ಮಳೆ ಕೊರತೆ ಉಂಟಾಗಿರುವ ಹಿನ್ನೆಲೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. 

ಶಿಕಾರಿಪುರ (ಜು.01): ಮಳೆ ಕೊರತೆ ಉಂಟಾಗಿರುವ ಹಿನ್ನೆಲೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಂತರ್ಜಲ ಕಡಿಮೆಯಾಗಿ ನೀರು ಸಿಗದ ಕಡೆ ಟ್ಯಾಂಕರ್‌ ನೀರು ನೀಡಬೇಕು. 

ಕೃಷಿ ಬೋರ್‌​ವೆ​ಲ್‌ ಬಾಡಿಗೆ ಪಡೆಯುವುದಕ್ಕೆ ಅವಕಾಶವಿದ್ದು, ಈ ದಿಸೆಯಲ್ಲಿ ತುರ್ತು ಗಮನ ನೀಡಬೇಕು ಎಂದ ಅವರು, ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಮಾಹಿತಿ ಪಡೆದರು. ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಎದುರಾಗುವ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಅಲ್ಲದೇ, ಸೂಕ್ತ ಸಲಹೆ ನೀಡಿ, ಕಾಮಗಾರಿ ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ನೀರು, ರಸ್ತೆ, ವಿದ್ಯುತ್‌ ದೀಪ ಸೌಲಭ್ಯ ಪಡೆದುಕೊಳ್ಳುತ್ತಿರುವ ಭದ್ರಾಪುರ, ತಿಮ್ಲಾಪುರ, ದೂಪದಹಳ್ಳಿ ಗ್ರಾಮದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದರು. 

ಜಾತಿಗೊಂದು ಜಯಂತಿ ಮಾಡಿ ತಪ್ಪು ಗ್ರಹಿಕೆ ಬೇರೂರುತ್ತಿದೆ: ಶಾಸಕ ಜಿ.ಟಿ.ದೇವೇಗೌಡ

ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸೂಕ್ತ ರೀತಿ ನಿಯಂತ್ರಣ ಮಾಡಬೇಕು. ಅಪರಾಧ ಪ್ರಕರಣ ತಡೆಗಟ್ಟುವುದಕ್ಕೆ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮೆರಾಗಳ​ನ್ನು ಅಳವಡಿಸಬೇಕು ಎಂದರು. ಸಂಸದ ಬಿ.ವೈ.ರಾಘವೇಂದ್ರ, ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜು ಸಿಂಗ್‌, ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ, ಸದಸ್ಯರು, ತಾಪಂ ಇಒ ಪರಮೇಶ್‌, ಪುರಸಭೆ ಮುಖ್ಯಾಧಿಕಾರಿ ಭರತ್‌, ಎಇಇ ಮಿಥುನ್‌, ಗೃಹ ಮಂಡಳಿ ಹರೀಶ್‌ ಇತರರಿದ್ದರು.

ಪುರ​ಸಭೆ ಆಡ​ಳಿ​ತಕ್ಕೆ ಚುರುಕು ಮುಟ್ಟಿ​ಸಿದ ವಿಜ​ಯೇಂದ್ರ: ಪುರ​ಸ​ಭೆ​ ಆಡ​ಳಿತ ವಿರುದ್ಧ ಸಾರ್ವಜನಿಕರ ದೂರುಗಳ ಹಿನ್ನೆಲೆ ಗುರುವಾರ ಮಧ್ಯಾಹ್ನದ ಪುರಸಭೆ ಕಚೇರಿಗೆ ಶಾಸಕ ವಿಜಯೇಂದ್ರ ಸಾರ್ವಜನಿಕ ಸಾಕ್ಷಿ ಸಮೇತ ಆಗ​ಮಿಸಿ, ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿ ಸಿಬ್ಬಂದಿಗೆ ಕರ್ತ​ವ್ಯ​ದ​ಲ್ಲಿನ ತಪ್ಪುಗಳ ಬಗ್ಗೆ ಎಚ್ಚ​ರಿಸಿ, ಜನ​ಪರ ಸೇವೆ ಸಲ್ಲಿ​ಸ​ಲು ಖಡಕ್‌ ವಾರ್ನಿಂಗ್‌ ನೀಡಿ​ದರು.

ಇ-ಸ್ವತ್ತಿನ ವಿಳಂಬ ನೀತಿ ಬಗ್ಗೆ ಸಮಗ್ರ ಮಾಹಿತಿ ಪಡೆದ ಅವರು ಚಾಲಕ ರವಿ ಅವ​ರು ಕಳೆದ ಐದು ತಿಂಗಳ ಹಿಂದೆ ಇ-ಸ್ವತ್ತು ಸೌಲ​ಭ್ಯ​ಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ನೀಡಿಲ್ಲ. ದಾಖಲೆ ಕಳೆದುಕೊಂಡು ಎರಡು ಬಾರಿ ದಾಖಲೆ ತರಿಸಿಕೊಂಡು ಇದುವರೆಗೂ ಮಾಡಿಕೊಟ್ಟಿಲ್ಲ ಎಂಬು​ದನ್ನು ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದರು. ಆದರೆ, ಆಶ್ವಾಸನೆ ಹೊರತುಪಡಿಸಿ ಬೇರೆ ಯಾವುದೇ ಪ್ರಯೋಜನ ಆಗಿ​ರ​ಲಿಲ್ಲ ಎಂದು ಶಾಸಕರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಅವ​ರಿಗೆ ಈ ಬಗ್ಗೆ ದೂರು ನೀಡಿದ ಫಲವಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಧಾವಿಸಿದ್ದರು. ಎಷ್ಟುಹಣ ನೀಡುತ್ತೀರಿ ಎಂದು ನನ್ನನ್ನು ಕೇಳಿದರು, ಅವರ ಹೆಸರನ್ನು ಮುಖ್ಯಧಿಕಾರಿ ಗಮನಕ್ಕೆ ತರಲಾ​ಗಿತ್ತು. ಆದರೂ ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳದೇ ಪ್ರಯೋಜನವಾಗಲಿಲ್ಲ ಎಂದು ಚಾಲಕ ರವಿ ಶಾಸಕರೆದುದು ತಮ್ಮ ಅಳಲು ತೋಡಿಕೊಂಡರು. ಅಹ​ವಾಲು ಆಲಿ​ಸಿದ ಶಾಸಕ ವಿಜ​ಯೇಂದ್ರ ಅವ​ರು, ನಮ್ಮ ಹಾಗೂ ಹಿರಿಯರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಅಧಿಕಾರಿಗಳು ಮಾಡಿದ್ದೀರಿ. 

ಕಾಂಗ್ರೆಸ್‌ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ

ಇದು ಕೊನೆಯಾಗಬೇಕು. ಇನ್ಮೇಲೆ ಸಾರ್ವಜನಿಕರಿಂದ ಆಡ​ಳಿತ ವಿರುದ್ಧ ಇಂಥ ದೂರು ಬಂದರೆ ಸಹಿಸುವುದಿಲ್ಲ. ನೀವು ಯಾರ ಶಿಫಾರಸು ಮಾಡಿಸಿದರೂ ಕೇಳದೇ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗು​ತ್ತ​ದೆ ಎಂದು ಖಡಕ್‌ ವಾರ್ನಿಂಗ್‌ ಮಾಡಿದರು. ಅನಂತರ ನೀರಿನ ಸಮಸ್ಯೆ ಹಾಗೂ ಇತರ ವಿಷಯದ ಬಗ್ಗೆ ಚರ್ಚಿಸಿದ ಶಾಸ​ಕರು, ಈ ಬಗ್ಗೆ ಇದೇ 30ರಂದು ಸಭೆ ಆಯೋಜಿಸಲು ಮುಖ್ಯಾಧಿಕಾರಿ ಭರತ್‌ ಅವ​ರಿಗೆ ಸೂಚಿಸಿದರು. ಜನಸಾಮಾನ್ಯರ ಕೆಲ ದೂರುಗಳನ್ನು ಪರಿಶೀಲಿಸಿ ಸಲಹೆ ನೀಡಿದರು.