Asianet Suvarna News Asianet Suvarna News

Kaveri water: ಬೆಂಗ್ಳೂರಿಗರೇ ಗಮನಿಸಿ: ಇಂದು ನಗರದ ವಿವಿಧೆಡೆ ನೀರು ಪೂರೈಕೆ ವ್ಯತ್ಯಯ

*  ಮುಂಜಾನೆ 3ರಿಂದ ರಾತ್ರಿ 9ರವರೆಗೆ ನೀರು ಬರಲ್ಲ
*  ನೀರಿನ ಪೈಪ್‌ಲೈನ್‌ ಮಾರ್ಗ ಬದಲಾವಣೆ ಕಾಮಗಾರಿ
*  ಬೆಂಗಳೂರು ಜಲಮಂಡಳಿ ಪ್ರಕಟಣೆ 

No Water Supply in Several areas in Bengaluru on Dec29th grg
Author
Bengaluru, First Published Dec 29, 2021, 6:03 AM IST

ಬೆಂಗಳೂರು(ಡಿ.29):  ಕೆಆರ್‌ ಪುರಂ ಹಾಗೂ ತಿಪ್ಪಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಪೈಪ್‌ಲೈನ್‌(Water Pipeline) ಮಾರ್ಗ ಬದಲಾವಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ನಗರದ(Bengaluru) ಹಲವು ಬಡಾವಣೆಗಳಲ್ಲಿ ಬುಧವಾರ ಬೆಳಗಿನ ಜಾವ 3ರಿಂದ ರಾತ್ರಿ 9ರವರೆಗೆ ನೀರು ಪೂರೈಕೆಯಲ್ಲಿ(Water Supply) ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ(Bengaluru Water Board) ತಿಳಿಸಿದೆ.

ವ್ಯತ್ಯಯದ ಸ್ಥಳಗಳು: 

ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್‌ ಲೇಔಟ್‌, ಎಚ್‌ಎಂಟಿ ಬಡಾವಣೆ, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜಗೋಪಾಲ ನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಎಚ್‌ಎಂಟಿ ವಾರ್ಡ್‌, ನಂದಿನಿ ಲೇಔಟ್‌, ಆರ್‌ಆರ್‌ ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಬಡಾವಣೆ, ಜ್ಞಾನಭಾರತಿ ಲೇಔಟ್‌, ಐಡಿಯಲ್‌ ಹೋಮ್ಸ್‌, ಬಿಇಎಂಎಲ್‌ ಲೇಔಟ್‌, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆಪಿ ನಗರ 6, 7 ಮತ್ತು 8ನೇ ಹಂತ, ವಿಜಯ ಬ್ಯಾಂಕ್‌ ಲೇಔಟ್‌, ಕೂಡ್ಲು, ಅಂಜನಾಪುರ, ಬೊಮ್ಮನಹಳ್ಳಿ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ: ಚರ್ಚೆಯಾಗಲಿಲ್ಲ ಮೇಕೆದಾಟು ಯೋಜನೆ

ಕೆ.ಆರ್‌.ಪುರಂ, ರಾಮಮೂರ್ತಿ ನಗರ, ಮಹದೇವಪುರ, ಎ.ನಾರಾಯಣಪುರ, ಮಾರತ್ತಹಳ್ಳಿ, ಹೂಡಿ, ವೈಟ್‌ಫೀಲ್ಡ್‌, ನಾಗರಬಾವಿ, ಜಿಕೆವಿಕೆ, ಸಂಜಯನಗರ, ನ್ಯೂ ಬಿಇಎಲ್‌ ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌, ಎಚ್‌ಬಿಆರ್‌ ಲೇಔಟ್‌, ದೊಮ್ಮಲೂರು, ಬನ್ನೇರುಘಟ್ಟರಸ್ತೆ, ಜಂಬೂಸವಾರಿ ದಿಣ್ಣೆ, ಲಗ್ಗೆರೆ, ಶ್ರೀಗಂಧದ ಕಾವಲ್‌, ಟೆಲಿಕಾಂ ಲೇಔಟ್‌, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಓಎಂಬಿಆರ್‌, ಬೊಮ್ಮನಹಳ್ಳಿ, ಅರಕೆರೆ, ಬಿಎಚ್‌ಇಎಲ್‌ ಲೇಔಟ್‌.
ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌, ಕೊಟ್ಟಿಗೆಪಾಳ್ಯ, ಎಲ್‌ಐಸಿ ಬಡಾವಣೆ, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್‌, ನಾಯಂಡನಹಳ್ಳಿ, ಕಾಮಾಕ್ಷಿಪಾಳ್ಯ, ರಂಗನಾಥಪುರ, ಗೋವಿಂದರಾಜ ನಗರ, ಕೆಎಚ್‌ಬಿ ಕಾಲೋನಿ, ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್‌, ಮುನೇಶ್ವರ ನಗರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಕೋಗಿಲು, ಜೆಪಿ ಪಾರ್ಕ್, ಯಶವಂತಪುರ, ಸದ್ದಗುಂಟೆ ಪಾಳ್ಯ, ಕಸವನಹಳ್ಳಿ, ಕೊನೇನ ಅಗ್ರಹಾರ, ಸುಧಾಮ ನಗರ, ಮುರುಗೇಶ್‌ ಪಾಳ್ಯ, ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ಬಾಲಾಜಿ ಲೇಔಟ್‌, ಬಿಜಿಎಸ್‌ ಲೇಔಟ್‌, ಎಸ್‌ಬಿಎಂ ಕಾಲೋನಿ, ಬಿಟಿಎಸ್‌ ಬಡಾವಣೆ.

ಸಾರ್ವಭೌಮ ನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿಪುರಂ, ರಾಘವೇಂದ್ರ ಲೇಔಟ್‌, ಸಿಂಡಿಕೇಟ್‌ ಬ್ಯಾಂಕ್‌ ಕಾಲೋನಿ, ರಾಮಯ್ಯ ಲೇಔಟ್‌, ಪ್ರಗತಿ ಬಡಾವಣೆ, ಸಿಲ್ಕ್‌ಬೋರ್ಡ್‌ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮೇನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡಾನೆಕುಂದಿ, ಗರುಡಾಚಾರ್‌ಪಾಳ್ಯ, ಸಪ್ತಗಿರಿ ಲೇಔಟ್‌, ಮುನೆನಕೊಳಲು, ಇಸ್ರೋ ಲೇಔಟ್‌, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯ ನಗರ, ರಮೇಶ್‌ ನಗರ, ಅನ್ನಸಂದ್ರಪಾಳ್ಯ, ಪಟಾಲಮ್ಮ ಲೇಔಟ್‌, ಗಾಯತ್ರಿ ಬಡಾವಣೆ, ಮಂಜುನಾಥ್‌ ನಗರ, ರಾಮಾಂಜನೇಯ ಲೇಔಟ್‌, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು(Kaveri Water) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಕಾವೇರಿಗಾಗಿ ಕರ್ನಾಟಕದಿಂದ ಮತ್ತೆ ಕಾನೂನು ಸಮರ.. ನೀರು ಕೊಡಲ್ಲ!

10 ಸಾವಿರ ಲೀ. ಕಾವೇರಿ ನೀರು ಉಚಿತ!

ಉದ್ಯಾನ ನಗರಿಯ ಜನರಿಗೆ ದೆಹಲಿ ಮಾದರಿಯಲ್ಲಿ ತಿಂಗಳಿಗೆ 10 ಸಾವಿರ ಲೀಟರ್‌ ‘ಉಚಿತ ಕಾವೇರಿ ನೀರು’ ನೀಡುವುದಾಗಿ ಕಳೆದ ವರ್ಷ ಬಿಬಿಎಂಪಿ(BBMP) ತನ್ನ ಆಯವ್ಯಯದಲ್ಲಿ ಘೋಷಿಸಿತ್ತು. 

ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರ ಅಲ್ಲಿ ಜಾರಿಗೆ ತಂದಿರುವ ಬಡವರಿಗೆ ಉಚಿತ ನೀರು ಕೊಡುವ ಯೋಜನೆಯ ಮಾದರಿಯಲ್ಲಿ ಬಿಬಿಎಂಪಿ 10 ಸಾವಿರ ಲೀಟರ್‌ಗಿಂತ ಕಡಿಮೆ ನೀರು ಬಳಕೆದಾರರಿಗೆ ಉಚಿತವಾಗಿ ಕಾವೇರಿ ನೀರು ಒದಗಿಸುವುದಕ್ಕೆ 2020-21ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 43 ಕೋಟಿ ರು.ಗಳನ್ನು ಜಲಮಂಡಳಿಗೆ ಪಾವತಿಸಲು ಮೀಸಲಿಟ್ಟಿತ್ತು. 

ಈ ಯೋಜನೆಯಿಂದ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿ ಸೇರಿದಂತೆ ಸುಮಾರು 2.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ನೀರಿನ ಬಳಕೆ ಮೇಲೆ ಮಿತಿ ಹೇರುವ ಉದ್ದೇಶದಿಂದ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದ್ದು, 10 ಸಾವಿರ ಲೀಟರ್‌ಗಿಂತ ಹೆಚ್ಚಿನ ನೀರು ಬಳಕೆ ಮಾಡಿದರೆ, ಸಂಪೂರ್ಣ ನೀರಿನ ಬಿಲ್‌ ಪಾವತಿ ಮಾಡಬೇಕಾಗುತ್ತದೆ.
 

Follow Us:
Download App:
  • android
  • ios