ದುಬಾರೆ ಆನೆ ಶಿಬಿರದಿಂದ ತಪ್ಪಿಸಿಕೊಂಡು ಓಡಿದ್ದ ಆನೆ ಕುಶ ಬರೋಬ್ಬರಿ ಎರಡು ವರ್ಷದ ಬಳಿಕ ಪತ್ತೆಯಾಗಿದೆ.  ವಿವಿಧ ಆನೆಗಳನ್ನು ಬಳಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. 

 ಕುಶಾಲನಗರ (ಮಾ.31): ಸುಮಾರು ಎರಡು ವರ್ಷದ ಹಿಂದೆ ದುಬಾರೆ ಸಾಕಾನೆ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ತಪ್ಪಿಸಿಕೊಂಡಿದ್ದ ಕುಶ ಆನೆಯನ್ನು ಕುಶಾಲನಗರ ವಲಯದ ಮೀನುಕೊಲ್ಲಿ ಶಾಖಾ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಸೆರೆಹಿಡಿಯುವಲ್ಲಿ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಪ್ರಶಾಂತ, ಧನಂಜಯ, ಸುಗ್ರೀವ ಮತ್ತು ಲಕ್ಷ್ಮಣ ಇವುಗಳ ಸಹಾಯದಿಂದ ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಕುಶ ಆನೆಯನ್ನು ಕಾಡಾನೆಗಳ ಗುಂಪಿನಿಂದ ಬೇರ್ಪಡಿಸಿ, ಸೆರೆಹಿಡಿದು ಪ್ರಸ್ತುತ ಮೀನುಕೊಲ್ಲಿ ಶಾಖೆಯ ಸಿಬ್ಬಂದಿ ವಸತಿಗೃಹದಮೀಸಲು ಅರಣ್ಯದ ಬಳಿ ಕಟ್ಟಿಹಾಕಲಾಗಿದೆ. 2019 ನವೆಂಬರ್‌ನಲ್ಲಿ ಕುಶ ತಪ್ಪಿಸಿಕೊಂಡಿತ್ತು.

ಕೊಡಗಿನ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ: ನಿಟ್ಟುಸಿರು ಬಿಟ್ಟ ಜನತೆ ..

ಕುಶ ಆನೆಯನ್ನು ಶೀಘ್ರದಲ್ಲಿಯೇ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ದು ಮತ್ತೆ ಪಳಗಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾ​ಕಾರಿಗಳು ತಿಳಿಸಿದ್ದಾರೆ. ಕುಶ ಆನೆಯ ಸೆರೆಹಿಡಿಯುವ ಕಾರ್ಯಾಚರಣೆಯು ಇಲಾಖಾ ಪಶು ವೈದ್ಯಾಧಿಕಾರಿ ಡಾ. ಮುಜೀಬ್‌, ಉಪ ವಲಯ ಅರಣ್ಯಾಧಿ​ಕಾರಿ ಹಾಗೂ ಮೋಜಣಿದಾರರಾದ ಕೆ.ಪಿ. ರಂಜನ್‌ ಮತ್ತು ಕೆ.ಎಸ್‌. ಸುಬ್ರಾಯ ಇವರ ನೇತೃತ್ವದಲ್ಲಿ ದುಬಾರೆ ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಯವರು ಹಾಗೂ ಮೀನುಕೊಲ್ಲಿ ಶಾಖೆಯ ಸಿಬ್ಬಂದಿಗಳ ಭಾಗವಹಿಸಿದ್ದರು.