ರಾಜ್ಯಕ್ಕೆ 5 ಗ್ಯಾರಂಟಿ ಕೊಟ್ಟಿದ್ದೇ ತಡ; ಬಿಜೆಪಿ ಕಮಲ ಮುದುಡಿತು, ಜೆಡಿಎಸ್ ತೆನೆ ಎಸೆದೋಯ್ತು: ಡಿ.ಕೆ. ಶಿವಕುಮಾರ್
ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜಯಗಳಿಸಿದ್ದೇ ತಡ, ಬಿಜೆಪಿಯ ಕಮಲ ಮುದುಡಿ ಹೋಯಿತು. ದಳದ ತೆನೆ ಎಸೆದೋಯ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಶಿವಮೊಗ್ಗ (ಫೆ.24): ರಾಜ್ಯದಲ್ಲಿ ಮತದಾರರು ದೊಡ್ಡ ಬದಲಾವಣೆ ತಂದಿದ್ದೀರಿ. ಹೀಗಾಗಿ, 5 ಗ್ಯಾರಂಟಿಗಳ ಫಲಾನುಭವಿಗಳು ಚಿಂತೆ ಮಾಡೋದು ಬೇಡ. ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠ ಸರ್ಕಾರವಿದೆ. ಈ ಗ್ಯಾರಂಟಿ ಯೋಜನೆಗಳು ಬರೀ 4 ವರ್ಷಕ್ಕಲ್ಲ, 9 ವರ್ಷ ಅಲುಗಾಡುವುದಿಲ್ಲ. ನಾವು ಕೊಟ್ಟ 5 ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯ್ತು. ಬಿಜೆಪಿಯ ಕಮಲ ಮುದುಡಿ ಹೋಯ್ತು. ದಳ ತೆನೆ ಎಸೆದೋಯ್ತು. ನಾವು ಈಗ ಬದುಕಿನ ಮೇಲೆ ರಾಜಕಾರಣ ಮಾಡೋಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಹೋರಾಟಗಾರರ, ಸಮಾಜವಾದಿ ಚಿಂತಕರ ನಾಡಿದು. ಈ ಬೀಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾಗೋಡು, ಬಂಗಾರಪ್ಪರ, ಶಾಂತವೇರಿಗಳ ಹೋರಾಟ ಕೇಳಿದ್ದೆವು. ಚಿಕ್ಕ ಜಿಲ್ಲೆಯಾದ್ರೂ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ನಾಡಿದು. ನಾನು ಬಂಗಾರಪ್ಪನವರ ಶಿಷ್ಯ. ನಾನಿಟ್ಟುಕೊಂಡ ಕ್ವಾಟ್ರಸ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವಿದೆ. ಬಂಗಾರಪ್ಪರ ಭೇಟಿಗೆ ಹೋಗ್ತಿದ್ದೆ. ಮಾವಿನ ಮರದ ಕೆಳಗೆ ನಾಲ್ಕು ವರ್ಷ ಕಾಯ್ತಾ ಕುತ್ಕೋತಿದ್ದೆ. ಬಂಗಾರಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ರೆವಿನ್ಯೂ ಮಿನಿಸ್ಟ್ರು ಆಗಿದ್ದರು ಎಂದರು.
ಈ ಸಮಾವೇಶಕ್ಕೆ ತಾಯಂದಿರು, ರೈತರು, ಯುವಕರು ಬಂದಿದ್ದಾರೆ. ರಾಜ್ಯದಲ್ಲಿ ದೊಡ್ಡ ಬದಲಾವಣೆ ತಂದಿದ್ದೀರಿ. ಐದು ಗ್ಯಾರಂಟಿಗಳ ಫಲಾನುಭವಿಗಳು ಚಿಂತೆ ಮಾಡೋದು ಬೇಡ. ಕಾಂಗ್ರೆಸ್ ಬಲಿಷ್ಠ ಸರ್ಕಾರವಿದೆ. ಈ ಯೋಜನೆಗಳು ಬರೀ ನಾಲಕ್ಕಲ್ಲ ಒಂಭತ್ತು ವರ್ಷ ಅಲುಗಾಡೋಲ್ಲ. ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯ್ತು. ಬಿಜೆಪಿ ಕಮಲ ಮುದುಡಿ ಹೋಯ್ತು. ದಳ ತೆನೆ ಎಸೆದೋಯ್ತು. ಬದುಕಿನ ಮೇಲೆ ರಾಜಕಾರಣ ಮಾಡೋಲ್ಲ. ಭಕ್ತಿ ಮೇಲೆ ರಾಜಕಾರಣ ಮಾಡ್ತಾರೆ. ರಾಮಂದಿರದ ಮೇಲೆ ರಾಜಕಾರಣ ಮಾಡಿದ್ರು. ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಮಾಡಿದ್ದು ರಾಜೀವ್ ಗಾಂಧಿ. ಗ್ಯಾರಂಟಿಗಳನ್ನು ಜಾತಿ ಮೇಲೆ ಕೊಟ್ಟಿಲ್ಲ. ರಾಜ್ಯದಲ್ಲಿರುವ ಕೊಳೆ, ದರಿದ್ರ ಬಡತನ ತೊಳೆಯಲು ಬೆಳಗಾಂನಲ್ಲಿ ಪಣತೊಟ್ಟಿದ್ವಿ. ಈಗ ಸಾಕ್ಷಿ ನಿಮ್ಮ ಮುಂದಿದೆ ಗೃಹಜ್ಯೋತಿ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿಕೊಡಲಿಲ್ಲ. ಆಗ ಅಕ್ಕಿಯ ಜೊತೆ ಉಳಿದಿದ್ದು ಹಣ ನೀಡಿದ್ವಿ. ಯಾರೂ ಹಸಿವಿನಿಂದ ಇರಬಾರದು.
ಡಿಸಿಎಂ ಡಿ.ಕೆ. ಶಿವಕುಮಾರ್ ಬಂಗಾರಪ್ಪನವರ ಶಿಷ್ಯ, ಬೇಳೂರು ಗೋಪಾಲಕೃಷ್ಣ ಮಾನಸ ಪುತ್ರ: ಮಧು ಬಂಗಾರಪ್ಪ
ತಾಯಂದಿರು ಪ್ರವಾಸ ಸೇರಿದಂತೆ ಎಲ್ಲದಕ್ಕೂ ಬಸ್ ಅವಲಂಭಿಸಿದ್ದಾರೆ. ಬಸ್ ವೆಚ್ಚ ಬಹಳ ಇದೆ. ಕನಿಷ್ಠ 3,000 ರೂ .ಶಕ್ತಿ ಯೋಜನೆಯಲ್ಲಿ ಉಳಿಯುತ್ತದೆ. ಎಲ್ಲದರ ಬೆಲೆ ಹೆಚ್ಚಾಗೋಗಿದೆ.ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ತಾಯಂದಿರ ಮೇಲೆ ವಿಶ್ವಾಸವಿಟ್ಟು ದರಿದ್ರ, ಸಂಕಟ ಲಕ್ಷ್ಮೀ ಹೋಗಿ ಭಾಗ್ಯದ ಲಕ್ಷ್ಮೀ ಆಗಬೇಕೆಂದು 1.10 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ನೀಡಿದ್ದೇವೆ. ಇದು ರಾಷ್ಟ್ರದಲ್ಲಿಯೇ ಮಹತ್ವದ ಯೋಜನೆಯಾಗಿದೆ ಎಂದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಒಂದೊಂದು ಶಾಲೆಗೂ ಐದೈದು ಕೋಟಿ ಹಣ ಹಾಕಿ ಅತ್ಯುತ್ತಮ ಶಿಕ್ಷಣ ನೀಡಲಿದ್ದೇವೆ. ದತ್ತು ಆಧಾರಿತ ಯೋಜನೆ ಇದು. ಎರಡ್ಮೂರು ಪಂಚಾಯತ್ ಸೇರಿಸಿ ಒಂದೊಂದು ಶಾಲೆಯ ಸ್ಥಾಪನೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ದೊಡ್ಡ ಕನಸು. ಇಂಥ ಕಷ್ಟಗಳನ್ನು ನೋಡಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಯುವನಿಧಿ ಯೋಜನೆ, ಉದ್ಯೋಗ ಸೃಷ್ಠಿಯ ಕೆಲಸ ಜಾರಿಯಲ್ಲಿದೆ. ಈ ಐದು ಬೆರಳುಗಳು ಗಟ್ಟಿಯಾಗದೇ ಯಾವ ಶಕ್ತಿಯನ್ನೂ ತುಂಬಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆ ವೇಳೆ ಒಬ್ಬ ತಾಯಿ ರಾಹುಲ್ ಗಾಂಧಿಯವರಿಗೆ ಸೌತೆಕಾಯಿ ಕೊಟ್ಟಳು. ಕಿವಿಯಲ್ಲಿ ಹೇಳಿದ್ಲು- ನಿನ್ನಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ ಇದು ಎಂದು. ಆದರೆ, ಸಂಭ್ರಮ ಕೊಟ್ಟಿದ್ದ ತಾಯಿ ಈಗಿಲ್ಲ.
ಅರಣ್ಯ ಜಮೀನು ಹಕ್ಕು ನೀಡುವ ನಿರ್ಣಯ ತೆಗೆದುಕೊಳ್ತಿದ್ದೇವೆ. ಗ್ರಾಮೀಣ ಪ್ರದೇಶದ ಅರಣ್ಯ ಜಮೀನಿನಲ್ಲಿರುವ ಬಡವರನ್ನು ಒಕ್ಕಲೆಬ್ಬಿಸಲು ಅವಕಾಶ ಕೊಡಲ್ಲ. ಶರಾವತಿ ಜಮೀನಿನ ರಕ್ಷಣೆಗೆ ಬದ್ಧತೆ ಇದೆ. ನಮ್ಮದು ಬಡತನದ ಮೇಲೆ ಯುದ್ಧ, ಬಡವರ ಮೇಲೆ ಅಲ್ಲ. ಮೂರ್ನಾಲ್ಕು ವರ್ಷ ಅಧಿಕಾರವಿದ್ದಾಗ ಯಡಿಯೂರಪ್ಪ ಏನು ಕೊಟ್ಟಿದ್ದಾರೆ. ಆರಗ ಜ್ಞಾನೇಂದ್ರಗೆ ಅರ್ಧ ಜ್ಞಾನಾನೂ ಇಲ್ಲ. ಫೋರ್ಟ್ವೆಂಟಿ ಗ್ಯಾರಂಟಿ ಅಂತೀಯಲ್ಲ. ಕೊಟ್ಟ ಕುದುರೆ ಏರದ ಬಿಜೆಪಿ ಸರ್ಕಾರ. ಯಡಿಯೂರಪ್ಪ ಸರ್ಕಾರ ಸೀರೆ, ಸೈಕಲ್ ಕೊಟ್ಟಿದ್ರು. ಸಾಲಮನ್ನಾ ಯಾವುದೂ ಮಾಡಿಲ್ಲ. ಮೋದಿ ಗ್ಯಾರಂಟಿ ಹೆಸರಲ್ಲಿ ಹರ್ಕೋತೀವಿ ಅಂತೀರಲ್ಲ ಎಂದು ಕಿಡಿ ಕಾರಿದರು.
ಕೆಆರ್‌ಎಸ್ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಅನುಮತಿ; ರೈತರಲ್ಲಿ ಆತಂಕ
ಬದುಕಿನ ಹಕ್ಕಿಗೆ ಈ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿ, ವಾರಂಟಿ, ಕ್ವಾಲಿಟಿ ಎಲ್ಲ ನಿರಂತರವಾಗಿರುತ್ತದೆ. ದೊಡ್ಡ ದೇವಸ್ಥಾನಗಳ ಸಂಗ್ರಹಿತ ಹಣದಲ್ಲಿ ಶೇ.10 ರಷ್ಟು ಹಣ ಅರ್ಚಕರಿಗೆ ನೀಡುವ ಬಿಲ್ ಕಿತ್ತೆಸೆದಿದ್ದಾರೆ ಜೆಡಿಎಸ್/ ಬಿಜೆಪಿ. ಆದರೆ, ಮೇಲ್ಮನೆಯಲ್ಲಿ ಮೂರು ತಿಂಗಳಲ್ಲಿ ಪಾಸ್ ಮಾಡಿಸಿ ಅರ್ಚಕರಿಗೆ ಶಕ್ತಿ ತುಂಬಲಿದ್ದೇವೆ. ಯಡಿಯೂರಪ್ಪರವರೇ, ವಿಜಯೇಂದ್ರರವರೇ, ನೀವೊಂದು ಕರೆಕೊಡಿ, ಗ್ಯಾರಂಟಿ ತಗೋಬೇಡಿ ಅಂತ. ನಿಮಗೇ ಗೊತ್ತಾಗುತ್ತೆ. ಗ್ಯಾರಂಟಿ ವಿಚಾರ, ಉಳುವವನಿಗೆ ಭೂಮಿ ವಿಚಾರ, ಗ್ಯಾರಂಟಿ ಯೋಜನೆಗಳಿಗೆ ಕಮಿಟಿಗಳು ಮಾಡಲಾಗಿದೆ. ರಾಷ್ಟ್ರವೇ ಗಮನಿಸುತ್ತಿದೆ. ನಾವು ಬೆವರಿನ ಶ್ರಮ ಅರ್ಥಮಾಡಿಕೊಂಡವರು. ಎಲ್ಲರ ರಕ್ತ ಕೆಂಪು. ಮಾನವ ಧರ್ಮದಿಂದ ಬದುಕಬೇಕಿದೆ. ಕಾಂಗ್ರೆಸ್ ಇತಿಹಾಸ ಎಲ್ಲರಿಗೂ ಗೊತ್ತಿದೆ. ಬೇರೆಯವರು ಯಾವ ಯೋಜನೆಗಳನ್ನೂ ತರಲಿಲ್ಲ ಎಂದರು.