ರಾಯಚೂರು: ಕಲುಷಿತ ನೀರು ಸೇವನೆಗೆ 5 ವರ್ಷದ ಮಗು ಸಾವು, 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ!

ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ.

Drinking contaminated water more than 30 people are seriously ill at raichur district rav

ರಾಯಚೂರು (ಮೇ.26): ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ.

ಕಳೆದೆರಡು ದಿನಗಳಿಂದ ಕಲುಷಿತ ನೀರು ಕುಡಿದು ಅಸ್ವಸ್ಥರಾಗುತ್ತಿರುವ ಗ್ರಾಮಸ್ಥರು. ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ ರೇಕಲಮರಡ ಗ್ರಾಮಸ್ಥರು ಹೈರಾಣು. ಕಳೆದೆರಡು ದಿನಗಳಿಂದ ಒಬ್ಬಬೊರಂತೆ ಅಸ್ವಸ್ಥಗೊಳ್ಳುತ್ತಿರುವ ಜನರು. ಅಸ್ವಸ್ಥಗೊಂಡವರು ನಾನಾ ಆಸ್ಪತ್ರೆಗಳಿಗೆ ದಾಖಲು. ಅರಕೇರಾ, ದೇವದುರ್ಗ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿರುವ ಜನರು. ಒಂದೆಡೆ ವಿಪರೀತ ಬಿಸಿಲು ಇನ್ನೊಂದೆಡೆ ಕಲುಷಿತ ನೀರಿನಿಂದ ಅನಾರೋಗ್ಯ ಆತಂಕದಲ್ಲಿರುವ ಕುಟುಂಬಸ್ಥರು. ಮಕ್ಕಳುಮರಿಗಳ ಜತೆಗೆ ಆಸ್ಪತ್ರೆಗೆ ದೌಡು.

ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ. ಸದ್ಯ ರೇಕಲಮರಡಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಆರೋಗ್ಯ ಇಲಾಖೆ.

ಕಲುಷಿತ ನೀರು ಸೇವನೆ ಇದೇ ಮೊದಲೇನಲ್ಲ

ಕಳೆದ ವರ್ಷ ಮೇ ತಿಂಗಳಲ್ಲಿ ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದು ಓರ್ವ ಮಹಿಳೆ ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಜಿಲ್ಲೆಯ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿರಾನಗರದ ಮಲ್ಲಮ್ಮ ಮೃತಪಟ್ಟಿದ್ದರು. ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿರುವ ಆರೋಪ ಕೇಳಿಬಂದಿತ್ತು.  ಒಟ್ಟಾರೆ ಕಲುಷಿತ ನೀರು ಕುಡಿದು ಆರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಆದರೂ ಇಂಥ ಘಟನೆಗಳು ಪದೇಪದೆ ನಡೆಯುತ್ತಿವೆ.

ಚಿಕಿತ್ಸೆ ಫಲಿಸದೆ ಬಾಲಕ ಸಾವು

ಕಲುಷಿತ ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದ ಬಾಲಕ ಹನುಮೇಶ(5) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೂವತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಅಸ್ಸ್ವಸ್ಥರನ್ನು ಅರಕೇರ, ಸಿರವಾರ, ದೇವದುರ್ಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸಿರಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಾಲಕ
 

Latest Videos
Follow Us:
Download App:
  • android
  • ios