Asianet Suvarna News Asianet Suvarna News

ಮುಂದಿನ ವರ್ಷಾಂತ್ಯಕ್ಕೆ 110 ಹಳ್ಳಿಗಳಿಗೆ ಕುಡಿವ ನೀರು: ಸಿಎಂ ಬೊಮ್ಮಾಯಿ

*  ಬಿಬಿಎಂಪಿಗೆ ಸೇರ್ಪಡೆ ಆದ ಹಳ್ಳಿಗಳಿಗಾಗಿ 550 ಕೋಟಿ ಯೋಜನೆ
*  ರಸ್ತೆಗಳ ನಿರ್ವಹಣೆಗೆ ಪ್ರತ್ಯೇಕ ಎಂಜಿನಿಯರ್‌ ವಿಭಾಗ
*  ಟೆಂಡರ್‌ ಶ್ಯೂರ್‌ ಹಾಗೂ ವೈಟ್‌ ಟಾಪಿಂಗ್‌ ರಸ್ತೆ ನಿರ್ಮಾಣ 

Drinking Water for 110 Villages by the End of Next Year Says CM Basavaraj Bommai grg
Author
First Published Mar 11, 2022, 4:39 AM IST

ಬೆಂಗಳೂರು(ಮಾ.11): ಬಿಬಿಎಂಪಿಗೆ(BBMP) ಸೇರ್ಪಡೆಯಾಗಿರುವ 110 ಹಳ್ಳಿಗಳಿಗ(Villages) ಕುಡಿಯುವ ನೀರು(Drinking Water) ಪೂರೈಸುವ 5500 ಕೋಟಿ ರು.ಗಳ ಯೋಜನೆಯ ಕಾಮಗಾರಿಯನ್ನು 2023ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದರು.

ಕಾಂಗ್ರೆಸ್‌(Congress) ಸದಸ್ಯ ಕೆ. ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯನ್ನು 2017-18ನೇ ಸಾಲಿನಿಂದ ಕೈಗೆತ್ತಿಕೊಂಡಿದ್ದು, ಯೋಜನಾ ವೆಚ್ಚದಲ್ಲಿ ‘ಜೈಕಾ’ ಪಾಲು ಶೇ. 84 ರಷ್ಟಿದೆ, ರಾಜ್ಯ ಸರ್ಕಾರ(Government of Karnataka) ಹಾಗೂ ಜಲಮಂಡಳಿ(Water Board) ಪಾಲು ಶೇ.8ರಷ್ಟು ಇದೆ. ನಗರಕ್ಕೆ ಕಾವೇರಿ(Kaveri) ಮೂಲದ ಜೊತೆಗೆ ಕೊಳವೆಬಾವಿ ಹಾಗೂ ಇತರ ಪರ್ಯಾಯ ಮೂಲಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವನ್ಯ ಜೀವಿಗಳ ನೀರಿನ ಸಮಸ್ಯೆಗೆ ಪರಿಹಾರ: ಬನ್ನೇರುಘಟ್ಟ ಉದ್ಯಾನಕ್ಕೆ ಕಾವೇರಿ ನೀರು

ನಗರದ ರಸ್ತೆಗಳ ನಿರ್ವಹಣೆಗೆ ಪ್ರತ್ಯೇಕ ಎಂಜಿನಿಯರ್‌ ವಿಭಾಗ

ವಿಧಾನ ಪರಿಷತ್‌: ಬೆಂಗಳೂರು(Bengaluru)  ನಗರದಲ್ಲಿ ರಸ್ತೆ ಸುಧಾರಣೆ ಮತ್ತು ನಿರ್ವಹಣೆಗೆ ಪ್ರತ್ಯೇಕ ಎಂಜಿನಿಯರ್‌ ವಿಭಾಗ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತ್ಯೇಕ ವಿಭಾಗ ರಚಿಸುವ ಬಗ್ಗೆ ಈಗಾಗಲೇ ಸಂಬಂಧಪಟ್ಟಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ, ಬೆಂಗಳೂರು ಅಭಿವೃದ್ಧಿ ಕುರಿತು ಈಗಾಗಲೇ ಎಂಟತ್ತು ಸಭೆ ನಡೆಸಲಾಗಿದೆ. ನಗರದಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ಉತ್ತಮ ರಸ್ತೆಗಳ(Road) ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಯಾವುದೇ ರಸ್ತೆ ನಿರ್ಮಾಣ ಮುನ್ನ ಲೋಕೋಪಯೋಗಿ, ಬೆಸ್ಕಾಂ(BESCOM), ಜಲಮಂಡಳಿ, ಬಿಬಿಎಂಪಿ ಸೇರಿದಂತೆ ಎಲ್ಲ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಸೂಚನೆ ನೀಡಲಾಗಿದೆ. ರಸ್ತೆ ಅಗೆಯುವ ವೇಳೆ 3-4 ಇಲಾಖೆಗಳ ಎನ್‌ಒಸಿ ಪಡೆಯುವುದು, ಭೂಸ್ವಾಧೀನ(Land Acquisition) ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಟೆಂಡರ್‌ ಶ್ಯೂರ್‌ ಹಾಗೂ ವೈಟ್‌ ಟಾಪಿಂಗ್‌ ರಸ್ತೆ ನಿರ್ಮಾಣ ಆಗುತ್ತಿರುವುದರಿಂದ ಬಹುತೇಕ ಸಮಸ್ಯೆ ನಿವಾರಣೆಯಾಗಿದೆ ಎಂದು ವಿವರಿಸಿದರು.

ವಿಜಯನಗರ: 40 ಹಳ್ಳಿಗಳಲ್ಲಿ ‘ಜೀವಜಲ’ಕ್ಕೆ ಬರ

ಹರಪನಹಳ್ಳಿ:  ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ(Rain) ಸುರಿದು ಕೆರೆ​- ಕಟ್ಟೆಗಳು ತುಂಬಿದ್ದರೂ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಇದೆ. ಆದರೆ ಪೈಪ್‌ಲೈನ್‌ ಸರಿ ಇಲ್ಲದಿರುವುದು, ಮೋಟಾರ್‌ ಅಳವಡಿಸದಿರುವುದು ಹೀಗೆ ವಿವಿಧ ಕಾರಣಗಳಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

Kaveri water: ಬೆಂಗ್ಳೂರಿಗರೇ ಗಮನಿಸಿ: ಇಂದು ನಗರದ ವಿವಿಧೆಡೆ ನೀರು ಪೂರೈಕೆ ವ್ಯತ್ಯಯ

ಚಿರಸ್ಥಹಳ್ಳಿ, ತಾಳೇದಹಳ್ಳಿ, ಹೊನ್ನೇನಹಳ್ಳಿ, ಶಿಂಗ್ರಿಹಳ್ಳಿ, ತುಂಬಿಗೇರಿ, ಹುಲ್ಲಿಕಟ್ಟಿ, ಹಾರಕನಾಳು ಸಣ್ಣ ತಾಂಡಾ, ದಡಗಾರನಹಳ್ಳಿ, ನಂದಿಬೇವೂರು ತಾಂಡಾ, ಕೊಮಾರನಹಳ್ಳಿ, ಕೂಲಹಳ್ಳಿ, ಚಿಕ್ಕಮೇಗಳಗೇರಿ, ದ್ಯಾಪನಾಯಕನಹಳ್ಳಿ, ಹರಿಯಮ್ಮನಹಳ್ಳಿ, ಕನಕನಬಸ್ಸಾಪುರ, ಅಡವಿಮಲ್ಲಾಪುರ, ಚೆನ್ನಾಪುರ, ಮಡಕಿ ನಿಚ್ಚಾಪುರ, ಸತ್ತೂರು, ಜಂಬುಲಿಂಗನಹಳ್ಳಿ, ಅಣಜಿಗೇರಿ, ಬಂಡ್ರಿ ತಾಂಡಾ ಸೇರಿದಂತೆ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ(Villages) ನೀರಿನ ಸಮಸ್ಯೆ ತಲೆದೋರಿದೆ.

ಇತ್ತೀಚೆಗೆ ಮೂರು ವಿವಿಧ ಹಳ್ಳಿಗಳಲ್ಲಿ ನಡೆದ ಕಂದಾಯ ನಡಿಗೆ ಹಳ್ಳಿ ಕಡೆಗೆ ಹಾಗೂ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಜನರು ನೀರಿನ ಸಮಸ್ಯೆ ಬಗೆಹರಿಸಿ ಎಂದು ಅಲವತ್ತುಕೊಂಡಿದ್ದಾರೆ. ಬಹಳಷ್ಟು ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ ನಿರ್ವಹಣೆ ಇಲ್ಲದೆ ನೀರು ಪೂರೈಕೆ ವ್ಯತ್ಯಯವಾಗಿ ಜನರಿಗೆ ನೀರು ಕೊಡಲಾಗುತ್ತಿಲ್ಲ. ಮನೆ ಮನೆಗೂ ನಳ ಅಳವಡಿಸುವ ಉದ್ದೇಶದಿಂದ ಸರ್ಕಾರ ಜಲಜೀವನ ಮಿಷನ್‌ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
 

Follow Us:
Download App:
  • android
  • ios