ಅಧಿಕಾರಿಗಳ ನಿರ್ಲಕ್ಷ್ಯ, ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ
ಜನರಿಗೆ ಕುಡಿಯಲು ಶುದ್ಧ ನೀರು ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ ಎದುರಾಗಿದೆ.
ವರದಿ; ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.10): ಜನರಿಗೆ ಕುಡಿಯಲು ಶುದ್ಧ ನೀರು ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ ಎದುರಾಗಿದೆ. ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳು. ಕುಡಿಯುವ ನೀರಿಗಾಗಿ ಪರದಾಡ್ತಿರುವ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಹಲವು ಬಡಾವಣೆಯ ಬಳಿ. ಬರದನಾಡೆಂಬ ಹಣೆಪಟ್ಟಿಯುಳ್ಳ ಚಿತ್ರದುರ್ಗದ ನೀರಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ನಾಗರೀಕರು ಹಾಗು ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಒದಗಿಸಲೆಂದು ನಗರಸಭೆ ಹಾಗು ಜಲ ಮಂಡಳಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಗರದಾದ್ಯಂತ ಶುದ್ಧ ನೀರಿನ ಘಟಕಗಳನ್ನು ಅಳವಡಿಸಿದೆ. ಆದ್ರೆ ಅಳವಡಿಸಿದ ಕೆಲವೇ ದಿನಗಳಲ್ಲಿ ಆ ಘಟಕಗಳು ಕೆಟ್ಟು ಹೋಗಿವೆ. ಅವುಗಳನ್ನು ರಿಪೇರಿ ಮಾಡಬೇಕಾದ ಏಜೆನ್ಸಿಗಳ ಗುತ್ತಿಗೆದಾರರು ಹಾಗು ಅಧಿಕಾರಿಗಳ ಮಾತ್ರ ತಮಗೆ ಸಂಬಂಧವಿಲ್ಲವೆಂಬಂತೆ ನಿರ್ಲಕ್ಷ್ಯ ವಹಿಸಿದ್ದಾರೆ . ಅಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲ ಫಿಲ್ಟರ್ ಗಳ ನಿರ್ವಹಣೆ ಕೂಡ ಸರಿಯಾಗಿ ಮಾಡ್ತಿಲ್ಲ.
ಹೀಗಾಗಿ ಆ ನೀರು ಸಾರ್ವಜನಿಕರ ಆರೋಗ್ಯದ ಮೇಲೆ ಬಾರಿದುಷ್ಪರಿಣಾಮ ಬೀರುತ್ತಿದೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಆ ಫಿಲ್ಟರ್ ಗಳನ್ನು ರಿಪೇರಿ ಮಾಡಬೇಕು. ಈ ಫಿಲ್ಟರ್ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Kodagu:ಬಿರುಕು ಬಿಟ್ಟ ಕಾವೇರಿ ನಾಲೆಗಳು: ನೀರು ಪೋಲಾಗಿ ಕೊನೆ ಭಾಗರದ ರೈತರ ಪರದಾಟ
ಇನ್ನು ಶುದ್ಧ ನೀರಿನ ಘಟಕಗಳಲ್ಲಿ ಸಿಹಿ ಅಂಶವನ್ನು ಹೆಚ್ಚಾಗಿಸುವ ಭರಾಟೆ ಯಲ್ಲಿ ಟಿಡಿಎಸ್ಸನ್ನು ತೀರಾ ಕಡಿಮೆ ಮಾಡಲಾಗ್ತಿದೆ ಎಂಬ ಅನುಮಾನವಿದೆ. ಆ ನೀರಲ್ಲಿ ಯಾವ್ದೇ ಖನಿಜಾಂಶವಿರುವುದಿಲ್ಲ. ಹೀಗಾಗಿ ಕನಿಷ್ಠ 200 ರಿಂದ 600 ವರೆಗೆ ಟೋಟಲ್ ಡಿಸಾಲ್ವ್ ಸಾಲ್ವೆಂಟ್ ಇರುವ ನೀರು ಮಾನವನ ದೇಹಕ್ಕೆ ಆರೋಗ್ಯಕರ ಎನಿಸಿದೆ. ಅದನ್ನು ಚಿತ್ರದುರ್ಗದ ಎಲ್ಲಾ ಘಟಕಗಳಲ್ಲಿ ಪಾಲಿಸಿದ್ರೆ ಅದು ಎಲ್ರಿಗೂ ಸೇಫ್ ಎಂದು ತಜ್ಞರಾದ ಪರಶುರಾಮ್ ರೆಡ್ಡಿ ತಿಳಿಸಿದ್ದಾರೆ.
Raichuru: ಕೆಟ್ಟುಹೋದ ಶುದ್ಧೀಕರಣ ಘಟಕ: ಕುಡಿಯಲು ಆರ್ಸೆನಿಕ್, ಫ್ಲೋರೈಡ್ ನೀರೇ ಗತಿ!
ಒಟ್ಟಾರೆ ಕೋಟೆನಾಡಲ್ಲಿ ಬೇಸಿಗೆಗೂ ಮುನ್ನವೇ ಶುದ್ಧ ಕುಡಿಯುವ ನೀರಿನ ಅಭಾವ ಶುರುವಾಗಿದೆ. .ಇನ್ನಾದ್ರು ಚಿತ್ರದುರ್ಗ ಜಿಲ್ಲಾಡಳಿತ ಎಚ್ಚೆತ್ತು,ನೀರಿನ ಅಭಾವ ಸೃಷ್ಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಜನರು ಹಾಗು ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.