಗಿದೆ. ಸ್ಫೋಟದ ರೀತಿಯಲ್ಲಿ ಜೋರಾದ ಶಬ್ಧದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭಯಾನಕ ಸದ್ದಿಗೆ ಹೆದರಿ ಹೊರಗೆ ಜನರು ಮನೆ ಬಿಟ್ಟು ಓಡಿ ಬಂದಿದ್ದಾರೆ.
ಭೂಕಂಪ ಪೀಡಿತ ಟರ್ಕಿಗೆ ಪರಿಹಾರ ಕಳುಹಿಸಿ ಅ.ರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡ ಪಾಕ್
ಈ ಹಿಂದಿನಿಗಿಂತಲೂ ಅತೀ ಭಯಾನಕವಾಗಿ ಸ್ಫೋಟದ ರೀತಿಯ ಸದ್ದು ಹಾಗೂ ಕಂಪನ ಅನುಭವವಾಗಿದೆ. ಭೂಕಂಪನ ಸದ್ದಿಗೆ ಮೂಖ ಪ್ರಾಣಿಗಳೂ ಕೂಡ ಜೋರಾಗಿ ಊಳಿಟ್ಟಿವೆ ಅಂತ ತಿಳಿದು ಬಂದಿದೆ.
